ಚಿಕ್ಕಬಳ್ಳಾಪುರ: ನಗರದ ಕಂದವಾರ ಬಡಾವಣೆಯಲ್ಲಿ ನಡೆದ ಪುಷ್ಪಲತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪುಷ್ಪಲತಾ ಅವರ ನಾದಿನಿ ಭವ್ಯ (ಪತಿಯ ಅಕ್ಕ) ಮತ್ತು ಆಕೆಯ ಸ್ನೇಹಿತ ಲಲ್ಲು ಬಂಧಿತರು. ಶುಕ್ರವಾರ ಬೆಳಗಿನ ಜಾವ ಈ ಹತ್ಯೆ ನಡೆದಿದ್ದು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದ್ದಾರೆ.

ನಗರದಲ್ಲಿ ಶನಿವಾರ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ‘ಹೊಸಕೋಟೆಗೆ ಭವ್ಯ ಅವರನ್ನು ವಿವಾಹ ಮಾಡಿಕೊಡಲಾಗಿತ್ತು. ಅಲ್ಲಿ ಅವರಿಗೆ ಲಲ್ಲು ಸ್ನೇಹಿತನಾಗಿದ್ದ. ಭವ್ಯ ಅವರ ಕೆಲವು ವಿಡಿಯೊ ಮತ್ತು ಫೋಟೊಗಳನ್ನು ಇಟ್ಟುಕೊಂಡು ಹಣಕ್ಕೆ ಪೀಡಿಸುತ್ತಿದ್ದ. ಭವ್ಯ ಒಮ್ಮೆ ₹4 ಲಕ್ಷ ಮತ್ತು ಮತ್ತೊಮ್ಮೆ ₹2 ಲಕ್ಷ ನೀಡಿದ್ದರು’ ಎಂದರು.

ಲಲ್ಲು ಮತ್ತೆ ಹಣಕ್ಕೆ ಒತ್ತಾಯಿಸಿದ್ದ. ಆಗ ಈ ಹತ್ಯೆಗೆ ಯೋಜನೆ ಸಿದ್ಧ ಮಾಡಿಕೊಂಡಿದ್ದರು. ಪುಷ್ಪಲತಾ ಬಳಿಯಿದ್ದ ಚಿನ್ನದ ಸರ ಕಿತ್ತುಕೊಳ್ಳುವ ಬಗ್ಗೆ ಆರೋಪಿಗಳು ನಿರ್ಧಾರ ಮಾಡಿದ್ದರು. ಪುಷ್ಪಲತಾ ಅವರ ಪತಿ, ಅತ್ತೆ ಹಾಗೂ ಕುಟುಂಬ ಸದಸ್ಯರು ದೇಗುಲಕ್ಕೆ ತೆರಳಿದ್ದರು. ಈ ಅವಧಿಯಲ್ಲಿ ಆರೋಪಿಗಳು ಹತ್ಯೆ ನಡೆಸಿದ್ದಾರೆ ಎಂದು ಹೇಳಿದರು.

ಮನೆಯಲ್ಲಿ ಯಾರೂ ಇಲ್ಲ. ನಿನ್ನ ಜೊತೆ ಇರುತ್ತೇನೆ ಎಂದು ಗುರುವಾರ ರಾತ್ರಿ ಪುಷ್ಪಲತಾ ಅವರ ಜೊತೆ ಭವ್ಯ (ಪತಿಯ ಅಕ್ಕ) ಇದ್ದಾರೆ. ಪುಷ್ಪಲತಾ ನಿದ್ದೆಗೆ ಜಾರಿದಾಗ ಆರೋಪಿ ಲಲ್ಲುವನ್ನು ಮನೆಗೆ ಕರೆಸಿಕೊಂಡಿದ್ದಾರೆ. ತಲೆ ದಿಂಬಿನಿಂದ ಪುಷ್ಪಲತಾ ಅವರ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ. ನಂತರ ಚಾಕುವಿನಿಂದ ಕುತ್ತಿಗೆ ಕತ್ತರಿಸಿದ್ದಾರೆ ಎಂದು ವಿವರಿಸಿದರು.

‘ಕೊಲೆಗಾರ ನನ್ನ ಬಾಯಿಗೆ ಬಟ್ಟೆ ತುರುಕಿದ್ದ, ಮುಖಕ್ಕೆ ಸ್ಪ್ರೇ ಹೊಡೆದಿದ್ದ ಎಂದು ಭವ್ಯ ಹೇಳಿಕೆ ನೀಡಿದ್ದರು. ಅವರ ಹೇಳಿಕೆಗಳು ಗೊಂದಲದಿಂದ ಕೂಡಿದ್ದವು. ತೀವ್ರ ವಿಚಾರಣೆಗೆ ಒಳಪಡಿಸಿದಾಗ ಹತ್ಯೆ ನಡೆಸಿದ್ದರ ಬಗ್ಗೆ ಮಾಹಿತಿ ನೀಡಿದ್ದಾರೆ. ಇಬ್ಬರೂ ಆರೋಪಿಗಳು ಹತ್ಯೆಯಲ್ಲಿ ಸಮಾನ ಭಾಗಿ. ಪುಷ್ಪಲತಾ ಅವರ ಅತ್ತೆ ಮತ್ತು ಪತಿ ಸಹ ತನಿಖೆಗೆ ಸಹಕರಿಸುತ್ತಿದ್ದಾರೆ’ ಎಂದು ಹೇಳಿದರು.

ಈ ಹತ್ಯೆಗೆ ಮತ್ತೆ ಯಾರು ಸಹಕಾರ ನೀಡಿದ್ದಾರೆ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಆರೋಪಿಗಳು ಪುಷ್ಪಲತಾ ಅವರ ಹತ್ಯೆ ಮಾಡಿ 30ರಿಂದ 40 ಗ್ರಾಂ ಚಿನ್ನದ ಸರ ಮತ್ತು ಓಲೆಯನ್ನು ಕೊಂಡೊಯ್ದಿದ್ದರು. ಅವುಗಳನ್ನು ವಶಕ್ಕೆ ಪಡೆಯಲಾಗುವುದು ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-16-1713195190

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.