ಚಿಕ್ಕಬಳ್ಳಾಪುರ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಜಿಲ್ಲೆಯಲ್ಲಿ ಭರದಿಂದ ನಡೆಯುತ್ತಿದೆ. ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಶೇ 92ರಷ್ಟು ದಾಟಿದೆ. ಉಳಿದ ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಚಾಲನೆಯಲ್ಲಿದೆ.

2025ರ ಮತದಾರರ ಪಟ್ಟಿ ಪ್ರಕಾರ ಜಿಲ್ಲೆಯಲ್ಲಿ 10.69 ಲಕ್ಷ ಮತದಾರರು ಇದ್ದಾರೆ. ಈ ಪೈಕಿ ಎಸ್ಐಆರ್ ಪ್ರಕ್ರಿಯೆಗೆ ಒಳಪಟ್ಟಿರುವ 9.92 ಲಕ್ಷ ಮತದಾರರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದ್ದಾರೆ. 2026ರ ಮೇ 18ರ ಅವಧಿಗೆ ಮ್ಯಾಪಿಂಗ್ ನಡೆದಿದೆ. ಎಸ್ಐಆರ್ ಪ್ರಕ್ರಿಯೆಯ ಕಟ್ ಆಫ್ ವರ್ಷವಾದ 2002 ಮತ್ತು ಆ ನಂತರದಲ್ಲಿ 18 ವರ್ಷ ಪೂರ್ಣವಾದ ಮತದಾರರು ಮ್ಯಾಪಿಂಗ್ನಲ್ಲಿ ದಾಖಲಾಗಿದ್ದಾರೆ.

ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಮ್ಯಾಪಿಂಗ್ ಪ್ರಕ್ರಿಯೆ ಶೇ 92 ದಾಟಿದೆ. ಜೂನ್ 16ರವರೆಗೆ ಈ ಮ್ಯಾಪಿಂಗ್ ನಡೆಯಲಿದ್ದು, ಮತ್ತಷ್ಟು ಮಂದಿ ಪ್ರಕ್ರಿಯೆಗೆ ಒಳಪಡುವರು.

ಗೌರಿಬಿದನೂರು ತಾಲ್ಲೂಕಿನಲ್ಲಿ ಶೇ 95ರಷ್ಟು ಸಾಧನೆಯ ಮೂಲಕ ಜಿಲ್ಲೆಯಲ್ಲಿ ಗರಿಷ್ಠ ಮ್ಯಾಪಿಂಗ್ ಆಗಿರುವ ವಿಧಾನಸಭಾ ಕ್ಷೇತ್ರ ಎನಿಸಿದೆ. ಜೂನ್ 16 ಈ ಪ್ರಕ್ರಿಯೆಯಡಿ ಮತದಾರರ ಮ್ಯಾಪಿಂಗ್ಗೆ ಅಂತಿಮ ಗಡುವಾದ ಕಾರಣ ಐದು ವಿಧಾನಸಭಾ ಕ್ಷೇತ್ರದಲ್ಲಿ ಉಳಿಕೆ ಮತದಾರರ ಮ್ಯಾಪಿಂಗ್ ಸಹ ವೇಗವಾಗಿ ನಡೆಯುತ್ತಿದೆ.

2002ಕ್ಕೆ ಅನ್ವಯವಾಗುವಂತೆ ಎಸ್ಐಆರ್ ಪ್ರಕ್ರಿಯೆ ಜಾರಿಗೊಳಿಸಲಾಗಿದೆ. ಅಂದು ಮತದಾರರಾಗಿದ್ದವರು ಈಗ 40ರ ಪ್ರಾಯ ದಾಟಿದ್ದಾರೆ. ಆ ಪ್ರಕಾರ 40 ವರ್ಷ ದಾಟಿದ 6,09,871 ಮತದಾರರು ಜಿಲ್ಲೆಯಲ್ಲಿ ಇದ್ದಾರೆ. ಗೌರಿಬಿದನೂರು ಕ್ಷೇತ್ರದಲ್ಲಿ 1,24,526, ಬಾಗೇಪಲ್ಲಿ ಕ್ಷೇತ್ರದಲ್ಲಿ 1,18,366, ಚಿಕ್ಕಬಳ್ಳಾಪುರ 1,17,221, ಶಿಡ್ಲಘಟ್ಟದಲ್ಲಿ 1,17,802 ಮತ್ತು ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ 1,31,957 ಮತದಾರರ ಪ್ರಾಯವು ಎಸ್ಐಆರ್ ಪ್ರಕ್ರಿಯೆಗೆ ನಿಗದಿಗೊಳಿಸಿರುವ ಕಟ್ ಆಫ್ನಲ್ಲಿದೆ.

