ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಾಲಯದ ಹುಂಡಿ ದೋಚಿದ ಕಳ್ಳರು

Last Updated 1 ಆಗಸ್ಟ್ 2019, 15:05 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಕಣಿತಹಳ್ಳಿಯಲ್ಲಿ ಬುಧವಾರ ರಾತ್ರಿ ಕಳ್ಳರು ಆಂಜನೇಯಸ್ವಾಮಿ ದೇವಾಲಯದ ಹುಂಡಿ ಕದ್ದು ಒಯ್ದು ಅದರಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದಾರೆ.


ರಾತ್ರಿ ದೇವಾಲಯದ ಒಳಗೆ ನುಗ್ಗಿದ ಕಳ್ಳರು ವಿದ್ಯುತ್ ದೀಪಗಳನ್ನು ತೆಗೆದು ಹಾಕಿ, ಹುಂಡಿಯನ್ನು ದೇವಾಲಯ ಸಮೀಪದ ನೀಲಗಿರಿ ತೋಪಿಗೆ ಹೊತ್ತು ಒಯ್ದು ಅದರಲ್ಲಿ ನೋಟುಗಳನ್ನು ತೆಗೆದುಕೊಂಡು, ಚಿಲ್ಲರೆಯನ್ನು ಹಾಗೇ ಬಿಟ್ಟು ಪರಾರಿಯಾಗಿದ್ದಾರೆ. ಬೆಳಿಗ್ಗೆ ಅರ್ಚಕರು ದೇವಾಲಯಕ್ಕೆ ಪೂಜೆಗೆ ಬಂದ ವೇಳೆ ಘಟನೆ ಬೆಳಕಿಗೆ ಬಂದಿದೆ.


‘ಎರಡು ವರ್ಷಗಳ ಹಿಂದೆ ದೇವಾಲಯ ಉದ್ಘಾಟನೆಯಾದ ದಿನದಿಂದ ಈವರೆಗೆ ಹುಂಡಿ ಕಾಸು ತೆಗೆದಿರಲಿಲ್ಲ. ಹುಂಡಿಯಲ್ಲಿ ಸುಮಾರು ₹1 ಲಕ್ಷದಷ್ಟು ಹಣವಿತ್ತು’ ಎಂದು ದೇವಾಲಯದ ಅರ್ಚಕ ನವೀನ್ ತಿಳಿಸಿದರು. ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT