ಚಿಂತಾಮಣಿ: ಬೇಸಿಗೆಯ ಸುಡು ಬಿಸಿಲು, ಒಣ ಸನ್ನಿವೇಶ ಹಾಗೂ ಹವಾಮಾನದ ವೈಪರಿತ್ಯದ ಪರಿಣಾಮ ಮಾವಿನ ತೋಟಗಳು ಅನೇಕ ರೀತಿಯ ವಿಷಮ ಪರಿಸ್ಥಿತಿ ಎದುರಿಸುತ್ತಿವೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಎಂ.ಗಾಯಿತ್ರಿ ತಿಳಿಸಿದ್ದಾರೆ.

ವಾತಾವರಣದಲ್ಲಿ ಉಷ್ಣಾಂಶ ಏರಿದಂತೆ ಮತ್ತು ಒಣ ಸನ್ನಿವೇಶ ಸೃಷ್ಟಿಯಾದಂತೆಲ್ಲ ಥಿಮ್ಸ್ ಹುಳು ಮತ್ತು ಜಿಗಿಹುಳುಗಳು ಮಾವಿನ ಮರಗಳಿಗೆ ಹಾನಿಯುಂಟು ಮಾಡುತ್ತಿರುವುದು ಕಂಡುಬರುತ್ತಿದೆ. ಕಟ್ಟಿದ ಕಾಯಿ ಅಧಿಕ ತಾಪಮಾನದಿಂದ ಹೆಚ್ಚಿನ ಪ್ರಮಾಣದಲ್ಲಿ ಉದುರುತ್ತಿವೆ. ಎಲ್ಲ ತಳಿಗಳ ಮಾವಿನಲ್ಲಿ ಈ ಸಮಸ್ಯೆ ಕಂಡುಬಂದಿದೆ. ಬಾದಾಮಿ ತಳಿಯಲ್ಲಿ ಹೆಚ್ಚಿನ ಹಾನಿ ಉಂಟಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಹಾನಿ ಮತ್ತು ನಷ್ಟ ತಡೆಗಟ್ಟಲು ಮಾವು ಬೆಳೆಗಾರರು ನಿರ್ವಹಣಾ ಕ್ರಮಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು ಎಂದು ಅವರು ಬೆಳೆಗಾರರಿಗೆ ಸಲಹೆ ನೀಡಿದ್ದಾರೆ.

ಥ್ರಿಪ್ಸ್ ಹಾಗೂ ಜಿಗಿ ಹುಳುಗಳನ್ನು ನಾಶಪಡಿಸಲು ಬೆಳೆಗಾರರು ಇಮಿಡಾ ಕ್ಲೋರೋಫ್ರೈಡ್ ಅರ್ಧ ಎಂ.ಎಲ್, ಲ್ಯಾಮ್ಡಾ ಕ್ಯಾಲೋತ್ರಿನ್ 1 ಎಂ.ಎಲ್, ಕ್ಲೋರೊ ಫ್ರೈಪೋಸ್ 2 ಎಂ.ಎಲ್ ಅನ್ನು ಒಂದು ಲೀಟರ್ ನೀರಿಗೆ ಬೆರಸಿ ಸಿಂಪಡಣೆ ಮಾಡಬೇಕು ಎಂದು ತಿಳಿಸಿದ್ದಾರೆ.

ಕಚ್ಚಿದ ಹರಳುಗಳು ಹಾಗೂ ಚಿಕ್ಕಕಾಯಿಗಳು ಉದುರುವುದನ್ನು ತಡೆಯಲು ನೀರುಣಿಸಬೇಕು. ಕಾಯಿಗಳು ಚಿಕ್ಕದಾಗಿರುವ ಹಂತದಲ್ಲಿ ಪ್ಲ್ಯಾನೋಫಿಕ್ಸ್ ಅರ್ಧ ಎಂ.ಎಲ್ ರಸಾಯನವನ್ನು ಒಂದು ಲೀಟರ್ ನೀರಿನಲ್ಲಿ ಕರಗಿಸಿ ಕಟ್ಟಿದ ಕಾಯಿಗಳಿಗೆ ಸಿಂಪಡಿಸುವುದರಿಂದ ಉದುರುವಿಕೆ ತಡೆಗಟ್ಟಬಹುದು ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-16-1289488729

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.