ಚಿಂತಾಮಣಿ: ನಗರದ ಜೋಡಿ ರಸ್ತೆಯಲ್ಲಿದ್ದ ಐಡಿಎಸ್ಎಂಟಿ ಅಂಗಡಿ ಮಳಿಗೆಗಳ ಸಂಕೀರ್ಣ ನೆಲಸಮಗೊಳಿಸುವ ಕಾಮಗಾರಿ ಶುಕ್ರವಾರದಿಂದ ಭರದಿಂದ ಸಾಗುತ್ತಿದೆ.

ಐಡಿಎಸ್ಎಂಟಿ ಸಂಕೀರ್ಣದ ಮೇಲ್ಭಾಗದಲ್ಲಿ ಮತ್ತೊಂದು ಅಂತಸ್ತು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು. ಆದರೆ ತಾಂತ್ರಿಕ ತಜ್ಞರು ಪರಿಶೀಲಿಸಿ ಕಟ್ಟಡ ಶಿಥಿಲವಾಗಿದ್ದು ಬಳಕೆಗೆ ಯೋಗ್ಯವಲ್ಲ ಎಂದು ವರದಿ ನೀಡಿದ್ದರು. ಹೀಗಾಗಿ ಕಟ್ಟಡವನ್ನು ನೆಲಸಮಗೊಳಿಸಿ ನೂತನ ಕಟ್ಟಡ ನಿರ್ಮಾಣದ ತೀರ್ಮಾನ ಕೈಗೊಳ್ಳಲಾಗಿತ್ತು.

ಜಿಲ್ಲಾಧಿಕಾರಿ ಜಿ.ಪ್ರಭು ನೇತೃತ್ವದಲ್ಲಿ ಎರಡು ಬಾರಿ ಸಂಕೀರ್ಣದ ಅಂಗಡಿ ಮಾಲೀಕರೊಂದಿಗೆ ಮಾತುಕತೆ ನಡೆಸಿ ಶೀಘ್ರವಾಗಿ ಅಂಗಡಿ ತೆರವುಗೊಳಿಸಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಗಡುವು ನೀಡಿದ್ದರು. ಒಂದು ವರ್ಷದ ಒಳಗೆ ನೂತನ ಕಟ್ಟಡದ ಕಾಮಗಾರಿ ಮುಗಿಸಿ ಸುಸಜ್ಜಿತ ಅಂಗಡಿ ಮಳಿಗೆ ವಿತರಣೆ ಮಾಡುವುದಾಗಿ ಭರವಸೆ ನೀಡಿದ್ದರು.

ಕೆಲವರು ಖಾಲಿ ಮಾಡಿದ್ದರು. ಖಾಲಿ ಮಾಡಿರುವ ಅಂಗಡಿ ಮಳಿಗೆಗಳನ್ನು ನೆಲಸಮಗೊಳಿಸುವ ಕೆಲಸ ಭರದಿಂದ ಸಾಗುತ್ತಿದೆ. ಈಗಿರುವ ಸಂಕೀರ್ಣ 40 ವರ್ಷಗಳಷ್ಟು ಹಳೆಯದಾಗಿದ್ದು 170 ಮಳಿಗೆಗಳಿದ್ದವು. ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಸುಮಾರು ₹30 ಕೋಟಿ ವೆಚ್ಚದಲ್ಲಿ ಹೊಸ ಸಂಕೀರ್ಣವು ನಿರ್ಮಾಣವಾಗಲಿದ್ದು ಸುಮಾರು 300 ಮಳಿಗೆಗಳಿಗೆ ಅವಕಾಶವಾಗಲಿದೆ ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.