ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರ ಹಾಗೂ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಸೋಮವಾರ ಸಂಜೆ ಕೃತಿಕಾ ಮಳೆ ಉತ್ತಮವಾಗಿ ಸುರಿಯಿತು. ಹಲವು ತಿಂಗಳುಗಳ ನಂತರ ಹೀಗೆ ಉತ್ತಮ ಮಳೆ ಕಂಡ ಚಿಕ್ಕಬಳ್ಳಾಪುರ ಜನರು ಹರ್ಷಗೊಂಡರು.

ಸುಮಾರು ಒಂದು ತಾಸು ಸುರಿದ ಮಳೆಗೆ ರಸ್ತೆಯಲ್ಲಿನ ಗುಂಡಿಗಳು, ಚರಂಡಿಗಳು ತುಂಬಿ ಹರಿದವು. ಮೊದಲ ಮಳೆ ಇಳೆಗೆ ತಂಪು ಸಹ ತಂದಿತು. ರಾತ್ರಿ 7.30ರ ಸುಮಾರಿಗೆ ಮಳೆ ನಿಂತಿತು.

ಮುಂಗಾರು ಚಟುವಟಿಕೆಗಳಿಗೆ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಳೆ ಸುರಿಯುವ ಮೂಲಕ ಕೃಷಿ ಚಟುವಟಿಕೆಗಳ ಸಿದ್ಧತೆಗೆ ಬಲ ನೀಡಿದೆ.

ಬಾಗೇಪಲ್ಲಿ: ಪಟ್ಟಣ ಮತ್ತು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಮಳೆ ಸುರಿತು. ಮಳೆ ನೀರು ರಸ್ತೆಗಳಲ್ಲಿ ಹರಿಯಿತು. ತಗ್ಗಿ ಪ್ರದೇಶಗಳು ಜಲಾವೃತಗೊಂಡವು.

ಮಳೆ ನೀರು ಚರಂಡಿಗಳಲ್ಲಿ ಹರಿದು ರಸ್ತೆಗಳ ಮೇಲೆ ಹರಿಯಿತು. ದ್ವಿಚಕ್ರ ವಾಹನಗಳ ಸವಾರರು ಮಳೆಯಿಂದ ಪರದಾಡಿದರು.

ಚಿಂತಾಮಣಿ: ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ನಗರದ ಜನರಿಗೆ ಸೋಮವಾರ ರಾತ್ರಿ ಸುರಿದ ಸಾಧಾರಣ ತುಂತರು ಮಳೆ ತಂಪೆರೆಯಿತು. ರಾತ್ರಿ ಸುಮಾರು 7ಆರಂಭವಾದ ಸೋನೆ ಮಳೆ ಸುಮಾರು ಒಂದು ಗಂಟೆ ಕಾಲ ಸುರಿಯಿತು.

ತುಂತರು ಮಳೆಯಿಂದ ನೀರು ಹರಿಯದಿದ್ದರೂ ಭೂಮಿ ತೇವವಾಗಿ ವಾತಾವರಣ ತಂಪಾಯಿತು. ಸುಮಾರು ದಿನಗಳಿಂದ ಬಿಸಿಲಿನ ಧಗೆಯಿಂದ ಚಡಪಡಿಸುತ್ತಿದ್ದ ಜನರು ಸ್ವಲ್ಪ ಕಾಲವಾದರೂ ತಂಪಿನ ವಾತಾವರಣದ ಅನುಭವ ಪಡೆದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-16-105191845

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.