ಚಿಕ್ಕಬಳ್ಳಾಪುರ: ರಾಮ ನವಮಿ ಪ್ರಯುಕ್ತ ನಗರ ಹೊರವಲಯದ ಅಂಕಣಗೊಂದಿಯ ಬಯಲು ವೀರಾಂಜನೇಯ ದೇವಾಲಯದಲ್ಲಿ ಮಾರ್ಚ್ 28ರಿಂದ ಏ.4ರವರೆಗೆ ಲೋಕ ಕಲ್ಯಾಣಾರ್ಥ ರಾಮಕೋಟಿ ಜಪಯಜ್ಞ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಸಪ್ತಾಹ ಸಮಿತಿಯ ಪುರದಗಡ್ಡೆ ಪಿ.ಎನ್.ಕೃಷ್ಣಪ್ಪ ತಿಳಿಸಿದರು.

ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಇದು 10ನೇ ವರ್ಷದ ಸಪ್ತಾಹ. ಮಂಗಳಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್.ಜಯರಾಮ್ ಜಪಯಜ್ಞ ಸಪ್ತಾಹ ನಡೆಸಿಕೊಡುವರು ಎಂದರು.

ದಿಬ್ಬೂರು ಗ್ರಾಮದ ಯೋಗಿನಾರೇಯಣ ಭಜನಾ ಮಂಡಳಿ, ಪುರದಗಡ್ಡೆ ಯೋಗಿನಾರೇಯಣ ಭಜನಾಮಂಡಳಿ, ವೀರಾಂಜನೇಯಸ್ವಾಮಿ ಭಜನಾ ಮಂಡಳಿ, ದೊಡ್ಡತಮ್ಮನಹಳ್ಳಿ, ಚಲಕಾಯಲಪರ್ತಿ, ಲಕ್ಕಿನಾಯ್ಕನಹಳ್ಳಿ ಸೇರಿ 500ಕ್ಕೂ ಅಧಿಕ ಭಜನಾ ತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ ಎಂದು ಹೇಳಿದರು.

ಸಪ್ತಾಹ ಸಮಿತಿ ಗೌರವಾಧ್ಯಕ್ಷ ಬಿ.ಎನ್.ನಾಗಭೂಷಣ್, ಉಪಾಧ್ಯಕ್ಷ ರಂಗಪ್ಪ, ನಾರಾಯಣಪ್ಪ, ಗೋಪಾಲಾಚಾರಿ, ಬ್ಯಾಂಕ್ ನಾರಾಯಣಸ್ವಾಮಿ, ಸುದರ್ಶನಾಚಾರಿ, ನರಸಿಂಹಯ್ಯ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-16-1699121082

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.