ಚಿಕ್ಕಬಳ್ಳಾಪುರ/ರಾಯಚೂರು: ರಾಜ್ಯದಲ್ಲಿ ಸಂಭವಿಸಿದ ಪ್ರತ್ಯೇಕ ಅವಘಡಗಳಲ್ಲಿ 11 ಮಂದಿ ಮೃತಪಟ್ಟಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44ರ ಅಗ್ನಿಶಾಮಕ ಠಾಣೆ ಬಳಿ ಭಾನುವಾರ ನಡೆದ ಸರಣಿ ಅಪಘಾತದಲ್ಲಿ ಆಟೊ ಚಾಲಕ ಹಾಗೂ ಐದು ಮಂದಿ ಕೂಲಿ ಕಾರ್ಮಿಕ ಮಹಿಳೆಯರು ಮೃತಪಟ್ಟಿದ್ದಾರೆ.

ಬಾಗೇಪಲ್ಲಿ ತಾಲ್ಲೂಕಿನ ಸದ್ದುಪಲ್ಲಿ ಗ್ರಾಮದ ಆಟೊ ಚಾಲಕ ಅಂಜಿನಪ್ಪ (50), ಕಾರ್ಮಿಕರಾದ ಬಾಗೇಪಲ್ಲಿ ಪಟ್ಟಣದ ಉಮಾದೇವಿ (55), ವಿಜಯಮ್ಮ (40), ಲಕ್ಷ್ಮಮ್ಮ (50), ಅರುಣಮ್ಮ (40), ವೆಂಕಟರಾಯನಪಲ್ಲಿ ಗ್ರಾಮದ ಸರೋಜಮ್ಮ (65) ಮೃತರು.

ಈ ಮಹಿಳೆಯರು ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೃಷಿ ಕೂಲಿ ಕೆಲಸ ಮುಗಿಸಿ ಆಟೊದಲ್ಲಿ ಭಾನುವಾರ ಮನೆಗಳಿಗೆ ವಾಪಸಾಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಕಾರು, ಆಟೊಗೆ ಡಿಕ್ಕಿ ಹೊಡೆದಿದೆ. ಆಟೊ ಮುಂದೆ ನಿಂತಿದ್ದ ಕಂಟೇನರ್ಗೆ ಡಿಕ್ಕಿಯಾಗಿದೆ. ಕಾರು ಮತ್ತು ಕಂಟೇನರ್ ನಡುವೆ ಸಿಲುಕಿ ಆಟೊ ನಜ್ಜುಗುಜ್ಜಾಗಿದೆ. ಕೂಲಿ ಕಾರ್ಮಿಕರು ಹೆದ್ದಾರಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡ ನಾಲ್ವರು ಮಹಿಳೆಯರನ್ನು ಚಿಕ್ಕಬಳ್ಳಾಪುರ, ಬೆಂಗಳೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ನೀರು ಪಾಲು: ರಾಯಚೂರು ಜಿಲ್ಲೆಯ ಗಡಿ ಪ್ರದೇಶವಾದ ಮಂತ್ರಾಲಯದ ಬಳಿ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಆರು ಮಂದಿಯ ಪೈಕಿ ಐವರು ಮೃತಪಟ್ಟಿದ್ದಾರೆ. ಒಬ್ಬರು ಅಪಾಯದಿಂದ ಪಾರಾಗಿದ್ದಾರೆ.

ಮೃತರನ್ನು ತೆಲಂಗಾಣದ ಹೈದರಾಬಾದ್ ನಿವಾಸಿ ವಡ್ಲ ಸತೀಶ್ (35), ಅವರ ಪುತ್ರ ಯುವನ್ ಚಂದ್ರ (5), ಮಂತ್ರಾಲಯ ನಿವಾಸಿ ರಾಘವೇಂದ್ರ (28), ಕರ್ನೂಲ್ನ ಎಮ್ಮಿಗನೂರಿನ ವಡ್ಲ ಧನುಷ್ (23), ಅನಂತಪುರ ಜಿಲ್ಲೆಯ ಉರುವಕೊಂಡ ನಿವಾಸಿ ಸಂಧ್ಯಾ (22) ಎಂದು ಗುರುತಿಸಲಾಗಿದೆ. ಯುವತಿ ಅಪರ್ಣಾ ಅಪಾಯದಿಂದ ಪಾರಾಗಿದ್ದಾರೆ.

ಇವರೆಲ್ಲರೂ ಮಂತ್ರಾಲಯದಲ್ಲಿ ಸಂಬಂಧಿಕರ ಮನೆಯಲ್ಲಿ ಭಾನುವಾರ ಏರ್ಪಡಿಸಿದ್ದ ಸತ್ಯನಾರಾಯಣ ಪೂಜೆಗೆ ಬಂದಿದ್ದರು. ಶನಿವಾರ ಮಧ್ಯಾಹ್ನ ಸ್ನಾನಕ್ಕಾಗಿ ತುಂಗಭದ್ರಾ ನದಿಗೆ ಇಳಿದಿದ್ದರು. ಈ ವೇಳೆ ಬಾಲಕ ಯುವನ್ ಚಂದ್ರ ನೀರಿನಲ್ಲಿ ಮುಳುಗುತ್ತಿದ್ದ. ಆತನ ರಕ್ಷಣೆಗೆ ಧಾವಿಸಿದ ಐವರು ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಯುವತಿ ಅಪರ್ಣಾ ಅದೋನಿ ಎಂಬವವರು ಅಪಾಯದಿಂದ ಪಾರಾಗಿದ್ದು, ತಕ್ಷಣ ಅವರು ಸ್ಥಳೀಯರು ಹಾಗೂ ಕುಟುಂಬದವರಿಗೆ ಘಟನೆ ಮಾಹಿತಿ ನೀಡಿದ್ದಾರೆ.

ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪರಿಣತ ಈಜುಗಾರರು ತೀವ್ರ ಶೋಧ ನಡೆಸಿ ಶನಿವಾರ ರಾತ್ರಿಯೇ ಧನುಷ್ ಅವರ ಮೃತದೇಹ ಪತ್ತೆ ಮಾಡಿದ್ದಾರೆ. ಭಾನುವಾರದ ಶೋಧ ಕಾರ್ಯಾಚರಣೆಯಲ್ಲಿ ಇನ್ನುಳಿದ ನಾಲ್ವರ ಮೃತದೇಹ ದೊರೆತಿವೆ ಎಂದು ಮೂಲಗಳು ಹೇಳಿವೆ. ಈ ನಡುವೆ, ನದಿಯಲ್ಲಿ ನೀರು ಪಾಲಾದವರ ಹುಡುಕಾಟದ ವೇಳೆ ಅಪರಿಚಿತ ವ್ಯಕ್ತಿಯ ಶವ ಕೂಡ ಪತ್ತೆಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-51-969909801

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.