ಚಿಂತಾಮಣಿ: ತ್ರಿಕಾಲಜ್ಞಾನಿ, ವರಕವಿ ಕೈವಾರದ ಯೋಗಿನಾರೇಯಣ ಯತೀಂದ್ರರ ರಥೋತ್ಸವವು ಬುಧವಾರ ಶ್ರದ್ಧಾ ಭಕ್ತಿಯಿಂದ ಸಾವಿರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವದ ಅಂಗವಾಗಿ ವರಕವಿ ಯೋಗಿನಾರೇಯಣ ಯತೀಂದ್ರರ ಮಠದಲ್ಲಿ ವಿಶೇಷ ಪೂಜೆ, ಅಲಂಕಾರ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸದ್ಗುರುಗಳ ಮೂಲ ಬೃಂದಾವನವನ್ನು ಅಲಂಕರಿಸಲಾಗಿತ್ತು. ಬೃಂದಾವನದ ಮುಂಭಾಗದಲ್ಲಿ ಯತೀಂದ್ರರ ಉತ್ಸವ ಮೂರ್ತಿಗೆ ಅಭಿಷೇಕ, ವೇದಘೋಷದೊಂದಿಗೆ ಅಷ್ಟಾವಧಾನ ಸೇವೆ ಸಮರ್ಪಿಸಲಾಯಿತು.

ಪೂಜಾ ಕೈಂಕರ್ಯದಲ್ಲಿ ಧರ್ಮಾಧಿಕಾರಿ ಎಂ.ಆರ್. ಜಯರಾಂ ದಂಪತಿ ಉಪಸ್ಥಿತರಿದ್ದರು. ಧರ್ಮಾಧಿಕಾರಿಗಳ ನೇತೃತ್ವದಲ್ಲಿ ಸಾಮೂಹಿಕ ನಾಮ ಸಂಕೀರ್ತನೆ ಸಮರ್ಪಿಸಲಾಯಿತು.

ಯೋಗಿನಾರೇಯಣ ಯತೀಂದ್ರರ ಉತ್ಸವಮೂರ್ತಿ ಮತ್ತು ಪಾದುಕೆಗಳನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಮಂಗಳವಾದ್ಯಗಳೊಂದಿಗೆ ಶಾಸ್ತ್ರೋಕ್ತವಾಗಿ ಕರೆದುಕೊಂಡು ಬಂದು ಅಲಂಕೃತ ರಥದಲ್ಲಿ ಕುಳ್ಳರಿಸಲಾಯಿತು. ರಥವನ್ನು ವಿಶೇಷ ಹೂಗಳಿಂದ ಸಿಂಗರಿಸಲಾಗಿತ್ತು. ರಥ ಶಾಂತಿ ಮತ್ತು ಪೂಜೆ ಸಲ್ಲಿಸಲಾಯಿತು. ರಥದಲ್ಲಿ ಅರ್ಚಕರು ಪೂಜಾ ವಿಧಿ ವಿಧಾನಗಳನ್ನು ಪೂರೈಸಿದ ನಂತರ ಧರ್ಮಾಧಿಕಾರಿ ಎಂ.ಆರ್.ಜಯರಾಂ ಮತ್ತು ಟ್ರಸ್ಟ್ ಸದಸ್ಯರು ರಥೋತ್ಸವಕ್ಕೆ ಚಾಲನೆ ನೀಡಿದರು.

ಸಾವಿರಾರು ಜನ ಭಕ್ತರು ಕೈಜೋಡಿಸಿ ರಥ ಎಳೆದರು. ಭಕ್ತರು ಬಾಳೆಹಣ್ಣು ಮತ್ತು ಧವನವನ್ನು ತೇರಿಗೆ ಸಮರ್ಪಿಸಿದರು. ಭಕ್ತರು ಭಜನೆ ಮಾಡುತ್ತಾ ಭಕ್ತಿಯ ಪರಕಾಷ್ಠೆಯಲ್ಲಿ ತೇಲಿದರು. ಸುತ್ತಮುತ್ತಲ ಗ್ರಾಮಗಳು, ರಾಜ್ಯದ ವಿವಿಧ ಭಾಗಗಳಲ್ಲಷ್ಟೇ ಅಲ್ಲದೆ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು. ಮಠ ಹಾಗೂ ದೇವಸ್ಥಾನಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಹಣ್ಣು, ಕಾಯಿ ನೀಡಿ ಪೂಜೆ ಸಲ್ಲಿಸಿದರು.

ಬೇಸಿಗೆ ಬಿಸಿಲಿನ ಬೇಗೆ ತಣಿಸಲು ಸುತ್ತಮುತ್ತಲಿನ ಗ್ರಾಮಸ್ಥರು ತಮಟೆ ವಾದ್ಯದ ಮೂಲಕ ಟ್ರ್ಯಾಕ್ಟರ್ಗಳಲ್ಲಿ ಮಜ್ಜಿಗೆ, ಪಾನಕ, ಕೋಸುಂಬರಿ ವಿತರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಉಚಿತವಾಗಿ ನೀರಿನ ಪಾಕೆಟ್ ಹಂಚಲಾಯಿತು. ಟ್ರಸ್ಟ್ ಸಮಿತಿ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ ಸತ್ಯನಾರಾಯಣ, ನಿರ್ದೇಶಕ ಬಾಲಕೃಷ್ಣ ಭಾಗವತರ್, ಬಿ.ಎಸ್.ಶ್ರೀನಿವಾಸ್, ಡಾ.ಎಂ.ವಿ.ಶ್ರೀನಿವಾಸ್, ಕೆ.ನರಸಿಂಹಪ್ಪ, ಗಣೇಶಚಂದ್ರಪ್ಪ, ಕೆ.ಎಂ.ತ್ಯಾಗರಾಜ್, ಕೆ.ವಿ.ಸುರೇಶ್, ಡಾಬ ನಾಗರಾಜ್, ಮುನಿನಾರಾಯಣಪ್ಪ, ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.