ಚಿಂತಾಮಣಿ: ಚಿಂತಾಮಣಿ ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ 36 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನ ದಾಖಲಾಗಿದೆ. ಹೀಗಾಗಿ, ತಾಲ್ಲೂಕಿನ ನಗರ ಮತ್ತು ಗ್ರಾಮೀಣ ಭಾಗದ ಪ್ರತಿಯೊಬ್ಬರ ಬಾಯಲ್ಲೂ ‘ಅಬ್ಬಾಬ್ಬಾ ಬಿಸಿಲು, ಸೆಕೆ ತಡೆಯಲು ಅಸಾಧ್ಯ’ ಎಂಬ ಉದ್ಘಾರ ಕೇಳಿಬರುತ್ತಿದೆ.

ಚಿಂತಾಮಣಿಯು ಆಂಧ್ರಪ್ರದೇಶದ ಗಡಿಯಲ್ಲಿರುವುದರಿಂದ ಇತರ ಪ್ರದೇಶಗಳಿಗಿಂತ ಬಿಸಿಲು ಕೊಂಚ ಹೆಚ್ಚೇ ಇರುತ್ತದೆ. ಬೇಸಿಗೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಅಧಿಕವಾಗುತ್ತಿದ್ದು, ಕೆಂಡದ ಸ್ವರೂಪ ಪಡೆದುಕೊಳ್ಳುತ್ತಿದೆ. ಬಿಲಿಸಿನ ಝಳಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಹೀಗಾಗಿ, ಜನಸಾಮಾನ್ಯರು ಮಧ್ಯಾಹ್ನದ ಸಮಯದಲ್ಲಿ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.

ತಾಲ್ಲೂಕಿನಲ್ಲಿ ಬೇಸಿಗೆಯಲ್ಲಿ ಸಾಮಾನ್ಯವಾಗಿ ಗರಿಷ್ಠ 34-35 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುತ್ತದೆ. ಈ ವರ್ಷ 37-38 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನ ದಾಖಲಾಗಿದೆ. ಜತೆಗೆ ಬಿಸಿಗಾಳಿ ಬೀಸುತ್ತಿದ್ದು, ಜನರ ಬದುಕು ಹೈರಾಣಾಗಿದೆ. ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗುವ ಸಂಭವವಿದ್ದು, 39-40 ಡಿಗ್ರಿ ಸಲ್ಸಿಯಸ್ ಉಷ್ಣಾಂಶ ದಾಖಲಾಗುವ ಸಂಭವವಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಡುತ್ತಾರೆ.

ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ಪ್ರಖರ ಬಿಸಿಲು ಜನರನ್ನು ಕಾಡುತ್ತಿದೆ. ಬಿಸಿಲಿನ ತೀವ್ರತೆಯಿಂದ ಜನರು ಹೊರಗೆ ಓಡಾಡಲು ಸಾಧ್ಯವಾಗುತ್ತಿಲ್ಲ. ಮನೆಯೊಳಗೆ ಇದ್ದರೂ ಮನಸ್ಸಿಗೆ ನೆಮ್ಮದಿ ಇಲ್ಲ. ಮಧ್ಯಾಹ್ನದ ಅವಧಿಯಲ್ಲಿ ರಸ್ತೆಗಳಲ್ಲಿ ಜನ, ವಾಹನಗಳ ಸಂಚಾರ ವಿರಳವಾಗಿದೆ. ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮನುಷ್ಯರಷ್ಟೇ ಅಲ್ಲ ಜಾನುವಾರುಗಳು ತತ್ತರಿಸಿ ಹೋಗುತ್ತಿವೆ.

