ಶನಿವಾರ, ಜೂನ್ 25, 2022
25 °C

ಚಿಕ್ಕಬಳ್ಳಾಪುರ: ಭೂಮಿಯಿಂದ ಭಾರಿ ಸದ್ದು- ಬೆದರಿದ ಜನರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಪೆದ್ದತುಮಕೇಪಲ್ಲಿ ಮತ್ತು ಕದಿರಣ್ಣಗಾರಿಪಲ್ಲಿ ಗ್ರಾಮಗಳಲ್ಲಿ ಭಾನುವಾರ ರಾತ್ರಿ 9ರ ಸುಮಾರಿನಲ್ಲಿ ಭೂಮಿಯಲ್ಲಿ ಭಾರಿ ಸದ್ದು ಕೇಳಿ ಬಂದಿದೆ. ಸಣ್ಣ ಪ್ರಮಾಣದಲ್ಲಿ ಭೂಮಿಯು ನಡುಗಿದೆ. ಭಾರಿ ಸದ್ದಿಗೆ ಜನರು ಬೆದರಿದ್ದಾರೆ. 

ಈ ಪ್ರದೇಶಕ್ಕೆ ಸಮೀಪದ ಮೂರು ಭೂಕಂಪ ಮಾಪನ ಕೇಂದ್ರಗಳಿಂದ ಮಾಹಿತಿ ಸಂಗ್ರಹಿಸಿ ಪರಿಶೀಲಿಸಲಾಗಿದೆ. ಯಾವುದೇ ಭೂಕಂಪ ಸಂಭವಿಸಿಲ್ಲ. ಈ ಪ್ರದೇಶದ ಮೇಲೆ ನಿಗಾವಹಿಸಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.

ಕಳೆದ ಜನವರಿಯಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ತಾಲ್ಲೂಕಿನ ಅಡ್ಡಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸತ್ತಿಗೆರೆ, ಬೋಗಪರ್ತಿ ಮತ್ತು ಗೊಲ್ಲಹಳ್ಳಿ ಪಂಚಾಯಿತಿ ವ್ಯಾಪ್ತಿಯ ಬೀರಗಾನಹಳ್ಳಿ ಭೂಕಂಪನ ಸಂಭವಿಸಿತ್ತು. ಈ ಗ್ರಾಮಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದ ಕೆಎಸ್‌ಎನ್‌ಡಿಎಂಸಿ ಅಧಿಕಾರಿಗಳು ಮತ್ತು ಭೂ ವಿಜ್ಞಾನಿಗಳು 
 
‘ಅಂತರ್ಜಲದಲ್ಲಿ ಬದಲಾವಣೆ ಆಗುವ ವೇಳೆ ಭೂಮಿಯ ಆಳಕ್ಕೆ ನೀರು ಇಳಿಯುತ್ತದೆ. ಆದ್ದರಿಂದ ಈ ರೀತಿಯ ಭೂಕಂಪನಗಳು ಈ ಭಾಗದಲ್ಲಿ ಸಂಭವಿಸಿವೆ. ಚಿಕ್ಕಬಳ್ಳಾಪುರ ಜಿಲ್ಲೆಯು ಭೂಕಂಪದ ವಲಯದಿಂದ ಬಹುದೂರವಿದೆ. ಸುರಕ್ಷಿತ ವಲಯದಲ್ಲಿದೆ. ಭೂಕಂಪ ಸಂಭವಿಸುವ ಸಾಧ್ಯತೆಗಳು ವಿರಳವಾಗಿದೆ’ಎಂದು ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು