ಚಿಂತಾಮಣಿ: ಚಿಂತಾಮಣಿ–ಬೆಂಗಳೂರು ರಸ್ತೆ ಜ್ಯೂಸ್ ಕೇಂದ್ರದ ಮುಂಭಾಗದಲ್ಲಿ ಬುಧವಾರ ಕಾರಿನ ಹಿಂಭಾಗದ ಟೈರ್ ಸ್ಫೋಟಗೊಂಡ ಪರಿಣಾಮ ಕಾರು ಮರಕ್ಕೆ ಡಿಕ್ಕಿಹೊಡೆದಿದೆ. ಈ ಘಟನೆಯಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ನಗರದ ಕೆ.ಆರ್.ಬಡಾವಣೆ ನಿವಾಸಿಗಳಾದ ಹಿದಾಯತ್ ಉಲ್ಲಾ, ಅವರ ಪತ್ನಿ ರೂಹಿ ಫೀರ್ ದೋಸ್ ಹಾಗೂ ಮಗ ಮಹ್ಮದ್ ರುಮಾನ್ ಗಂಭೀರವಾಗಿ ಗಾಯಗೊಂಡವರು. ನಗರ ನಿವಾಸಿ ಹಿದಾಯತ್ ಉಲ್ಲಾ ಕುಟುಂಬದವರು ಬೆಂಗಳೂರಿನಿಂದ ನಗರಕ್ಕೆ ವಾಪಸ್ ಬರುತ್ತಿದ್ದರು.

ಚಿಂತಾಮಣಿ–ಬೆಂಗಳೂರು ಜೋಡಿ ರಸ್ತೆಯ ಜ್ಯೂಸ್ ಕೇಂದ್ರದ ಮುಂಭಾಗದ ಬಳಿ ಬರುತ್ತಿದ್ದಾಗ ಏಕಾಏಕಿ ಕಾರಿನ ಹಿಂಭಾಗದ ಟೈರು ಸ್ಫೋಟಗೊಂಡಿದ್ದು, ಕಾರು ಚಾಲಕನ ಹಿಡಿತ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಸ್ಥಳೀಯರು ಗಾಯಾಳುಗಳನ್ನು ಕೂಡಲೇ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದರು.

ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೂವರನ್ನು ಬೆಂಗಳೂರಿಗೆ ಕಳುಹಿಸಿದ್ದಾರೆ. ಮಕ್ಕಳಾದ ರುಹಾನ್ ಮತ್ತು ರಿಫಾ ಫಿರದೋಸ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-16-2058461126

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.