ಚಿಂತಾಮಣಿ: ತಾಲ್ಲೂಕಿನ ಪೆದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಗವಕೋಟೆ ಗ್ರಾಮದಲ್ಲಿ ವಿವಿಧ ಗ್ರಾಮಗಳ ಗ್ರಾಮಸ್ಥರ ಸಮ್ಮುಖದಲ್ಲಿ ಅಲಂಕೃತಗೊಂಡ ಲಕ್ಷ್ಮಿನರಸಿಂಹ ರಥೋತ್ಸವವು ಸೋಮವಾರ ಅದ್ದೂರಿಯಾಗಿ ಜರುಗಿತು.

ದಿಗವಕೋಟೆಯ ಲಕ್ಷ್ಮಿನರಸಿಂಹ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯವನ್ನು ವಿವಿಧ ಪುಷ್ಪ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಯಾವುದೇ ರೀತಿಯ ದೋಷಗಳಿದ್ದರೂ ಅವುಗಳನ್ನು ನಿವಾರಣೆ ಮಾಡುವ ಶಕ್ತಿಯನ್ನು ಲಕ್ಷ್ಮಿನರಸಿಂಹ ದೇವರು ಹೊಂದಿದ್ದಾನೆ ಎಂಬುದು ಈ ಭಾಗದ ಜನರ ನಂಬಿಕೆ. ದಿಗವಕೋಟೆ ಸುತ್ತಮುತ್ತಲಿನ ಗ್ರಾಮಸ್ಥರು ರಥೋತ್ಸವದಲ್ಲಿ ಭಾಗವಹಿಸಿ ತೇರನ್ನು ಎಳೆದರು.

ವಿಜಯನಗರದ ಪಾಳೆಗಾರರಾದ ಪೋಲನಾಯಕ ಮತ್ತು ಕದಿರಿನಾಯಕ ಆಳ್ವಿಕೆ ವೇಳೆ ದೇವಾಲಯ ಪ್ರತಿಷ್ಠಾಪನೆಯಾಗಿದೆ.

ರಥೋತ್ಸವಕ್ಕೆ ಬಂದ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಗ್ರಾಮದವರು ಪಾನಕ, ಕೋಸಂಬರಿ ಇತ್ಯಾದಿಗಳನ್ನು ವಿತರಿಸಿದರು. ಬಟ್ಲಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ಪ್ರಕಾಶ್ ಮತ್ತು ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಮಾಡಿದ್ದರು.

ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ಮಲ್ಲಿಕಾರ್ಜುನಗೌಡ, ಖಜಾಂಚಿ ಗೋಪಾಲರೆಡ್ಡಿ, ಆಂತರಿಕ ಲೆಕ್ಕ ಪರಿಶೋಧಕ ರಾಜಣ್ಣ, ಮೇಲ್ವಿಚಾರಕ ನಾರಾಯಣಸ್ವಾಮಿ, ನಿರ್ದೇಶಕ ಎನ್.ರ್ರಪ್ಪರೆಡ್ಡಿ, ಎಸ್. ಮಹದೇವರೆಡ್ಡಿ, ನರಸಿಂಹಪ್ಪ ಬೇಲ್ದಾರ್, ನರಸಿಂಹಮೂರ್ತಿ, ನರೇಶ್, ಬೈಯಣ್ಣಗಾರಿ ನರಸಿಂಹಪ್ಪ, ನೆಲವಂಕಿ ರತ್ನಮ್ಮ, ಆರ್.ನರಸಿಂಹಮೂರ್ತಿ, ಶ್ರೀರಾಮಗೌಡ, ಕಣ್ಣಭಟ್ಟರ್, ಎಸ್. ಯಶ್ವಂತಾಚಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.