ಚಿಂತಾಮಣಿ: ಸರ್ಕಾರದ ಹಲವು ಯೋಜನೆಗಳ ನಡುವೆಯೂ, ಮಕ್ಕಳ ದಾಖಲಾತಿ ಕೊರತೆಯಿಂದ ಕೆಲವೆಡೆ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಮತ್ತೊಂದೆಡೆ ಹಲವು ಶಾಲೆಗಳು ಮೂಲಸೌಕರ್ಯದ ಸಮಸ್ಯೆ ಎದುರಿಸುತ್ತಿವೆ.

ಕೆಲವು ಶಾಲೆಗಳಲ್ಲಿ ಕೊಠಡಿಗಳ ಕೊರತೆ, ಶಿಥಿಲ ಕಟ್ಟಡ, ಶೌಚಾಲಯಗಳ ದುಃಸ್ಥಿತಿ, ಆಟದ ಮೈದಾನ, ಕುಡಿಯುವ ನೀರಿನ ಘಟಕ ಸಮಸ್ಯೆ, ಶಾಲೆಗಳ ಸುತ್ತಮುತ್ತಲಿನ ವಾತಾವರಣ ಇತರೆ ಸಮಸ್ಯೆಗಳಿಂದ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸಿಗುತ್ತಿಲ್ಲ. ಇಂತಹ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ದಾಖಲಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.

ತಾಲ್ಲೂಕಿನ 334 ಸರ್ಕಾರಿ ಶಾಲೆಗಳ ಪೈಕಿ 136 ಶಾಲೆಗಳಲ್ಲಿ ಶೌಚಾಲಯಗಳಿಲ್ಲ. ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿಯೂ ಶೌಚಾಲಯಗಳಿಲ್ಲ. ವಿದ್ಯಾರ್ಥಿಗಳು ಶೌಚಕ್ಕಾಗಿ ಹೊರಗಡೆ ಹೋಗುವುದು ತಪ್ಪಿಲ್ಲ.

ಕೈವಾರದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲೆ ಮತ್ತು ಪಿಯು ವಿಭಾಗದಲ್ಲಿ 100 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಆಟವಾಡಲು ಒಂದು ಅಡಿ ಜಾಗವಿಲ್ಲ. ಕ್ರೀಡೆ ಶಿಕ್ಷಣದ ಅವಿಭಾಜ್ಯ ಅಂಗ. ಆದರೆ, ಮಕ್ಕಳು ಆಟೋಟಗಳಿಗೆ ಜಾಗವಿಲ್ಲದಿದ್ದರಿಂದ ಬೇರೆ ಕಡೆ ಹೋಗಬೇಕಿದೆ. ಮುಖ್ಯ ರಸ್ತೆಗೆ ಹೊಂದಿಕೊಂಡು ಶಾಲೆ ಇರುವುದರಿಂದ, ಸದಾ ವಾಹನಗಳ ಕಿರಿಕಿರಿ ಮಕ್ಕಳ ಪಾಠ–ಪ್ರವಚನಕ್ಕೆ ತೊಂದರೆ ಆಗುತ್ತಿದೆ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

150 ಶಾಲೆಗಳಲ್ಲಿ ಆಟದ ಮೈದಾನವೇ ಇಲ್ಲ. ಶಾಲೆ ತೆರೆಯಬೇಕಾದರೆ ಇಂತಿಷ್ಟು ವಿಸ್ತೀರ್ಣದ ಆಟದ ಮೈದಾನವಿರಬೇಕು ಎಂಬ ಷರತ್ತಿದೆ. ಆದರೂ ಮೈದಾನವಿಲ್ಲ. 38 ಶಾಲೆಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳು ಇಲ್ಲ. ಕೆಲವು ಕಡೆ ಮಕ್ಕಳಿಗೆ ಕೂರಲು ಪೀಠೋಪಕರಣಗಳ ವ್ಯವಸ್ಥೆಯಿಲ್ಲದೆ ನೆಲದ ಮೇಲೆ ಕೂರಬೇಕಾಗಿದೆ. 260 ಶಾಲೆಗಳಲ್ಲಿ 2,586 ಬೆಂಚ್ ಮತ್ತು ಡೆಸ್ಕ್ಗಳ ಕೊರತೆ ಇದೆ.

ಶಿಕ್ಷಣ ಇಲಾಖೆಯ ಮಾಹಿತಿಯಂತೆ ತಾಲ್ಲೂಕಿನಲ್ಲಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳು ಸೇರಿ ಒಟ್ಟು 334 ಸರ್ಕಾರಿ ಶಾಲೆಗಳಿವೆ. 1,499 ಕೊಠಡಿಗಳಿದ್ದು, ಅದರಲ್ಲಿ 945 ಮಾತ್ರ ಸುಸ್ಥಿತಿಯಲ್ಲಿವೆ. 554 ಕೊಠಡಿಗಳು ದುರಸ್ತಿಗೆ ಕಾದಿವೆ. ಕೊಠಡಿಗಳ ಕೊರತೆಯಿಂದ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ.

ತಾಲ್ಲೂಕಿನಲ್ಲಿ 15ಕ್ಕೂ ಹೆಚ್ಚು ಶತಮಾನ ಕಂಡ ಶಾಲೆಗಳಿವೆ. ಅವುಗಳಲ್ಲಿ ತುಂಬಾ ಶಿಥಿಲಗೊಂಡಿದ್ದು, ಅಪಾಯದ ಸ್ಥಿತಿಯಲ್ಲಿರುವ 199 ಕೊಠಡಿಗಳನ್ನು ನೆಲಸಮಗೊಳಿಸಬೇಕಿದೆ. ಹೊಸದಾಗಿ 76 ಕೊಠಡಿಗಳ ಅವಶ್ಯಕತೆ ಇದೆ. ವಿಶೇಷವಾಗಿ ಆಂಧ್ರಪ್ರದೇಶದ ಗಡಿ ಭಾಗದಲ್ಲಿರುವ ಶಾಲೆಗಳು ಮೂಲಸೌಲಭ್ಯಗಳಿಲ್ಲದೆ ಸೊರಗುತ್ತಿವೆ.

ಸುಮಾರು 87 ಶಾಲೆಗಳಿಗೆ ಇದುವರೆಗೂ ಆವರಣಗೋಡೆಯೇ ನಿರ್ಮಾಣವಾಗಿಲ್ಲ. ಸ್ವಚ್ಛತೆ ಕಾಪಾಡುವುದು ಶಿಕ್ಷಕರಿಗೆ ಸವಾಲಾಗಿದೆ. ಶಾಲೆ ಮುಕ್ತಾಯವಾದ ಕೂಡಲೇ ದನಕರುಗಳು ನುಗ್ಗಿ ಬೆಳೆಸಿರುವ ಗಿಡಗಳನ್ನು ಹಾಳು ಮಾಡುತ್ತಿವೆ. ಕೆಲವು ಕಡೆ ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳಿಗೆ ಆಸ್ಪದವಾಗಿದೆ.

ಪ್ರಾಥಮಿಕ ಶಾಲೆಗಳಲ್ಲಿ 883 ಮಂಜೂರಾದ ಶಿಕ್ಷಕರ ಹುದ್ದೆಗಳಿದ್ದು, 789 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 94 ಶಿಕ್ಷಕರ ಕೊರತೆ ಇದೆ. ಪ್ರೌಢಶಾಲೆಗಳಲ್ಲಿ ಶಿಕ್ಷಕರ 227 ಮಂಜೂರಾತಿ ಹುದ್ದೆಗಳಿದ್ದು, 158 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 69 ಹುದ್ದೆಗಳು ಖಾಲಿ ಇವೆ. 264 ನಲಿ-ಕಲಿ ಶಾಲೆಗಳಿದ್ದು, 243 ಶಾಲೆಗಳಲ್ಲಿ ತರಬೇತಿ ಪಡೆದ ಶಿಕ್ಷಕರಿದ್ದು, 21 ಶಿಕ್ಷಕರ ಕೊರತೆ ಇದೆ.

ಸೌಲಭ್ಯ ಇಲ್ಲದಿರುವ ಕಡೆ ಪರ್ಯಾಯ ಸೌಕರ್ಯ ಒದಗಿಸಲಾಗಿದೆ. ಯಾವುದೇ ಕೊರತೆ ಇಲ್ಲದೆ ವಿದ್ಯಾರ್ಥಿಗಳು ಶಾಲೆಗಳಿಗೆ ಹಾಜರಾಗಿ ಕಲಿಯುತ್ತಿದ್ದಾರೆ. ದಾಖಲಾತಿ ಆಂದೋಲನ ಸಹ ಪ್ರಗತಿಯಲ್ಲಿದೆ
ಎ.ಸಿ.ನಾರಾಯಣಸ್ವಾಮಿ, ಬಿಇಒ

ಮೂಲಸೌಲಭ್ಯ ಹಾಗೂ ಗುಣಮಟ್ಟದ ಶಿಕ್ಷಣದ ಕೊರತೆಯಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳು ದಾಖಲಾಗದೆ ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಮೂಲಸೌಲಭ್ಯ ಒದಗಿಸುವ ಆಂದೋಲನ ರೂಪಿಸಬೇಕು ಆನಂದ್, ಶಿಕ್ಷಣಪ್ರೇಮಿ, ಕೈವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.