ಚಿಂತಾಮಣಿ: ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ತಾಲ್ಲೂಕಿನಲ್ಲಿ 67,785 ಫಲಾನುಭವಿಗಳ ಖಾತೆಗಳಿಗೆ 30 ಕಂತುಗಳನ್ನು ಪಾವತಿಸಲಾಗಿದೆ. ಇದುವರೆಗೆ ₹346 ಕೋಟಿ ಫಲಾನುಭವಿಗಳ ಖಾತೆಗಳಿಗೆ ಸೇರಿದೆ.

31ನೇ ಕಂತಿನ ಫೆಬ್ರುವರಿವರೆಗೂ ಹಣ ಬಿಡುಗಡೆಯಾಗಿದ್ದು ಬಿಲ್ ತಯಾರಿಸಲಾಗುತ್ತಿದೆ. ಶೀಘ್ರದಲ್ಲೇ 31ನೇ ಕಂತು ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಲಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ಬಾಬು ಪ್ರಜಾವಾಣಿಗೆ ತಿಳಿಸಿದರು.

ತಾಲ್ಲೂಕಿನಲ್ಲಿ ನೋಂದಾಯಿತ ಮಹಿಳೆಯರ ಪೈಕಿ 238 ಮಂದಿ ಮೃತಪಟ್ಟಿದ್ದರು. ಮೃತಪಟ್ಟ ಮಹಿಳೆಯರ ಖಾತೆಗಳಿಗೆ ಜಮಾ ಆಗಿದ್ದ ₹3.5 ಲಕ್ಷ ಹಣವನ್ನು ಖಾತೆಗಳಿಂದ ವಾಪಸ್ ಪಡೆದು ಸರ್ಕಾರಕ್ಕೆ ಜಮಾ ಮಾಡಲಾಗಿದೆ.

ಮುಂದೆ ಮೃತರ ಖಾತೆಗೆ ಹಣ ಜಮೆ ಆಗದಂತೆ ಪ್ರಮಾಣಿತ ಕಾರ್ಯವಿಧಾನ ರೂಪಿಸಲಾಗಿದೆ. ಕಂತು ಪಾವತಿಗೂ ಮುನ್ನಾ ಇ-ಜನ್ಮ ಪೋರ್ಟಲ್ನಲ್ಲಿನ ಮಾಹಿತಿ ಪರಿಶೀಲಿಸಿ ಹಣ ಜಮಾ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಮರಣ ಪ್ರಮಾಣ ಪತ್ರ ವಿತರಣೆಯಾದ ಕೂಡಲೇ ಇಲಾಖೆಗೆ ಮಾಹಿತಿ ದೊರೆಯುತ್ತದೆ. ಮುಂದೆ ಮೃತರ ಖಾತೆಗೆ ಹಣ ಪಾವತಿಯಾಗುವ ಪ್ರಶ್ನೆಯೇ ಬರುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-16-1096451847

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.