ಚಿಕ್ಕಬಳ್ಳಾಪುರ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೆಲವು ಜಿಲ್ಲೆಗಳಲ್ಲಿ ರಾಗಿ ಖರೀದಿ ಇಂದಿಗೂ ನಡೆಯುತ್ತಿದೆ. ಇಂಥದ್ದರ ನಡುವೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಾಗಿ ಮಾರಾಟ ಮಾಡಿದ ಶೇ 83ರಷ್ಟು ರೈತರಿಗೆ ಈಗಾಗಲೇ ಹಣವೂ ಪಾವತಿ ಆಗಿದೆ.

ಸರ್ಕಾರವು ಡಿಬಿಟಿ (ಫಲಾನುಭವಿ ಖಾತೆಗೆ ನೇರ ಹಣ ಸಂದಾಯ) ಮೂಲಕ ರೈತರ ಖಾತೆಗಳಿಗೆ ಹಣ ಜಮೆ ಮಾಡುತ್ತಿದೆ. ಹೀಗೆ ಹಣ ಪಾವತಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನಲ್ಲಿದೆ. ರಾಗಿ ಮಾರಾಟ ಮಾಡಿದ ಶೇ 83.86ರಷ್ಟು ರೈತರ ಖಾತೆಗಳಿಗೆ ಹಣ ಜಮೆ ಆಗಿದೆ. ಶೇ 81.50 ಮೂಲಕ ನೆರೆಯ ಕೋಲಾರ ಎರಡನೇ ಸ್ಥಾನದಲ್ಲಿ ಇದೆ.

2025–26ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಒಟ್ಟು 7,392 ರೈತರು 1.57 ಲಕ್ಷ ಕ್ವಿಂಟಲ್ ರಾಗಿ ಮಾರಾಟಕ್ಕೆ ಜಿಲ್ಲೆಯಲ್ಲಿ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 7,133 ರೈತರು 1.48 ಲಕ್ಷ ಕ್ವಿಂಟಲ್ ರಾಗಿ ಮಾರಾಟ ಮಾಡಿದ್ದರು. ನೋಂದಣಿಯಾದ ರೈತರ ಪೈಕಿ ಶೇ 94.19ರಷ್ಟು ರೈತರು ರಾಗಿ ಮಾರಾಟ ಮಾಡಿದ್ದರು. ರಾಜ್ಯದಲ್ಲಿ ಅತಿ ಹೆಚ್ಚು ಖರೀದಿ ನಡೆಸಿದ ಜಿಲ್ಲೆ ಎನ್ನುವ ಹೆಗ್ಗಳಿಕೆಗೂ ಚಿಕ್ಕಬಳ್ಳಾಪುರ ಪಾತ್ರವಾಗಿದೆ.

ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್ ರಾಗಿಯನ್ನು ಸರ್ಕಾರವು ರೈತರಿಂದ ₹4,886ಕ್ಕೆ ಖರೀದಿಸಿತ್ತು. ಮೊದಲ ಹಂತದಲ್ಲಿ ಮಾರ್ಚ್ನಲ್ಲಿ 2,570 ರೈತರ ಖಾತೆಗೆ ₹27.61 ಕೋಟಿಯನ್ನು ಸರ್ಕಾರವು ಡಿಬಿಟಿ ಮೂಲಕ ಖಾತೆಗೆ ಜಮೆ ಮಾಡಿತ್ತು. ಎರಡನೇ ಹಂತದಲ್ಲಿ ಈಗ 3,360 ರೈತರ ಖಾತೆಗೆ ₹33.14 ಕೋಟಿಯನ್ನು ಜಮೆ ಮಾಡಿದೆ. ಒಟ್ಟಾರೆ ಜಿಲ್ಲೆಯಲ್ಲಿ ₹60.75 ಕೋಟಿಯನ್ನು 5,930 ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ. ಜಿಲ್ಲೆಯಲ್ಲಿ 1,203 ರೈತರಿಗೆ ₹11.69 ಕೋಟಿ ಪಾವತಿ ಮಾತ್ರ ಬಾಕಿ ಇದೆ.

