ಚಿಕ್ಕಬಳ್ಳಾಪುರ: ಶೇ 90 ಅಥವಾ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ರಾಗಿ ಖರೀದಿಯಾಗಿರುವ ಜಿಲ್ಲೆಗಳಲ್ಲಿ ಖರೀದಿ ಪ್ರಕ್ರಿಯೆಯನ್ನು 5 ರಂದು ಮುಕ್ತಾಯಗೊಳಿಸಲಾಗುತ್ತಿದೆ.

2025-26 ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ 7,392 ರೈತರು 15,742.80 ಟನ್ ರಾಗಿ ಸರಬರಾಜು ಮಾಡುವುದಾಗಿ ನೋಂದಣಿ ಮಾಡಿಸಿದ್ದರು. ಜಿಲ್ಲೆಯಲ್ಲಿ ಏ.28ಕ್ಕೆ 7,106 ರೈತರಿಂದ 14,769.45 ಟನ್ (ಶೇ 93.82) ರಾಗಿ ಖರೀದಿಸಲಾಗಿದೆ. ಉಳಿದಂತೆ 286 ರೈತರಿಂದ ರಾಗಿ ಖರೀದಿಸಲು ಬಾಕಿ ಇದೆ.

ಆದ್ದರಿಂದ ಜಿಲ್ಲೆಯಲ್ಲಿ ರಾಗಿ ಸರಬರಾಜು ಮಾಡಲು ಬಾಕಿ ಇರುವ ನೋಂದಾಯಿತ ರೈತರು ಮೇ 5ರೊಳಗೆ ಸಂಬಂಧಪಟ್ಟ ತಾಲ್ಲೂಕು ರಾಗಿ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ರಾಗಿಯನ್ನು ಸರಬರಾಜು ಮಾಡಬೇಕು. ಸದರಿ ದಿನಾಂಕದ ನಂತರ ರೈತರಿಂದ ರಾಗಿ ಖರೀದಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-16-747782689

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.