ಚಿಂತಾಮಣಿ: ಜನಗಣತಿ ಕಾರ್ಯಕ್ಕೆ ನಿಯೋಜನೆಗೊಂಡ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ತರಬೇತಿ ಕಾರ್ಯಾಗಾರವನ್ನು ಶುಕ್ರವಾರ ಹಮ್ಮಿಕೊಳ್ಳಲಾಯಿತು.

ಜಿಲ್ಲಾಧಿಕಾರಿ ಜಿ. ಪ್ರಭು ಮಾತನಾಡಿ, ‘ಜನಗಣತಿ ಕಾರ್ಯವು ಕೇವಲ ಅಂಕಿಸಂಖ್ಯೆಯನ್ನು ಕಲೆ ಹಾಕುವುದಷ್ಟೇ ಅಲ್ಲ. ಸಂಗ್ರಹಿಸುವ ಅಂಕಿ ಅಂಶಗಳ ಆಧಾರದ ಮೇಲೆ ನಮ್ಮ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಹಾಕಿಕೊಳ್ಳಲು ಇರುವ ಒಂದು ಅಡಿಪಾಯ’ ಎಂದು ಪ್ರತಿಪಾದಿಸಿದರು.

‘ಶಿಕ್ಷಣ, ಉದ್ಯೋಗ, ಮೂಲ ಸೌಕರ್ಯಗಳು, ಕೈಗಾರಿಕೀಕರಣಗಳ ಬಗ್ಗೆ ಯೋಜನೆ ರೂಪಿಸಲು ಅನುಕೂಲವಾಗುತ್ತದೆ. ಚುನಾವಣೆ ಮತ್ತು ಜನಗಣತಿ ಎರಡೂ ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ನಡೆಯುವ ಪವಿತ್ರ ಕಾರ್ಯಗಳು. ಇವುಗಳನ್ನು ಅಚ್ಚುಕಟ್ಟಾಗಿ ನೆರವೇರಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದರು.

ಅಂಕಿ ಅಂಶಗಳು ಸೋರಿಕೆಯಾಗದಂತೆ ಗೋಪ್ಯತೆ ಕಾಪಾಡುವ ಜವಾಬ್ದಾರಿ ನಿಮ್ಮ ಮೇಲೆ ಇದೆ. ಜನಗಣತಿ ಕಾರ್ಯದಲ್ಲಿ ನಿಗದಿಪಡಿಸಿದ ಪ್ರಶ್ನೆಗಳನ್ನು ಕೇಳುವ ಹಕ್ಕು ನಿಮಗಿದೆ. ಯಾರು ಕೂಡ ನಿರಾಕರಿಸುವಂತಿಲ್ಲ. ಗಣತಿ ಕಾರ್ಯವು ಸಾಂವಿಧಾನಿಕ ಕಾರ್ಯವಾಗಿದ್ದು, ಗಣತಿದಾರರು ಪ್ರಶ್ನೆ ಕೇಳಿದಾಗ ಸಾರ್ವಜನಿಕರು ಪ್ರಶ್ನೆಗಳಿಗೆ ಉತ್ತರ ನಿರಾಕರಿಸದೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ತಹಶೀಲ್ದಾರ ಸುದರ್ಶನ್ ಯಾದವ್, ಕೈವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರವೀಂದ್ರ ಜಯಗೊಂಡ, ಮಾಸ್ಟರ್ ಟ್ರೇನರ್ ಮಂಜುನಾಥ್, ಶಂಕರ್ ನೋಡಲ್ ಅಧಿಕಾರಿ ರವಿ, ಗಣತಿದಾರರು ಮತ್ತು ಮೇಲ್ವಿಚಾರಕರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-16-905884956

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.