ಚಿಂತಾಮಣಿ: ಮಹಿಳೆಯರಲ್ಲಿ ಕಂಡುಬರುವ ‘ಗರ್ಭಕಂಠ ಕ್ಯಾನ್ಸರ್’ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯು 14 ರಿಂದ 15 ವರ್ಷದ ಒಳಗಿನ ಹೆಣ್ಣುಮಕ್ಕಳಿಗೆ ಎಚ್.ಪಿ.ವಿ ಲಸಿಕೆ ನೀಡುವ ಅಭಿಯಾನ ಜಾರಿಗೊಳಿಸಿದೆ.

ತಾಲ್ಲೂಕಿನಲ್ಲಿ 14–15 ವರ್ಷದ ಒಳಗಿನ ಲಸಿಕೆಗೆ ಅರ್ಹವಿರುವ 2,085 ಹೆಣ್ಣು ಮಕ್ಕಳನ್ನು ಗುರುತಿಸಲಾಗಿದ್ದು, ಈವರೆಗೆ 1,326 ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಈ ಮೂಲಕ ಒಟ್ಟಾರೆ ಗುರಿಯ ಶೇ 63.6 ರಷ್ಟು ಸಾಧಿಸಲಾಗಿದೆ. 2026ರ ಮಾರ್ಚ್ 18ರಂದು ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಈ ಅಭಿಯಾನವು ಮೇ 31ರ ಒಳಗೆ ಮುಕ್ತಾಯವಾಗಬೇಕಿದೆ. ಮಾರ್ಚ್ ತಿಂಗಳಿನಲ್ಲಿ ಮಕ್ಕಳಿಗೆ ಪರೀಕ್ಷೆ, ನಂತರ ಶಾಲೆಗಳಿಗೆ ರಜೆ ಬಂದಿದ್ದರಿಂದ ಅಭಿಯಾನಕ್ಕೆ ಕೊಂಚ ಹಿನ್ನಡೆಯಾಗಿದೆ. ಜಿಲ್ಲೆಯಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಮಹತ್ವಾಕಾಂಕ್ಷಿ ಯೋಜನೆ ಎಚ್ಪಿವಿ ಲಸಿಕೆ ಅಭಿಯಾನವನ್ನು ಮನೆ ಮನೆಗೂ ಮುಟ್ಟಿಸಲಾಗುತ್ತಿದೆ. ಮಹಿಳೆಯರಲ್ಲಿ ಕಾಣಿಸಿಕೊಳ್ಳಬಹುದಾದ ಅನೇಕ ಕಾಯಿಲೆಗಳನ್ನು ತಡೆಗಟ್ಟಲು ಸುಮಾರು 10 ವಿವಿಧ ಲಸಿಕೆ ನೀಡಲಾಗುತ್ತಿದೆ. ಮಗು ಮುಂದೆ ಯಾವುದೇ ರೋಗಗಳಿಗೆ ತುತ್ತಾಗದೆ ಸದೃಢವಾಗಿ ಸ್ವಾಸ್ಥ್ಯ ಕಾಪಾಡಿಕೊಳ್ಳಬೇಕು ಎಂಬುದು ಸರ್ಕಾರದ ಉದ್ದೇಶ.

ಎಚ್.ಪಿ.ವಿ ಎಂಬುದು ಜನನಾಂಗದ ಸೋಂಕುಗಳಿಗೆ ಕಾರಣವಾಗುವ ವೈರಸ್. ಮಹಿಳೆಯರಲ್ಲಿ ಹರಡುವ ಗರ್ಭಕಂಠ ಕ್ಯಾನ್ಸರ್ಗೆ ಇದೇ ವೈರಸ್ ಕಾರಣ. ಭಾರತೀಯ ಮಹಿಳೆಯರಲ್ಲಿ ಕಂಡುಬರುವ ಕ್ಯಾನ್ಸರ್ ಕಾಯಿಲೆಗಳಲ್ಲಿ ಗರ್ಭಕಂಠ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದೆ. 2024ರ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 78,499 ಮಂದಿಯಲ್ಲಿ ಈ ಕಾಯಿಲೆ ಪತ್ತೆಯಾಗಿದೆ. ಅದರಲ್ಲಿ 42,392 ಮಂದಿ ಮೃತಪಟ್ಟಿದ್ದಾರೆ. ಹಾಗಾಗಿ ಈ ಲಸಿಕೆ ಪಡೆಯುವುದು ಬಹಳ ಮುಖ್ಯ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಸರ್ಕಾರಿ, ಅನುದಾನಿತ, ವಸತಿ ಮತ್ತು ಅನುದಾನರಹಿತ ಶಾಲೆಗಳ ಹೆಣ್ಣುಮಕ್ಕಳ ಪೋಷಕರಿಗೆ ಇಲಾಖೆ ಮೂಲಕ ಸ್ವಯಂಪ್ರೇರಿತ ತಿಳುವಳಿಕೆ ಪತ್ರ ಕಳುಹಿಸಲಾಗಿದೆ. ರಾಜ್ಯದಲ್ಲಿ ಪ್ರತಿವರ್ಷ ಸುಮಾರು 50 ಸಾವಿರ ಹೆಣ್ಣುಮಕ್ಕಳು ಗರ್ಭಕಂಠಕ ಕ್ಯಾನ್ಸರ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಕೊಡಿಸಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.

ಯಾವುದೇ ಅಡ್ಡ ಪರಿಣಾಮವಿಲ್ಲ

ಎಚ್ಪಿವಿ ಲಸಿಕೆ ಅತ್ಯಂತ ಸುರಕ್ಷಿತ ಎಂದು ಜಾಗತಿಕ ಸುರಕ್ಷತಾ ಮೇಲ್ವಿಚಾರಣೆಗಳು ಖಚಿತಪಡಿಸಿವೆ. ಹೆಣ್ಣುಮಕ್ಕಳು ಈ ಲಸಿಕೆ ಪಡೆಯುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ವದಂತಿಗಳು, ಮೂಢನಂಬಿಕೆ ಮತ್ತು ಅಪಪ್ರಚಾರ ಗಳಿಗೆ ಕಿವಿಗೊಡದೆ 14–15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಲಸಿಕೆ ಕೊಡಿಸಬೇಕು ಎನ್ನುತ್ತಾರೆ ತಾಲ್ಲೂಕು ಆರೋಗ್ಯಾಧಿಕಾರಿ
ಡಾ. ರಾಮಚಂದ್ರಾರೆಡ್ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.