ಚಿಂತಾಮಣಿ: ಜನಗಣತಿಯ ಪ್ರಥಮ ಹಂತ ಸಾರ್ವಜನಿಕರು ಆನ್ಲೈನ್ನಲ್ಲಿ ಮಾಹಿತಿ ನೀಡುವ ಸ್ವಯಂ ಗಣತಿಗಾಗಿ (ಏ.1 ರಿಂದ 15 ರವರೆಗೆ) ನೀಡಿದ್ದ ಅವಕಾಶ ಮುಕ್ತಾಯವಾಗಿದ್ದು, ‘ನಮ್ಮ ಜನಗಣತಿ ನಮ್ಮ ಅಭಿವೃದ್ಧಿ’ ಎಂಬ ಧ್ಯೇಯವಾಕ್ಯದೊಂದಿಗೆ ಇದೇ 16ರಿಂದ ಮನೆ ಗಣತಿ ಆರಂಭವಾಗಿದೆ.

ಸಾಮಾನ್ಯವಾಗಿ 10 ವರ್ಷಗಳಿಗೊಮ್ಮೆ ನಡೆಯುತ್ತಿದ್ದ ಜನಗಣತಿ ಕೋವಿಡ್ ಹಿನ್ನೆಲೆಯಲ್ಲಿ 15 ವರ್ಷಗಳ ನಂತರ ನಡೆಯುತ್ತಿದೆ.

ಮನೆಗಳ ಗಣತಿ ಕಾರ್ಯಕ್ಕೆ ತಾಲ್ಲೂಕು ಆಡಳಿತ ಮತ್ತು ನಗರಸಭೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ನಿಯೋಜಿತ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ತರಬೇತಿ ನೀಡಲಾಗಿದೆ. ಚಿಂತಾಮಣಿ ನಗರ ಹಾಗೂ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಮನೆಗಳು, ಕುಟುಂಬಗಳು, ಜನಸಂಖ್ಯೆ ಎಷ್ಟಿದೆ ಎಂಬ ಮಾಹಿತಿ ಲಭ್ಯವಾಗಲಿದ್ದು, ಜನಗಣತಿಯ ಅಂಕಿ ಅಂಶಗಳು 2027ರಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ.

ಜನಗಣತಿಗಾಗಿ ಚಿಂತಾಮಣಿ ನಗರ ಮತ್ತು ತಾಲ್ಲೂಕಿನ ಗ್ರಾಮೀಣ ಎಂಬುದಾಗಿ ಎರಡು ಚಾರ್ಜ್ ಮಾಡಿಕೊಳ್ಳಲಾಗಿದೆ. ನಗರ ವಿಭಾಗಕ್ಕೆ ಪೌರಾಯುಕ್ತ ಜಿ.ಎನ್.ಚಲಪತಿ ಚಾರ್ಜ್ ಅಧಿಕಾರಿ, ಗ್ರಾಮೀಣ ಭಾಗಕ್ಕೆ ತಹಶೀಲ್ದಾರ್ ಸುದರ್ಶನ ಯಾದವ್ ಅವರನ್ನು ಚಾರ್ಜ್ ಅಧಿಕಾರಿ ಆಗಿ ನಿಯೋಜಿಸಲಾಗಿದೆ.

ನಗರದಲ್ಲಿ ಒಟ್ಟು 154 ಬ್ಲಾಕ್ ಗುರುತಿಸಲಾಗಿದ್ದು, ಪ್ರತಿ ಗಣತಿ ಬ್ಲಾಕ್ಗೆ ಒಬ್ಬ ಗಣತಿದಾರರಂತೆ 154 ಗಣತಿದಾರರು ಹಗೂ ಪ್ರತಿ 6 ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರಂತೆ 26 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಜತೆಗೆ ಹೆಚ್ಚುವರಿಯಾಗಿ ಶೇ 10ರಷ್ಟು ಗಣತಿದಾರರು ಮತ್ತು ಮೇಲ್ವಿಚಾರಕರನ್ನು ನೇಮಿಸಿಕೊಳ್ಳಲಾಗಿದೆ ಎಂದು ನಗರಸಭೆ ಆಡಳಿತ ತಿಳಿಸಿದೆ.

ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ 487 ಬ್ಲಾಕ್ಗಳನ್ನು ಗುರುತಿಸಿದ್ದು, 320 ಗಣತಿದಾರರು ಹಾಗೂ 59 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.

ಪೋರ್ಟಲ್ನಲ್ಲಿ ಕೇಳಲಾದ 34 ಪ್ರಶ್ನೆಗಳಿಗೆ ಸಾರ್ವಜನಿಕರು ಉತ್ತರಿಸಬೇಕು. ಸುರಕ್ಷಿತ ಹಾಗೂ ಸುಲಭ ಪ್ರಕ್ರಿಯೆ ಇದು. ಮೇಲ್ವಿಚಾರಕರು ಮತ್ತು ಗಣತಿದಾರರಿಗೆ ತರಬೇತಿ ನೀಡಲಾಗಿದ್ದು, ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಜನಗಣತಿಗೆ ಡಿಜಿಟಲ್ ಸ್ಪರ್ಶ ನೀಡಲಾಗಿದೆ. ದತ್ತಾಂಶ ಸಂಗ್ರಹಣೆಯ ಗುಣಮಟ್ಟ ಹೆಚ್ಚಿಸಲು ಹಾಗೂ ಶೀಘ್ರವಾಗಿ ಬಿಡುಗಡೆ ಮಾಡಲು ಮೊಬೈಲ್ ಅಪ್ಲಿಕೇಷನ್, ಪೋರ್ಟಲ್ನಂಥ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ ಎಂದು ನಗರ ಚಾರ್ಜ್ ಅಧಿಕಾರಿ ಜಿ.ಎನ್.ಚಲಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-16-1788069788

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.