ಕಟ್ಟಡ ಕಾರ್ಮಿಕರು, ವ್ಯವಸಾಯ ಚಟುವಟಿಕೆಗಳಲ್ಲಿ ನಿರತರಾದ ರೈತರು, ಕೂಲಿ ಕಾರ್ಮಿಕರು ಸೇರಿದಂತೆ ದುಡಿಯುವ ವರ್ಗ ಬಿಸಿಲಿನ ಝಳಕ್ಕೆ ತತ್ತರಿಸಿದ್ದಾರೆ. ಮಧ್ಯಾಹ್ನ 12ರಿಂದ 4 ಗಂಟೆವರೆಗೆ ಶ್ರಮದಾಯಕ ಕೆಲಸದಿಂದ ಮುಕ್ತಿ ಪಡೆದು ದಣಿವಾರಿಸಿಕೊಳ್ಳುವುದು ಉತ್ತಮ. ಒಟ್ಟಾರೆ ತಾಲ್ಲೂಕಿನಲ್ಲಿ ದಿನೇ ದಿನೇ ತಾಪಮಾನ ಏರುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

ಆರೋಗ್ಯ ಇಲಾಖೆ ಸಲಹೆ: ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆವರೆಗೆ ಸೂರ್ಯನ ಕಿರಣಗಳು ನೇರವಾಗಿ ದೇಹಕ್ಕೆ ತಾಗುತ್ತದೆ. ಆ ಸಮಯದಲ್ಲಿ ಸಾಧ್ಯವಾದಷ್ಟು ಕೆಲಸ ಮಾಡದೆ ಮನೆಯಲ್ಲಿರುವುದು ಉತ್ತಮ. ಹೊರಗೆ ಹೋಗುವ ಅನಿವಾರ್ಯತೆ ಇದ್ದಲ್ಲಿ ಛತ್ರಿ ಉಪಯೋಗಿಸಬೇಕು.

ಕೆಲಸ ಮಾಡುವಾಗ ಮೈಮೇಲೆ ತೆಳುವಾರ ಖಾದಿ ಬಟ್ಟೆಗಳಿರಲಿ. ಬಿಸಿಲಿಗೆ ಮೈಮೇಲೆ ಬೊಬ್ಬೆಗಳು ಬರುವ ಸಂಭವವಿರುತ್ತದೆ. ಬಾಯಾರಿಕೆ ಆಗುವವರೆಗೆ ಕಾಯದೆ ಗಂಟೆಗೊಮ್ಮೆ ಶುದ್ಧ ನೀರು ಕುಡಿಯಬೇಕು.

ಒ.ಆರ್.ಎಸ್ ಮತ್ತು ಎಳನೀರು ಕುಡಿಯಬೇಕು. ಬಿಸಿಬಿಸಿ ಅಡುಗೆ ಊಟ ಮಾಡಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಮಚಂದ್ರಾರೆಡ್ಡಿ ಸಲಹೆ ನೀಡಿದರು.

ಬಿಸಿಲಾಘಾತದ ಪರಿಣಾಮಗಳು: ತೀವ್ರ ಆಯಾಸ, ಸುಸ್ತು, ತಲೆನೋವು, ತಲೆ ಸುತ್ತುವುದು, ಮೂರ್ಛೆ, ವಾಂತಿ, ಬೆವರು ಇಲ್ಲದ ಒಣಚರ್ಮ ಮತ್ತಿತರ ಲಕ್ಷಣಗಳು ಕಂಡುಬಂದರೆ ತಕ್ಷಣ ನೆರಳಿನ ಸ್ಥಳಕ್ಕೆ ಕರೆದೊಯ್ಯಬೇಕು. ಶರೀರದ ಮೇಲೆ ಒದ್ದೆಯಾದ ಬಟ್ಟೆ ಹಾಕಿ ತಂಪಾಗಿಸಬೇಕು. ಬಿಸಿಲಿನ ಪ್ರಖರತೆಯಿಂದ ವಾಂತಿ-ಭೇದಿ ಆಗುವ ಸಂಭವವಿರುತ್ತದೆ. ತಾತ್ಸರ ಮಾಡದೆ ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-16-997931201

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.