ಚಿಂತಾಮಣಿ: ನಗರದ ಎಂ.ಜಿ.ರಸ್ತೆಯಲ್ಲಿ ಮೂರು ದಿನಗಳ ಸಡಗರ ಮತ್ತು ಸಂಭ್ರಮದ ದ್ರೌಪತಿ ಧರ್ಮರಾಯ ಕರಗ ಮಹೋತ್ಸವವು ಭಾನುವಾರ ರಾತ್ರಿ ಅಗ್ನಿಕುಂಡ ಮತ್ತು ವಸಂತೋತ್ಸವದೊಂದಿಗೆ ತೆರೆಕಂಡಿತು.

ಶನಿವಾರ ರಾತ್ರಿ 11 ಗಂಟೆಗೆ ಧರ್ಮರಾಯ ದೇವಸ್ಥಾದಲ್ಲಿ ವಿವಿಧ ದಾರ್ಮಿಕ ಕೈಂಕರ್ಯಗಳು ಹಾಗೂ ಪೂಜೆ ಬಳಿಕ ಕರಗ ಹೊತ್ತ ವಿಜಯಕುಮಾರ್ ದೇವಾಲಯದ ಮುಂದೆ ತಮಟೆಯ ತಾಳಕ್ಕೆ ತಕ್ಕಂತೆ ನೃತ್ಯ ಮಾಡಿ ನೆರೆದ ಸಾವಿರಾರು ಭಕ್ತರ ಮನತಣಿಸಿದರು.

ಕರಗವು ನಗರದ ವಿವಿಧ ಬಡಾವಣೆಗಳ ಪ್ರಮುಖ ರಸ್ತೆಗಳು, ವೃತ್ತಗಳ ಮೂಲಕ ಸಂಚರಿಸಿ ಭಾನುವಾರ ರಾತ್ರಿ ದೇವಾಲಯ ತಲುಪಿತು. ವೀರಕುಮಾರರು ಮತ್ತು ನೂರಾರು ಭಕ್ತರು ಸಹ ಹೂವಿನ ಕರಗವನ್ನು ಹಿಂಬಾಲಿಸಿದರು.

ನಗರದ ಎನ್.ಎನ್.ಟಿ ರಸ್ತೆಯ ಭಜನೆ ಮಂದಿರ, ನಾರಸಿಂಹಪೇಟೆಯ ಆಂಜನೇಯ ದೇವಾಲಯದ ಗರಡಿಮನೆ, ಗಂಗಾಭವಾನಿ ದೇವಾಲಯ ಬಳಿ ಕರಗವು ವಿಶೇಷ ನರ್ತನ ಮಾಡಿತು. ಕರಗ ಸಾಗಿದಡೆಯಲ್ಲಿ ಜನರ ಹರ್ಷೋದ್ಗಾರ, ಚಪ್ಪಾಳೆ ಮುಗಿಲುಮುಟ್ಟಿತು. ಭಕ್ತರು ಕೇಕೆ ಸಿಳ್ಳೆಗಳನ್ನು ಹಾಕಿ ಹುರಿದುಂಬಿಸಿದರು.

ಮಾರ್ಚ್ 26ರಂದು ಗುರುವಾರ ಆರಂಭವಾಗಿದ್ದ ಕರಗ ಮಹೋತ್ಸವದ ಕಾರ್ಯಕ್ರಮಗಳು ಭಾನುವಾರ ರಾತ್ರಿ ಅಗ್ನಿಕುಂಡ ಮತ್ತು ವಸಂತೋತ್ಸವದೊಂದಿಗೆ ಮುಕ್ತಾಯಗೊಂಡವು.

ನಗರದ ಚೆಂಗಲರಾಯ ನಾಯ್ಡು ಕುಟುಂಬ ಪ್ರತಿವರ್ಷದಂತೆ ಕರಗ ಮಹೋತ್ಸವ ನಡೆಸಿತು. ಕರಗದ ಅಂಗವಾಗಿ ದೇವಾಲಯಕ್ಕೆ ಹೂವಿನ ಅಲಂಕಾರ ಮತ್ತು ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಕರಗ ಸಂಚರಿಸುವ ರಸ್ತೆಗಳಲ್ಲಿ ಅನೇಕ ಕಡೆ ವಿಶೇಷವಾಗಿ ಬರಮಾಡಿಕೊಳ್ಳಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-16-1834073297

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.