ಚಿಕ್ಕಬಳ್ಳಾಪುರ: ತಾಲ್ಲೂಕಿನ ಬೀಡಗಾನಹಳ್ಳಿ ಬಳಿಯ ನಾರ್ಗಾರ್ಜುನ ಎಂಜಿನಿಯರಿಂಗ್ ಕಾಲೇಜು ಮುಂಭಾಗ ಯುವಕರ ಗುಂಪೊಂದು ನಂದಿಗಿರಿಧಾಮ ಠಾಣೆ ಪೊಲೀಸರ ಮೇಲೆ ಹಲ್ಲೆ ನಡೆಸಿದೆ.

ಈ ಬಗ್ಗೆ ನಂದಿಗಿರಿಧಾಮ ಠಾಣೆ ಎಎಸ್ಐ ಗಂಗರಾಜು ರಾಜೇಶ್, ಯಶ್ವಂತ್ ಇತರರ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವಿನ ಜಟಾಪಟಿಯ ವಿಡಿಯೊಗಳು ಸಾಮಾಜಿಕ ಜಾಲತಾಣ ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

ಕಾಲೇಜಿನಲ್ಲಿ ನಡೆಯುತ್ತಿರುವ ‘ಐಕ್ಯ’ ಕಾರ್ಯಕ್ರಮದ ಬಂದೋಬಸ್ತ್ ಕೆಲಸಕ್ಕೆ ನಿಯೋಜಿತರಾಗಿದ್ದೆವು. ಕಾಲೇಜು ಮುಂಭಾಗದ ಮುಖ್ಯದ್ವಾರದ ಬಳಿ ಐದರಿಂದ 10 ಹುಡುಗರ ಗುಂಪು ದ್ವಿಚಕ್ರವಾಹನಗಳಿಗೆ ಆಲ್ಟರ್ ಸೈಲೆನ್ಸರ್ ಅಳವಡಿಸಿ ಕರ್ಕಶ ಶಬ್ದ ಮಾಡುತ್ತಿದ್ದರು. ಗೇಟ್ನಲ್ಲಿದ್ದ ಭದ್ರತಾ ಸಿಬ್ಬಂದಿ ಅವರನ್ನು ಒಳಗೆ ಹೋಗಲು ಅನುಮತಿ ನಿರಾಕರಿಸಿದರು. ಆ ಹುಡುಗರು ಭದ್ರತಾ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದರು.

‘ನಾವು ಅವರಿಗೆ ಈ ಬಗ್ಗೆ ತಿಳಿಹೇಳಿ ಸ್ಥಳದಿಂದ ಕಳುಹಿಸಿದೆವು. ಅಲ್ಲಿಂದ ಸ್ವಲ್ಪ ಮುಂದೆ ಹೋಗಿ ಕರ್ಕಶ ಶಬ್ದ ಮಾಡುತ್ತ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದರು. ಮತ್ತೆ ನಾವು ಆ ಸ್ಥಳಕ್ಕೆ ತೆರಳುವಷ್ಟರಲ್ಲಿ ಎಲ್ಲ ಬೈಕ್ನವರು ತೆರಳಿದ್ದರು. ಒಂದು ಬೈಕ್ನವರು ಅಲ್ಲಿಯೇ ಇದ್ದರು. ಕರ್ಕಶ ಶಬ್ದ ಮಾಡುವುದು ಕಾನೂನು ರೀತಿ ಅಪರಾಧ ಎಂದು ತಿಳಿ ಹೇಳಿದೆವು. ಆಗ ಆಗ ಒಬ್ಬ ಹುಡುಗ ಕೆಟ್ಟ ಮಾತುಗಳಿಂದ ಬೈಯ್ಯುತ್ತ ನನ್ನ ಕೈಯಲ್ಲಿದ್ದ ಲಾಟಿ ಕಿತ್ತುಕೊಂಡ. ನನ್ನ ತಳ್ಳಾಡಿ ನೆಲದ ಮೇಲೆ ಬೀಳಿಸಿದರು. ನಂತರ ವಾಹನ ಸಮೇತ ಪರಾರಿಯಾದರು. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಕಾನೂನು ರೀತಿ ಕ್ರಮಕೈಗೊಳ್ಳಬೇಕು’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.