ಚಿಂತಾಮಣಿ: ನಗರದ ಹೊರವಲಯದ ಕನಂಪಲ್ಲಿಯ ಪಂಚಮುಖಿ ವೀರಾಂಜನೇಯ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.

ದೇವಾಲಯದಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆ ಏರ್ಪಡಿಸಲಾಗಿತ್ತು. ಬೆಳಿಗ್ಗೆ ಮಹಾನಿವೇದನೆ, ಕಲಶಾರಾಧನೆ, ಅಭಿಷೇಕ, ಹೋಮ, ಅಷ್ಟಾವಧಾನ ಸೇವೆ, ಪೂರ್ಣಾಹುತಿ, ಬಲಿಹರಣ ಕಾರ್ಯಕ್ರಮಗಳು ನೆರವೇರಿದವು.

ಮಧ್ಯಾಹ್ನ 2 ಗಂಟೆಗೆ ಶ್ರೀರಾಮಚಂದ್ರ ಸಮೇತ ಹನುಮಂತನ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಮಾಜಿ ಗೃಹ ಸಚಿವ ಎ.ಚೌಡರೆಡ್ಡಿ ಹಾಗೂ ಶಾಂತಮ್ಮ ಚೌಡರೆಡ್ಡಿ, ದೇವಾಲಯದ ಟ್ರಸ್ಟ್ ಸಮಿತಿಯವರು ರಥೋತ್ಸವಕ್ಕೆ ಚಾಲನೆ ನೀಡಿದರು. ಸಾವಿರಾರು ಭಕ್ತರು ರಥವನ್ನು ಎಳೆದರು.

ನಗರ, ಕನಂಪಲ್ಲಿ, ಮಾಳಪಲ್ಲಿ ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಮಂದಿ ರಥವನ್ನು ಕಣ್ಣುತುಂಬಿಸಿಕೊಂಡರು. ರಥಕ್ಕೆ ದವನ, ಬಾಳೆಹಣ್ಣನ್ನು ಭಕ್ತಿಯಿಂದ ಸಮರ್ಪಿಸಿದರು.

ತಮಟೆವಾದ್ಯ, ಭಕ್ತರ ಕುಣಿತ ರಥೋತ್ಸವಕ್ಕೆ ಮೆರುಗು ನೀಡಿದವು. ಗ್ರಾಮಸ್ಥರಿಂದ ವಿಶೇಷ ದೀಪೋತ್ಸವ ನಡೆಯಿತು.

ಮುಖಂಡ ಮೀಸೆ ವೆಂಕಟರೆಡ್ಡಿ, ಮುನಿಶಾಮರೆಡ್ಡಿ, ಡಾ.ಬಾಲಾಜಿ, ಅರುಣಾಮಂಜುನಾಥ್, ಗೋಪಾಲರೆಡ್ಡಿ, ಕೃಷ್ಣಾರೆಡ್ಡಿ, ಶ್ರೀನಿವಾಸ್, ಅರುಣಾರೆಡ್ಡಿ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ನಗರ ಹಾಗೂ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನರು ಆಗಮಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-16-933754933

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.