ಚಿಂತಾಮಣಿ: ತಾಲ್ಲೂಕಿನ ಮುಂಗಾನಹಳ್ಳಿ ಹೋಬಳಿಯ ಬಟ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರೇಬಂಡ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆಯುತ್ತಿದ್ದ ವಿವಾಹ ನಿಂತುಹೋದ ಕಾರಣ ವರನ ತಂದೆ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.

ಬೈರೇಬಂಡ ಗ್ರಾಮದ ವೆಂಕಟರವಣಪ್ಪ (50) ಮೃತಪಟ್ಟವರು.

ವೆಂಕಟರವಣಪ್ಪ ಅವರ ಮಗನ ಮದುವೆ ಆರತಕ್ಷತೆ ಗುರುವಾರ ಸಂಜೆ ನಡೆಯುತ್ತಿತ್ತು. ಆದರೆ, ವರನಿಗೆ ಶಾಲೆ ದಾಖಲೆ ಪ್ರಕಾರ 21 ವರ್ಷ ತುಂಬಿರಲಿಲ್ಲ ಎಂಬುದಾಗಿ ನಿಯಂತ್ರಕರ ಕೊಠಡಿಗೆ ದೂರು ನೀಡಲಾಗಿತ್ತು. ಈ ಸಂಬಂಧ ಕಾರ್ಯಪ್ರವೃತ್ತರಾದ 112 ಸಹಾಯವಾಣಿ ಪೊಲೀಸರು ಮತ್ತು ಬಟ್ಲಹಳ್ಳಿ ಠಾಣೆ ಪೊಲೀಸರು ಗ್ರಾಮಕ್ಕೆ ಬಂದು ವರನ ದಾಖಲೆಗಳನ್ನು ಪರಿಶೀಲಿಸಿದ್ದರು. ಈ ಪ್ರಕಾರ, ಆಧಾರ್ ಕಾರ್ಡ್ನಲ್ಲಿ ವರನಿಗೆ 23 ವರ್ಷವಾಗಿತ್ತು. ಆದರೆ, ಶಾಲಾ ದಾಖಲೆಗಳಲ್ಲಿ 21 ವರ್ಷ ಆಗಿಲ್ಲದಿರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮದುವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ದಾಖಲೆಗಳನ್ನು ಠಾಣೆಗೆ ತರುವಂತೆ ಬುದ್ಧಿವಾದ ಹೇಳಿ ಹೋಗಿದ್ದಾಗಿ ಪೊಲೀಸರು ತಿಳಿಸಿದರು.

ತನ್ನ ಮಗನ ಮದುವೆ ಅರ್ಧಕ್ಕೆ ನಿಂತುಹೋಯಿತು ಎಂಬ ಬೇಸರ ಮತ್ತು ಬಂಧು ಬಳಗದವರ ಎದುರು ಅವಮಾನ ಹಾಗೂ ಕಾನೂನು ಕ್ರಮದ ಭಯದಿಂದ ತೀವ್ರ ಆತಂಕಕ್ಕೊಳಗಾದ ವರನ ತಂದೆ ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ. ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಬಟ್ಲಹಳ್ಳಿ ಠಾಣೆಗೆ ಜಿಲ್ಲಾ ರಕ್ಷಣಾಧಿಕಾರಿ ಕುಶಲ್ ಚೌಕ್ಸೆ, ಹೆಚ್ಚುವರಿ ಎಸ್ಪಿ ಜಗನ್ನಾಥರೈ, ಕೆಂಚರ್ಲಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ನಾರಾಯಣಸ್ವಾಮಿ, ಚಿಂತಾಮಣಿ ನಗರಠಾಣೆ ಪೊಲೀಸ್ ಇನ್ಸ್ಪೆಕ್ಟರ್ ವಿಜಿಕುಮಾರ್ ಸೇರಿದಂತೆ ಹಲವು ಪಿಎಸ್ಐ ಮತ್ತು ಎಎಸ್ಐಗಳು ಠಾಣೆ ಎದುರು ಬೀಡುಬಿಟ್ಟು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-16-1625397109

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.