ಹೀಗೆ 2002ಕ್ಕೆ ಅನ್ವಯವಾಗುವ 6,09,871 ಮತದಾರರು ಇದ್ದು ಇವರನ್ನು ಮ್ಯಾಪಿಂಗ್ಗೆ ಒಳಪಡಿಸಲಾಗಿದೆ. ಈ ಪೈಕಿ ಗೌರಿಬಿದನೂರು ಕ್ಷೇತ್ರದಲ್ಲಿ 1,02,405 (ಶೇ 82.24), ಬಾಗೇಪಲ್ಲಿ ಕ್ಷೇತ್ರದಲ್ಲಿ 93,740 (ಶೇ 79.2), ಚಿಕ್ಕಬಳ್ಳಾಪುರ 90,083 (ಶೇ 76.85), ಶಿಡ್ಲಘಟ್ಟದಲ್ಲಿ 87,224 (ಶೇ 74.04) ಮತ್ತು ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ 97,551 (ಶೇ 73.93) ಮತದಾರರನ್ನು ಬಿಎಲ್ಒಗಳು ಮ್ಯಾಪಿಂಗ್ಗೆ ಒಳಪಡಿಸಿದ್ದಾರೆ.

2002ರ ನಂತರ 18 ವರ್ಷ ಪೂರ್ಣವಾಗಿ ಮತಪಟ್ಟಿ ಸೇರಿದ ಮತದಾರರನ್ನೂ ಮ್ಯಾಪಿಂಗ್ಗೆ ಒಳಪಡಿಸಲಾಗಿದೆ. ಆ ಪ್ರಕಾರ ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ 1,00,720, ಬಾಗೇಪಲ್ಲಿ 97,788, ಚಿಕ್ಕಬಳ್ಳಾಪುರ 1,03,101, ಶಿಡ್ಲಘಟ್ಟ 1,06,178 ಮತ್ತು ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ 1,13,832 ಹೊಸ ಪೀಳಿಗೆಯ ಮತದಾರರನ್ನು ಮ್ಯಾಪಿಂಗ್ ಪ್ರಕ್ರಿಯೆಗೆ ಒಳಪಡಿಸಲಾಗಿದೆ.

'ಪ್ರಕ್ರಿಯೆ ಪಾರದರ್ಶಕ'

ವಿಶೇಷ ಸಮಗ್ರ ಪರಿಷ್ಕರಣೆಯು ಮತದಾರರು, ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ಆಯೋಗದ ಎಲ್ಲ ಹಂತಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಳಗೊಂಡಿರುವ ಪಾರದರ್ಶಕ ಪ್ರಕ್ರಿಯೆಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 1,293 ಮತಗಟ್ಟೆಗಳಲ್ಲಿ 1,293 ಬಿಎಲ್ಒಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪರಿಷ್ಕರಣೆ ಪ್ರಕ್ರಿಯೆ ವೇಳೆ ಬಿಎಲ್ಒ ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಿ, ಭರ್ತಿ ಮಾಡಿದ ನಂತರ ಅವುಗಳನ್ನು ಸಂಗ್ರಹಿಸುವರು ಎಂದಿದ್ದಾರೆ.

ಮತದಾರರು ಗಣತಿ ನಮೂನೆಗಳ ವಿತರಣೆ ಹಾಗೂ ಸಂಗ್ರಹಣೆಗಾಗಿ ಬಿಎಲ್ಒಗಳು ಮನೆಗೆ ಭೇಟಿ ನೀಡಿದ ವೇಳೆ ಸಾರ್ವಜನಿಕರು ಸಹಕಾರ ನೀಡಬೇಕು. ಚುನಾವಣಾ ಆಯೋಗದ ಜಾಲತಾಣ https://www.eci.gov.in, ಮುಖ್ಯ ಚುನಾವಣಾಧಿಕಾರಿ ಜಾಲತಾಣ https://ceo.karnataka.gov.in ಮತ್ತು ಜಿಲ್ಲೆಯ ಜಾಲತಾಣ https://chikkaballapur.nic.in : 2 2 2.

https://ceokarnataka.gov.in ಲಿಂಕ್ ಬಳಸಿ ನಿಮ್ಮ ವ್ಯಾಪ್ತಿ ಬಿಎಲ್ಒ ವಿವರವನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-16-446223897

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.