ಚಿಂತಾಮಣಿ: ತಾಲ್ಲೂಕಿನ ಕೈವಾರದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ರಥೋತ್ಸವ ಕಾರ್ಯಕ್ರಮವು ಗುರುವಾರ ಬೆಳಗ್ಗೆ ತೆರೆಕಂಡಿತು.

ಸೋಮವಾರ ಯೋಗಿನಾರೇಯಣ ಜಯಂತಿ, ಮಂಗಳವಾರ ಅಮರನಾರೇಯಣ ರಥೋತ್ಸವ, ಬುಧವಾರ ಯೋಗಿನಾರೇಯಣ ತಾತಯ್ಯನವರ ರಥೋತ್ಸವಗಳು ವಿಜೃಂಭಣೆಯಿಂದ
ನಡೆದವು.

ಬುಧವಾರ ರಾತ್ರಿ ತಾತಯ್ಯನವರ ರಥೋತ್ಸವದ ಅಂಗವಾಗಿ ಸದ್ಗುರು ಯೋಗಿನಾರೇಯಣ ತಾತಯ್ಯನವರ ಉತ್ಸವ ಮೂರ್ತಿಯನ್ನು ಮುತ್ತಿನ ಪಲ್ಲಕ್ಕಿಯಲ್ಲಿ ಕೂರಿಸಿ ಶ್ರದ್ಧಾಭಕ್ತಿಯಿಂದ ಉತ್ಸವ ಆಚರಿಸಲಾಯಿತು. ಬುಧವಾರ ರಾತ್ರಿ ನಡೆದ ಉತ್ಸವಕ್ಕೆ ಭಕ್ತರ ಮಹಾಪೂರವೇ ಹರಿದುಬಂದಿತು.

ಚಂದ್ರನ ಬೆಳಕಿನಲ್ಲಿ ವರ್ಣರಂಜಿತ ಮುತ್ತಿನ ಪಲ್ಲಕ್ಕಿ ಕಂಗೊಳಿಸುತ್ತಿತ್ತು. ಮುತ್ತಿನ ಪಲ್ಲಕ್ಕಿಯಲ್ಲಿ ತಾತಯ್ಯನವರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಕೈವಾರದ ನಾದಸ್ವರದ ತಂಡ ಅಮೋಘವಾದ ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿತು.

ಅಮರ ನಾರೇಯಣ ದೇವಾಲಯದಿಂದ ಹೊರಟ ಉತ್ಸವವು ಮುಖ್ಯ ಬೀದಿಗಳಲ್ಲಿ ಸಂಚರಿಸಿ ಯೋಗಿ ನಾರೇಯಣ ಮಠದ ಆವರಣದಲ್ಲಿ ಸಮಾಪ್ತಿಯಾಯಿತು.

ನಾದಸುಧಾರಸ ಸಂಕೀರ್ತನಾ ಯೋಜನೆಯಡಿ ರಾತ್ರಿಯಿಡೀ ನಡೆದ ನಾಟಕ, ಭರತನಾಟ್ಯ, ಜಾನಪದ ನೃತ್ಯ ಪ್ರದರ್ಶನವನ್ನು ಭಕ್ತರು ಕಣ್ತುಂಬಿಸಿಕೊಂಡರು. ಮೂರು ದಿನಗಳಿಂದ ಜನಜಂಗುಳಿಯಿಂದ ಕೂಡಿದ್ದ ಗ್ರಾಮ ಗುರುವಾರ ಬಿಕೊ ಎನ್ನುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.