ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಿಂತ ಮಕ್ಕಳ ಆರೋಗ್ಯ ಮುಖ್ಯ: ಶಿಕ್ಷಣ ತಜ್ಞ ನಾರಾಯಣರೆಡ್ಡಿ

Last Updated 30 ನವೆಂಬರ್ 2020, 2:12 IST
ಅಕ್ಷರ ಗಾತ್ರ

ಚಿಂತಾಮಣಿ: ‘ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಆರೋಗ್ಯ ರಕ್ಷಣೆಯೂ ಮುಖ್ಯವಾಗಿರುವುದರಿಂದ ಸದ್ಯಕ್ಕೆ ಶಾಲೆ ತೆರೆಯದಿರುವುದು ಒಳ್ಳೆಯ ನಿರ್ಧಾರ’ ಎಂದು ಶಿಕ್ಷಣ ತಜ್ಞ ನಾರಾಯಣರೆಡ್ಡಿ ಅಭಿಪ್ರಾಯಪಟ್ಟರು.

ಕೊರೊನಾ ಎರಡನೆಯ ಅಲೆ ಬರಬಹುದು ಎಂಬ ಅಭಿಪ್ರಾಯಗಳ ಹಿನ್ನೆಲೆಯಲ್ಲಿ 1 ರಿಂದ 9 ನೇ ತರಗತಿವರೆಗೆ ಜನವರಿ ಕೊನೆಯವರೆಗೂ ಶಾಲೆಗಳನ್ನು ತೆರೆಯಬಾರದು. ಪರಿಸ್ಥಿತಿ ಅವಲೋಕಿಸಿ ಫೆಬ್ರುವರಿ, ಮಾರ್ಚ್, ಏಪ್ರಿಲ್, ಮೇ 4 ತಿಂಗಳು ಪಾಠ ಮಾಡಬಹುದು ಎಂದು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

ಶಾಲೆಗಳು ತೆರದರೂ ಕಷ್ಟ, ದೀರ್ಘಕಾಲ ಮುಚ್ಚಿದರೂ ಕಷ್ಟ ಎಂಬ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಒಂದು ವರ್ಷದ ಶಿಕ್ಷಣಕ್ಕಿಂತ ಮಕ್ಕಳ ಆರೋಗ್ಯ ಮುಖ್ಯ ಎನ್ನುವುದು ನಿಜ. ಸುಮಾರು 8 ತಿಂಗಳಿನಿಂದ ಮಕ್ಕಳು ಮನೆಯಲ್ಲಿ ಕುಳಿತು ಬೇರೆ ಬೇರೆ ರೀತಿಯ ಸಂಕಷ್ಟಗಳಿಗೆ ಈಡಾಗುತ್ತಿದ್ದಾರೆ. ಆರೋಗ್ಯ ಉಳಿಸಿಕೊಂಡು ಶಿಕ್ಷಣ ಪಡೆಯುವ ದಿಕ್ಕಿನಲ್ಲಿ ಚಿಂತನೆ ನಡೆಸಬೇಕಾಗಿದೆ ಎಂದರು.

ಆನ್‌ಲೈನ್ ತರಗತಿಗಳು ಎಲ್ಲ ಮಕ್ಕಳನ್ನು ತಲುಪುತ್ತಿಲ್ಲ. ಜತೆಗೆ ಈ ತರಗತಿಗಳನ್ನು ಬಹುತೇಕ ಮಕ್ಕಳು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಮುನ್ನೆಚ್ಚರಿಕೆ ತೆಗೆದುಕೊಂಡು ಹಂತ ಹಂತವಾಗಿ ಶಾಲೆಗಳನ್ನು ತೆರೆದು ಪಾಠ ಮುಂದುವರಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ ಎಂದು ನುಡಿದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಗೆ ಜನವರಿಯಿಂದ ಮತ್ತು 1-9ನೇ ತರಗತಿಗೆ ಫೆಬ್ರುವರಿಯಿಂದ ಶಾಲೆ ಪ್ರಾರಂಭಿಸಿ ಮೇ ತಿಂಗಳವರೆಗೂ ನಡೆಸಬಹುದು. ಪಠ್ಯವನ್ನು ಕಡಿತಗೊಳಿಸಿ 4-5 ತಿಂಗಳು ಪಾಠ ಮಾಡಿದರೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT