ಚಿಂತಾಮಣಿ: ತಾಲ್ಲೂಕಿನ 35 ಗ್ರಾಮ ಪಂಚಾಯಿತಿಗಳಿಂದ (ಚೇಳೂರು ತಾಲ್ಲೂಕಿನ 3 ಗ್ರಾಮ ಪಂಚಾಯಿತಿಗಳು ಸೇರಿ) ಫೆಬ್ರುವರಿ ಅಂತ್ಯಕ್ಕೆ ₹172.23 ಕೋಟಿಯಷ್ಟು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ ಎಂದು ಬೆಸ್ಕಾಂ ತಿಳಿಸಿದೆ.

ನಿಯಮದ ಪ್ರಕಾರ ಕ್ರಮ ಕೈಗೊಂಡರೆ ಸಾರ್ವಜನಿಕರ ಕುಡಿಯುವ ನೀರು, ಬೀದಿದೀಪ ಸೇರಿದಂತೆ ಇನ್ನಿತರ ಸೌಲಭ್ಯಗಳಿಗೆ ತೊಂದರೆಯಾಗಲಿದೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.

ಈ ಪ್ರಕಾರ, ಹಿರೇಕಟ್ಟಿಗೇನಹಳ್ಳಿ ಗ್ರಾಮ ಪಂಚಾಯಿತಿ ₹7.85 ಕೋಟಿ, ಸಂತೇಕಲ್ಲಹಳ್ಳಿ ಗ್ರಾ.ಪಂ ₹7.62 ಕೋಟಿ, ನಂದಿಗಾನಹಳ್ಳಿ ₹7.51 ಕೋಟಿ, ಮುನುಗನಹಳ್ಳಿ ಗ್ರಾ.ಪಂ ₹7.20 ಕೋಟಿ, ಉಪ್ಪರಪೇಟೆ ಗ್ರಾ.ಪಂ. ₹6.80 ಕೋಟಿಯಷ್ಟು ಅಂದರೆ, ಅತಿಹೆಚ್ಚು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ.

ಬಟ್ಲಹಳ್ಳಿ ಗ್ರಾ.ಪಂ ₹2.12 ಕೋಟಿ, ಯಗವಕೋಟೆ ಗ್ರಾ.ಪಂ ₹2.15 ಕೋಟಿ, ಕೆಂಚಾರ್ಲಹಳ್ಳಿ ₹2.46 ಕೋಟಿ, ಪೆದ್ದೂರು ಗ್ರಾ.ಪಂ ₹2.86 ಕೋಟಿ, ಇರಗಂಪಲ್ಲಿ ಗ್ರಾ.ಪಂ. ₹2.90 ಕೋಟಿಯಷ್ಟು ವಿದ್ಯುತ್ ಬಿಲ್ ಪಾವತಿಯಾಗಬೇಕಿದೆ. ಈ ಕುರಿತು ಸಂಬಂಧಿಸಿದವರಿಗೆ ನೋಟಿಸ್ ನೀಡಲಾಗಿದೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.

ಗ್ರಾಮ ಪಂಚಾಯಿತಿಗಳಿಗೆ ಬರುವ ಶಾಸನಬದ್ಧ ಅನುದಾನದಲ್ಲಿ ಸರ್ಕಾರದ 15ನೇ ಹಣಕಾಸು ಯೋಜನೆಯ ಅನುದಾನ, ಮತ್ತು ಗ್ರಾಮ ಪಂಚಾಯಿತಿಗಳ ಸ್ವಂತ ಸಂಪನ್ಮೂಲ ಸಂಗ್ರಹಣೆಯಿಂದ ವಿದ್ಯುತ್ ಶುಲ್ಕ ಭರಿಸಲು ಅವಕಾಶವಿದೆ. ಈ ವರ್ಷ 15ನೇ ಹಣಕಾಸು ಯೋಜನೆಯ ಅನುದಾನ ಸಂದಾಯವಾಗಿಲ್ಲ. ಶಾಸನಬದ್ಧ ಅನುದಾನದಲ್ಲಿ ಶೇ 40ರಷ್ಟು ಸಿಬ್ಬಂದಿ ವೇತನಕ್ಕೆ ಮೀಸಲಿರಲಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ತಿಳಿಸಿದರು.

ಸಾಮಾನ್ಯವಾಗಿ ಗ್ರಾಮ ಪಂಚಾಯಿತಿಗಳು ವರ್ಷಕ್ಕೆ ನಾಲ್ಕು ಕಂತುಗಳಲ್ಲಿ ವಿದ್ಯುತ್ ಬಿಲ್ ಪಾವತಿಸುತ್ತವೆ. ಪೂರ್ಣ ಪ್ರಮಾಣದಲ್ಲಿ ಬಿಲ್ ಪಾವತಿಸುವುದಿಲ್ಲ. ಬಾಕಿ ಉಳಿಸಿಕೊಳ್ಳುವುದರಿಂದ ಬಡ್ಡಿಯ ಪ್ರಮಾಣವೇ ಬೆಳೆಯುತ್ತಾ ಹೋಗುತ್ತದೆ. ಬಡ್ಡಿಗೆ ಬಡ್ಡಿ ಸೇರುವುದರಿಂದ ಮೊತ್ತ ಅಧಿಕವಾಗುತ್ತದೆ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದರು.

ದೊಡ್ಡ ಮೊತ್ತದ ವಿದ್ಯುತ್ ಬಿಲ್ ಗ್ರಾಮ ಪಂಚಾಯಿತಿಗಳಿಗೆ ತೀವ್ರ ಹೊರೆಯಾಗುತ್ತದೆ. ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ವಿದ್ಯುತ್ ದೀಪಗಳನ್ನು ಸರಿಯಾಗಿ ನಿರ್ವಹಣೆ ಮಾಡುವುದಿಲ್ಲ. ಬೆಳಿಗ್ಗೆ 10 ಗಂಟೆಯಾದರೂ ಉರಿಯುತ್ತಿರುವ ಬೀದಿ ದೀಪಗಳನ್ನು ಆರಿಸುವುದಿಲ್ಲ. ಕೆಲವು ಕಡೆ ಹಗಲು, ರಾತ್ರಿ ಎನ್ನದೆ ವಿದ್ಯುತ್ ದೀಪಗಳು ಉರಿಯುತ್ತಿರುತ್ತವೆ ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ದೂರಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-16-456571609

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.