ಚಿಕ್ಕಬಳ್ಳಾಪುರ: ನಗರದ ಎಸ್ಜೆಸಿ ತಾಂತ್ರಿಕ ವಿದ್ಯಾಲಯದಲ್ಲಿ ಏ.24 ಮತ್ತು 25ರಂದು 4ನೇ ವರ್ಷದ ಐಇಇಇ ನಾಲೆಡ್ಜ್ ಎಂಜಿನಿಯರಿಂಗ್ ಮತ್ತು ಕಮ್ಯುನಿಕೇಷನ್ ಸಿಸ್ಟಮ್ಸ್ (ಜ್ಞಾನ ಆಧಾರಿತ ಎಂಜಿನಿಯರಿಂಗ್ ಸಂವಹನ ವ್ಯವಸ್ಥೆಗಳು) ಎಂಬ ಅಂತರರಾಷ್ಟ್ರೀಯ ಸಮ್ಮೇಳನ ನಡೆಯಲಿದೆ ಎಂದು ಎಸ್ಜೆಸಿಐಟಿ ಪ್ರಾಂಶುಪಾಲ ಜಿ.ಟಿ ರಾಜು ತಿಳಿಸಿದರು.

ನಗರದಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ನಾಲ್ಕನೇ ವರ್ಷದ ಸಮ್ಮೇಳನ. ಕೃತಕ ಬುದ್ಧಿಮತ್ತೆ (ಎಐ), ಯಂತ್ರಕಲಿಕೆ, ಡೇಟಾ ಮೈನಿಂಗ್, ಜ್ಞಾನ ಅನ್ವೇಷಣೆ, ವೈರ್ಲೆಸ್ ಕಮ್ಯುನಿಕೇಷನ್ ನೆಟ್ವರ್ಕಿಂಗ್ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯಲಿವೆ ಎಂದರು.

13 ದೇಶಗಳ 365 ಸಂಶೋಧನಾ ಪ್ರಬಂಧಗಳು ಮಂಡನೆ ಆಗಲಿವೆ. ಸಮ್ಮೇಳನದಲ್ಲಿ ಮಂಡಿಸಲು ಒಟ್ಟು 1,901 ಸಂಶೋಧನಾ ಪ್ರಬಂಧಗಳು ಬಂದಿದ್ದವು. ಈ ಪೈಕಿ 365 ಪ್ರಬಂಧಗಳು ಆಯ್ಕೆಯಾಗಿವೆ. ಈ ಪ್ರಬಂಧಗಳ ಮಂಡನೆಯ ನಂತರ ಚರ್ಚೆ, ಪರಿಣತರಿಂದ ಮೌಲ್ಯಮಾಪನ ಸಹ ನಡೆಯಲಿದೆ. ನಂತರ ಪ್ರಬಂಧಗಳು ಪ್ರಕಾಶನಗೊಳ್ಳುತ್ತವೆ ಎಂದು ವಿವರಿಸಿದರು.

ಕೃತಕಬುದ್ಧಿಮತ್ತೆ, ಯಂತ್ರಕಲಿಕೆಯ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಹೊಸ ಆಲೋಚನೆಗಳನ್ನು ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಆಸಕ್ತ ಸಂಶೋಧನಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಿ ಚರ್ಚೆಯಲ್ಲಿಯೂ ಪಾಲ್ಗೊಳ್ಳಬಹುದು ಎಂದು ಹೇಳಿದರು.

ಈ ಅಂತರರಾಷ್ಟ್ರೀಯ ಸಮ್ಮೇಳನವನ್ನು 24ರಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸುವರು. ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ ಯದತಿ ನರಹರಿ ಮುಖ್ಯಭಾಷಣ ಮಾಡುವರು. ಟಿಸಿಎಸ್ನ ಹಿರಿಯ ವಿಜ್ಞಾನಿ ಪ್ರಶಾಂತ್ ಮಿಶ್ರಾ, ವಿಟಿಯು ಸಿಂಡಿಕೇಟ್ ಸದಸ್ಯ ಮಂಜುನಾಥ್ ಬಚ್ಚೇಗೌಡ ಭಾಗಿಯಾಗುವರು ಎಂದರು.

ಇಂತಹ ಸಮ್ಮೇಳನಗಳ ಮೂಲಕ ಕೃಷಿ, ವೈದ್ಯಕೀಯ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕ್ರಮಗಳನ್ನು ಕಂಡುಕೊಳ್ಳಬಹುದು. ಇದಕ್ಕೆ ನಮ್ಮ ಕಾಲೇಜು ವೇದಿಕೆ ಒದಗಿಸಿಕೊಟ್ಟಿದೆ ಎಂದರು.

ಪ್ರಾಧ್ಯಾಪಕರಾದ ರಾಜಶೇಖರ್, ಮಂಜುನಾಥ್, ಪುಷ್ಪ, ಭಾನುಮತಿ ಎಸ್. ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-18-1491672828

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.