ಹೀಗೆ ರಾಜ್ಯದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹಣ ಪಾವತಿಸಿದ ಜಿಲ್ಲೆಗಳ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆಯು ಮೊದಲ ಸ್ಥಾನದಲ್ಲಿ ಇದೆ.

ಯಾವ ಹಂತದಲ್ಲಿ ಎಷ್ಟು ರೈತರಿಗೆ ಹಣ: ಮೊದಲ ಹಂತದಲ್ಲಿ ಬಾಗೇಪಲ್ಲಿಯ 285 ರೈತರಿಗೆ ₹3.43 ಕೋಟಿ, ಎರಡನೇ ಹಂತದಲ್ಲಿ 104 ರೈತರಿಗೆ ₹1.13 ಕೋಟಿ, ಚಿಕ್ಕಬಳ್ಳಾಪುರ ತಾಲ್ಲೂಕಿನ 420 ರೈತರಿಗೆ ಮೊದಲ ಹಂತದಲ್ಲಿ ₹4.50 ಕೋಟಿ, ಎರಡನೇ ಹಂತದಲ್ಲಿ 719 ರೈತರಿಗೆ ₹6.18 ಕೋಟಿಯನ್ನು ಪಾವತಿಸಲಾಗಿದೆ.

ಚಿಂತಾಮಣಿ ತಾಲ್ಲೂಕಿನ 395 ರೈತರಿಗೆ ಮೊದಲ ಹಂತದಲ್ಲಿ ₹4.37 ಕೋಟಿ, ಎರಡನೇ ಹಂತದಲ್ಲಿ 443 ರೈತರಿಗೆ ₹4.02 ಕೋಟಿ, ಗೌರಿಬಿದನೂರು ತಾಲ್ಲೂಕಿನ 391 ರೈತರಿಗೆ ₹3.63 ಕೋಟಿ, ಎರಡನೇ ಹಂತದಲ್ಲಿ 375 ರೈತರಿಗೆ ₹ 3.65 ಕೋಟಿಯನ್ನು ಪಾವತಿಸಲಾಗಿದೆ. ಮೊದಲ ಹಂತದಲ್ಲಿ ಗುಡಿಬಂಡೆ ತಾಲ್ಲೂಕಿನ 550 ರೈತರಿಗೆ ₹5.84 ಕೋಟಿ, ಎರಡನೇ ಹಂತದಲ್ಲಿ 861 ರೈತರಿಗೆ ₹8.73 ಕೋಟಿ ಮತ್ತು ಶಿಡ್ಲಘಟ್ಟ ತಾಲ್ಲೂಕಿನ 529 ರೈತರಿಗೆ ಮೊದಲ ಹಂತದಲ್ಲಿ ₹5.84 ಕೋಟಿ ಮತ್ತು ಎರಡನೇ ಹಂತದಲ್ಲಿ 858 ರೈತರಿಗೆ ₹9.09 ಕೋಟಿಯನ್ನು ಪಾವತಿಸಲಾಗಿದೆ.

ಜಿಲ್ಲಾಡಳಿತ ಈ ಬಾರಿ ರಾಗಿ ಖರೀದಿ ವಿಚಾರದಲ್ಲಿ ಕೈಗೊಂಡ ಮುನ್ನೆಚ್ಚರಿಕೆ ಮತ್ತು ಮುತುವರ್ಜಿ ಕಾರಣ ಖರೀದಿ ಮತ್ತು ಬಟವಾಡೆಯಲ್ಲಿ ಚಿಕ್ಕಬಳ್ಳಾಪುರ ಮೊದಲ ಸ್ಥಾನ ಕಾಯ್ದುಕೊಂಡಿದೆ.

ಶೇ 90 ಅಥವಾ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ರಾಗಿ ಖರೀದಿ ಆಗಿರುವ ಜಿಲ್ಲೆಗಳಲ್ಲಿ ಖರೀದಿ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಲು ಸರ್ಕಾರ ಸೂಚಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಮೇ 5ಕ್ಕೆ ರಾಗಿ ಖರೀದಿ ಪ್ರಕ್ರಿಯೆ ಮುಕ್ತಾಯವಾಗಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ಇಂದಿಗೂ ಖರೀದಿ ನಡೆಯುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-16-940832655

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.