ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಮದರಸಾ ವಾರ್ಷಿಕೋತ್ಸವ

Last Updated 30 ಮಾರ್ಚ್ 2022, 2:21 IST
ಅಕ್ಷರ ಗಾತ್ರ

ಚಿಂತಾಮಣಿ: ನಗರ ಹೊರವಲಯದ ಕರಿಯಪ್ಪಲ್ಲಿಯ ಮಸೀದಿ ಬಳಿ ಇರುವ ಅಂಜುಮಾನ್-ಎ-ಉಸ್ಮಾನಿಯಾ ಅರಬ್ಬಿ ಮದರಸಾ ವಾರ್ಷಿಕೋತ್ಸವ ಕಾರ್ಯಕ್ರಮ ಸೋಮವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.

ಧರ್ಮಗುರು ಅಫಿಸ್ ರಹಮತ್‌ ಉಲ್ಲಾ ಮಾತನಾಡಿ, ‘ಪೋಷಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ತಾಯಿಯ ಪಾದದ ಕೆಳಗೆ ಸ್ವರ್ಗವಿದೆ ಎಂದು ಪವಿತ್ರ ಕುರಾನ್ ಹೇಳುತ್ತದೆ. ಪ್ರತಿಯಯೊಂದು ಮಗು ಸಹ ತಂದೆ, ತಾಯಿಯನ್ನು ಕೊನೆಯವರೆಗೂ ಗೌರವದಿಂದ ಸಲುಹಬೇಕು’ ಎಂದು
ನುಡಿದರು.

ತಂದೆ, ತಾಯಿ ಮಕ್ಕಳಿಂದ ಯಾವುದೇ ಸಿರಿ ಸಂಪತ್ತನ್ನು ನಿರೀಕ್ಷಿಸುವುದಿಲ್ಲ. ವಯಸ್ಸಾದ ಸಮಯದಲ್ಲಿ ಪ್ರೀತಿ, ಮಮತೆಯನ್ನು ಬಯಸುತ್ತಾರೆ. ಅನಾವಶ್ಯಕವಾಗಿ ಸಾಕಷ್ಟು ಸಮಯವನ್ನು ವ್ಯರ್ಥ ಮಾಡುತ್ತೇವೆ. ಅಪ್ಪ-ಅಮ್ಮನ ಜತೆಗೆ ಪ್ರೀತಿಯಿಂದ ಮಾತನಾಡಿ ಅವರ ಏಕಾಂತವನ್ನು ದೂರ ಮಾಡಲು ಸಮಯ ಇರುವುದಿಲ್ಲ ಎಂದು ವಿಷಾದಿಸಿದರು.

ಮೊಬೈಲ್, ಇಂಟರ್‌ನೆಟ್‌ನಲ್ಲಿ ಮುಳುಗಿರುವ ಮಕ್ಕಳಿಗೆ ತಂದೆ, ತಾಯಿಯ ಸಮಸ್ಯೆ ಕೇಳಲು ಸಮಯವಿರುವುದಿಲ್ಲ. ಮನೆಯಲ್ಲಿದ್ದರೆ ಸಮಸ್ಯೆ ಎಂದು ವೃದ್ಧಾಶ್ರಮಗಳಿಗೆ ಕಳುಹಿಸುವ ಪದ್ಧತಿ ಹೆಚ್ಚುತ್ತಿದೆ ಎಂದರು.

ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆ ಅಧ್ಯಕ್ಷ ಬಷೀರ್ ಸಾಬ್, ಕಾರ್ಯದರ್ಶಿ ಮಾಲಿಕ ಪಾಷಾ, ಮುಮ್ತಾಜ್ ಪಾಷಾ, ಮುಸ್ತಾಕ್ ಖಾನ್, ಹಸನ್ ಪಾಷಾ, ಮುಜೀಬ್ ಪಾಷಾ, ಉಮರ್ ಫಾರೂಕ್, ಅಮ್ಜದ್ ಪಾಷಾ, ಬಾಬಾ ಮಲಂಗ ಷಾ, ಜಹೀರ, ಯಾರಬ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT