ಚಿಕ್ಕಬಳ್ಳಾಪುರ: ನಗರದ ಎಸ್ಜೆಸಿ ತಾಂತ್ರಿಕ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾದ 4ನೇ ಐಇಇಇ ನಾಲೆಡ್ಜ್ ಎಂಜಿನಿಯರಿಂಗ್ ಮತ್ತು ಕಮ್ಯುನಿಕೇಷನ್ ಸಿಸ್ಟಮ್ಸ್ (ಜ್ಞಾನ ಎಂಜಿನಿಯರಿಂಗ್ ಸಂವಹನ ವ್ಯವಸ್ಥೆಗಳು) ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಶನಿವಾರ ತೆರೆ ಬಿದ್ದಿತು.

ಪ್ರೊ. ಬಿ. ಸತೀಶ್ ಬಾಬು ಮಾತನಾಡಿ, ಎಐ ಸುಸ್ಥಿರತೆಯು ನಾವು ಹೇಗೆ ಬಳಸುತ್ತೇವೆ ಎಂಬುದರ ಮೇಲಿದೆ. ದಿನ ನಿತ್ಯ ಜೀವನದಲ್ಲಿ ಬಳಸಿಕೊಳ್ಳುವ ರೀತಿಯಲ್ಲಿರುತ್ತದೆ ಎಂದರು.

ಬಿ.ಪಿ.ಹರೀಶ್ ಮಾತನಾಡಿ, ಸಂವಹನ ವ್ಯವಸ್ಥೆ ಎಂಬುದು ಸಮಗ್ರ ವ್ಯವಸ್ಥೆಯಲ್ಲಿ ಸಂಪರ್ಕಿಸುವ ಮಾಧ್ಯಮ. ಮಾನವನ ಮಾದರಿ ಜೀವನ ಶೈಲಿಯ ಬೆಳವಣಿಗೆಗೆ, ಕಡಿಮೆ ಶಕ್ತಿ ಸಂಪನ್ಮೂಲಗಳನ್ನು ಬಳಸುವ ತಂತ್ರಜ್ಞಾನದೊಂದಿಗೆ ಗ್ರಾಮೀಣ ವ್ಯವಸ್ಥೆ, ಪರಿಸರ ಸಂರಕ್ಷಣೆಗೆ ಸಹಕಾರಿ ಆಗುತ್ತದೆ ಎಂದರು.

ಚೆಂಗಪ್ಪ, ಎಐಯನ್ನು ಜವಾಬ್ದಾರಿಯಿಂದ ಬಳಸಬೇಕು ಎಂದರು.

ಇಸ್ರೊ ವಿಜ್ಞಾನಿ ರೂಪಾ ಮಾತನಾಡಿ, ಸ್ಯಾಟಲೈಟ್ ತಂತ್ರಜ್ಞಾನವು ರೈತರು, ಬಾಹ್ಯಾಕಾಶ ಸಂಶೋಧನೆ, ಅರಣ್ಯ ರಕ್ಷಣೆ, ಮೀನುಗಾರರು ಪೋಷ್ಯನ್ ಸ್ಯಾಟ್ ಮೂಲಕ ಹೆಚ್ಚಿನ ಸಂಪಾದನೆಗೆ ಸಹಕಾರಿಯಾಗುತ್ತದೆ. ಜಾಗತಿಕ ತಾಪಮಾನ ಸೂಚನೆಗೆ ವಿವಿಧ ತಂತ್ರಜ್ಞಾನಗಳನ್ನು ರೂಪಿಸುತ್ತದೆ. ಎಐ ತಂತ್ರಜ್ಞಾನವು ದಿನನಿತ್ಯ ಜೀವನದಲ್ಲಿ ಹೆಚ್ಚು ಬಳಕೆಯಾದರೂ, ಬಹುಮುಖ್ಯ ನಿರ್ಧಾರಗಳಲ್ಲಿ ಮಾನವನ ಜ್ಞಾನ, ಚಿಂತನಗಳೇ ಹೆಚ್ಚು ಮುಖ್ಯ ಎಂದು ಪ್ರತಿಪಾದಿಸಿದರು.

ಪಿ.ನಾಗರಾಜ್ ಮಾತನಾಡಿ, ಪ್ರಸ್ತುತ ಪಠ್ಯಕ್ರಮಗಳಲ್ಲಿ ಸಂಶೋಧನಾ ಮಾದರಿಗಳನ್ನು ಹೆಚ್ಚು ಬಳಸಿದಲ್ಲಿ ಉತ್ತಮ ಸಂಶೋಧನೆಯಿಂದ ಸುಸ್ತಿರತೆ ಕಾಪಾಡುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ್ ಕೆ.ಜಿ ಮಾತನಾಡಿ, ಎಐ ತಂತ್ರಜ್ಞಾನವನ್ನು ವ್ಯವಸ್ಥಿತ ರೀತಿಯಲ್ಲಿ ಬಳಸಿ ಜ್ಞಾನ ಬೆಳವಣಿಗೆ, ಸಮಾಜಕ್ಕೆ ಪೂರಕವಾಗುವ ತಂತ್ರಜ್ಞಾನ ರೂಪಿಸಬೇಕು ಎಂದು ಹೇಳಿದರು.

ಪ್ರಾಂಶುಪಾಲ ಜಿ.ಟಿ.ರಾಜು, ಆಡಳಿತಾಧಿಕಾರಿ ರಂಗಸ್ವಾಮಿ ಜಿ.ಆರ್, ಸಂಶೋಧಕರು, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ಮತ್ತು ಉದ್ಯಮಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-16-1495117360

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.