ಚಿಕ್ಕಬಳ್ಳಾಪುರ: ಯುಗಾದಿ ಹಬ್ಬಕ್ಕೂ ಮತ್ತು ಜೂಜಾಟಕ್ಕೂ ಅವಿನಾಭಾವ ಸಂಬಂಧ. ಯುಗಾದಿಯ ದಿನ ಯಾವುದೇ ಅನುಮತಿ ಇಲ್ಲದಿದ್ದರೂ ಅಕ್ರಮವಾಗಿ ಜೂಜಾಟ ಜೋರಾಗಿಯೇ ನಡೆಯುತ್ತದೆ.

ಯುಗಾದಿ ದಿನ ಜೂಜಾಟ ಸಾಮಾನ್ಯ ಎನ್ನುವುದು ಗ್ರಾಮೀಣ ಭಾಗಗಳಲ್ಲಿ ಅಲಿಖಿತವಾದ ನಿಯಮ. ಹೀಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂಜಾಟಕ್ಕೆ ಸಂಬಂಧಿಸಿದಂತೆ ಎರಡು ದಿನಗಳಲ್ಲಿ 82 ಪ್ರಕರಣಗಳು ದಾಖಲಾಗಿವೆ. ಜೂಜಾಟದಲ್ಲಿ ತೊಡಗಿದ್ದ 475 ಮಂದಿ ಹಾಗೂ ₹ 5,90,860 ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶುಕ್ರವಾರ ಜಿಲ್ಲೆಯಲ್ಲಿ 55 ಪ್ರಕರಣಗಳು ದಾಖಲಾಗಿದ್ದು 324 ಜನರನ್ನು ಬಂಧಿಸಲಾಗಿದೆ. ಒಟ್ಟು ₹ 4,10,267 ವಶಕ್ಕೆ ಪಡೆಯಲಾಗಿದೆ. ಶನಿವಾರವೂ ಈ ಜೂಜಿನ ಪ್ರಕರಣಗಳು ಜಿಲ್ಲೆಯಲ್ಲಿ ಮುಂದುವರಿದ್ದು 27 ಪ್ರಕರಣಗಳು ದಾಖಲಾಗಿವೆ. 151 ಜನರನ್ನು ಹಾಗೂ ₹ 1,79,960 ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಎರಡು ದಿನಗಳಲ್ಲಿ ಜಿಲ್ಲೆಯ ಎಲ್ಲ ಠಾಣೆಗಳಲ್ಲಿಯೂ ಜೂಜಾಟದ ಪ್ರಕರಣಗಳು ವರದಿಯಾಗಿವೆ. ಗೌರಿಬಿದನೂರು ಗ್ರಾಮಾಂತರ ಠಾಣೆ, ಬಾಗೇಪಲ್ಲಿ ಠಾಣೆಯಲ್ಲಿ ತಲಾ 15 ಪ್ರಕರಣಗಳು ದಾಖಲಾಗಿದ್ದು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ಈ ಠಾಣೆಗಳಲ್ಲಿ ದಾಖಲಾಗಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-18-317516830

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.