ಚಿಂತಾಮಣಿ: ನಗರದ 8ನೇ ವಾರ್ಡ್ ಕನಂಪಲ್ಲಿಯಲ್ಲಿ ಬೀಗ ಹಾಕಿದ್ದ ಮನೆಯ ಬಾಗಿಲು ಮೀಟಿ ಒಳನುಗ್ಗಿರುವ ಕಳ್ಳರು ಚಿನ್ನ, ಬೆಳ್ಳಿ ಆಭರಣ ಹಾಗೂ ನಗದು ಸೇರಿ ಸುಮಾರು ₹11ಲಕ್ಷ ಬೆಲೆ ಬಾಳುವ ವಸ್ತು ದೋಚಿಕೊಂಡು ಪರಾರಿಯಾಗಿದ್ದಾರೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ತೆರ್ನಹಳ್ಳಿಯ ಪಶುವೈದ್ಯಾಧಿಕಾರಿ ಡಾ.ವಿ.ಮನೋಜ್ ಕನಂಪಲ್ಲಿಯಲ್ಲಿ ವಾಸವಿದ್ದರು. ಮನೆಯವರೆಲ್ಲ ಬೀಗ ಹಾಕಿಕೊಂಡು ಸ್ವಗ್ರಾಮ ತಾಲ್ಲೂಕಿನ ಬಿಲ್ಲಾಂಡ್ಲಹಳ್ಳಿಗೆ ತೆರಳಿದ್ದಾಗ ಕಳ್ಳತನ ನಡೆದಿದೆ.

ಬುಧವಾರ ರಾತ್ರಿ 11.30ಕ್ಕೆ ಬಿಲ್ಲಾಂಡ್ಲಹಳ್ಳಿಯಿಂದ ಮನೆಗೆ ವಾಪಸ್ ಬಂದಾಗ ಮನೆಯ ಬಾಗಿಲಿನ ಬೀಗ ಮುರಿದು, ಮೀಟಿರುವ ಕುರುಹು ಕಂಡು ಗಾಬರಿಯಾಗಿ ಒಳಗೆ ಹೋಗಿ ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ.

ಬೀರುವಿನಲ್ಲಿರುವ ಲಾಕರ್ ಮುರಿದು ಸುಮಾರು 35 ಗ್ರಾಂ ತೂಕದ ಬಂಗಾರದ ನೆಕ್ಲೇಸ್, 58 ಗ್ರಾಂ ಬಂಗಾರದ ಹಾರ, 42 ಗ್ರಾಂ ವಿಯೋಲೆಗಳು, ಉಂಗುರು ಸೇರಿ ಒಟ್ಟು ಸುಮಾರು 137 ಗ್ರಾಂ ಚಿನ್ನದ ಒಡವೆ, 750 ಗ್ರಾಂ ಬೆಳ್ಳಿಯ ಸಾಮಗ್ರಿ ಹಾಗೂ ₹20 ಸಾವಿರ ನಗದು ಹಣ ಕಳುವಾಗಿದೆ ಎಂದು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ.

ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಶಿವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶ್ವಾನದಳ ಮತ್ತು ಬೆರಳಚ್ಚು ತಂಡವು ಸಹ ಸ್ಥಳಕ್ಕೆ ಭೇಟಿ ನೀಡಿ ನೀಡಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-16-970879640

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.