ಚಿಂತಾಮಣಿ: ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ತಿಂಗಳಲ್ಲಿ ಜನಿಸಿರುವ ಹಿರಿಯ ಕವಿಗಳ ಕವಿ ಸ್ಮರಣೆ ಕಾರ್ಯಕ್ರಮ ಭಾನುವಾರ ಆಚರಿಸಲಾಯಿತು.

ಕನ್ನಡ ಸಾಹಿತ್ಯ ವೇದಿಕೆಯ ಅಧ್ಯಕ್ಷ ಕಾಗತಿ ವೆಂಕಟರತ್ನಂ ಮಾತನಾಡಿ, ‘ಹತ್ತಾರು ವರ್ಷಗಳಿಂದ ಈ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ಆಯಾ ತಿಂಗಳಿನಲ್ಲಿ ಜನಿಸಿದ ಕವಿಗಳ ಜನನ, ಬದುಕು ಬರಹಗಳ ವಿಶ್ಲೇಷಣೆ ಮತ್ತು ಕವಿಗಳ ಸ್ಮರಣೆ ಮಾಡಲಾಗುತ್ತದೆ’ ಎಂದರು.

ನಿವೃತ್ತ ಶಿಕ್ಷಕ ವೆಂಕಟೇಶಪ್ಪ ಅವರು ರೆವರೆಂಡ್ ಫರ್ಡಿನೆಂಟ್ ಕಿಟ್ಟಲ್ ಕುರಿತು ಮಾತನಾಡಿ, ಕಿಟ್ಟಲ್ ಕನ್ನಡ ಇಂಗ್ಲಿಷ್ ನಿಘಂಟು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪಾದ್ರಿಯಾಗಿ ಪಾಶ್ಚಿಮಾತ್ಯ ದೇಶದಿಂದ ಭಾರತಕ್ಕೆ ಬಂದು ಕನ್ನಡ ಕಲಿತು ವಿದ್ವಾಂಸರಾಗಿ ಹಲವಾರು ಕನ್ನಡ ಕೃತಿಗಳನ್ನು ರಚಿಸಿ ಕನ್ನಡ ಅಭಿಮಾನ ಪ್ರದರ್ಶಿಸಿದ ಕವಿಯಾಗಿದ್ದು ಕನ್ನಡಿಗರಿಗೆಲ್ಲ ಸ್ಫೂರ್ತಿದಾಯಕವಾಗಿದೆ. ತಿಂಗಳಿನಲ್ಲಿ ಜನಿಸಿರುವ ಕೃಷ್ಣಶರ್ಮ ಬೇಟಗೇರಿ, ಪಂಜೆ ಮಂಗೇಶ್ರಾವ್, ತಾರಾಸು, ಬೀಚಿಯವರ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು.

ಮಂಡ್ಯ ಜಿಲ್ಲೆಯಲ್ಲಿ ಜನಿಸಿರುವ ಆರ್.ನರಸಿಂಹಾಚಾರ್ ಬದುಕು ಬರಹದ ಕುರಿತು ಸಾಹಿತಿ ವೆಂಕಟರತ್ನಂ ವಿವರಿಸಿದರು. ತಾಲ್ಲೂಕು ಕಸಾಪ ಅಧ್ಯಕ್ಷ ಎನ್.ವಿ.ಶ್ರೀನಿವಾಸನ್, ಕಾರುಣ್ಯ, ಪರಿಣಿತಿ, ಪೂರ್ವಿಕಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-16-1462852321

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.