ಚಿಂತಾಮಣಿ: ಬಿರು ಬೇಸಿಗೆ, ಬಿಸಿಲಿನ ತಾಪದ ನಡುವೆ ತಾಲ್ಲೂಕಿನಲ್ಲಿ ಹಾಲಿನ ಸಮೃದ್ಧಿ ಕಂಡು ಬಂದಿದೆ. ಸರಾಸರಿ ದಿನನಿತ್ಯ 1.47ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಜಿಲ್ಲೆಯ ಹಾಲು ಉತ್ಪಾದನೆಯಲ್ಲಿ ಚಿಂತಾಮಣಿ ತಾಲ್ಲೂಕು ಪ್ರಥಮ ಸ್ಥಾನದಲ್ಲಿದೆ. ಮುಂದಿನ ತಿಂಗಳಿನಿಂದ ಪ್ರತಿನಿತ್ಯ ಉತ್ಪಾದನೆ 1.60ಲಕ್ಷ ಲೀಟರ್ಗೆ ಏರಿಕೆಯಾಗಲಿದೆ ಎಂದು ಚಿಮುಲ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ಸಂಸ್ಥೆಗಳ ಪೈಪೋಟಿ ನಡುವೆಯೂ ಪ್ರಸಕ್ತ ಸಾಲಿನಲ್ಲಿ ಹಾಲಿನ ಉತ್ಪಾದನೆ ಅಧಿಕಗೊಂಡಿದೆ. ಕಳೆದ ವರ್ಷ ಈ ಮಾಹೆಯಲ್ಲಿ ಒಂದು ಲಕ್ಷ ಲೀಟರ್ ಉತ್ಪಾದನೆಯಾಗುತ್ತಿತ್ತು. ಚಿಮುಲ್ ಮಾಹಿತಿ ಪ್ರಕಾರ ತಾಲ್ಲೂಕಿನಲ್ಲಿ 242 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಅದರಲ್ಲಿ 25 ಮಹಿಳಾ ಸಂಘಗಳಿವೆ. ಇನ್ನೂ 50 ಸಂಘಗಳ ಸ್ಥಾಪನೆಗೆ ಬೇಡಿಕೆ ಇದೆ.

ಕೋಲಾರ ಹಾಲು ಒಕ್ಕೂಟದಿಂದ ಚಿಕ್ಕಬಳ್ಳಾಪುರ ಬೇರ್ಪಟ್ಟು ಪ್ರತ್ಯೇಕ ಒಕ್ಕೂಟ ಸ್ಥಾಪನೆಯಾದ ನಂತರ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ಒಕ್ಕೂಟ ಹೈನೋದ್ಯಮಕ್ಕೆ ನೀಡಿದ ಉತ್ತೇಜನ ಮತ್ತು ವಿವಿಧ ರೀತಿಯ ಪ್ರೋತ್ಸಾಹ, ಹಾಲು ಉತ್ಪಾದಕರ ಸಹಕಾರ ಸಂಘಗಳ ಬಲವರ್ಧನೆಯಿಂದ ಬಿರು ಬೇಸಿಗೆಯಲ್ಲೂ ಹಾಲಿನ ಹೊಳೆ ಹರಿಯುತ್ತಿದೆ.

ತಾಲ್ಲೂಕಿನಲ್ಲಿ ನಾಯಿಂದ್ರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಪ್ರಥಮ ಸ್ಥಾನದಲ್ಲಿದೆ. ನಿತ್ಯ 3,150ರಿಂದ 3,200 ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಒಕ್ಕೂಟದಿಂದ ಲಾಭದಾಯಕ ಬೆಲೆಯೂ ಸಿಗುತ್ತಿದೆ. ಹಾಲಿನ ಗುಣಮಟ್ಟಕ್ಕೆ ಅನುಗುಣವಾಗಿ ಲೀಟರ್ಗೆ ಕನಿಷ್ಠ ₹35.65ನಿಂದ ₹40ವರೆಗೆ ದರವಿದೆ. ಜತೆಗೆ ಸರ್ಕಾರ ಲೀಟರ್ಗೆ ₹5 ಪ್ರೋತ್ಸಾಹದಾಯಕ ಹಣ ನೀಡುತ್ತಿದೆ. ಹೆಚ್ಚಿನ ರೈತರು ಹಾಲು ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ತಾಲ್ಲೂಕಿನಲ್ಲಿ ತರಕಾರಿ, ಟೊಮೆಟೊ, ಹೂವು ರೇಷ್ಮೆ ಪ್ರಮುಖವಾಗಿ ಬೆಳೆಯಲಾಗುತ್ತಿದೆ. ಬೆಲೆ ಕುಸಿತ ಮತ್ತು ವಿವಿಧ ರೋಗಗಳಿಂದ ರೇಷ್ಮೆ ಉದ್ಯಮ ಕುಸಿದಿದೆ. ವರ್ಷ ವರ್ಷ ರೇಷ್ಮೆ ಬೆಳೆಗಾರರ ಸಂಖ್ಯೆ ಹಾಗೂ ಹಿಪ್ಪುನೇರಳೆ ಸೊಪ್ಪು ಬೆಳೆಯುವ ಪ್ರದೇಶ ಕುಸಿಯುತ್ತಿದೆ. ತರಕಾರಿ ಮತ್ತು ಟೊಮೆಟೊಗೂ ಸ್ಥಿರ ಬೆಲೆ ಇರುವುದಿಲ್ಲ. ಬೆಳೆ ಮತ್ತು ಉತ್ಪಾದನೆ ಚೆನ್ನಾಗಿದ್ದರೆ ಬೆಲೆ ಇರುವುದಿಲ್ಲ; ಬೆಲೆ ಚೆನ್ನಾಗಿದ್ದರೆ ಬೆಳೆ ಇರುವುದಿಲ್ಲ ಎಂಬುದು ರೈತರ ಅಳಲು.

ಹೈನುಗಾರಿಕೆಯಲ್ಲಿ ಯಾವುದೇ ಏರುಪೇರಿಲ್ಲದೆ 15 ದಿನಗಳಿಗೊಮ್ಮೆ ನಿರ್ದಿಷ್ಟ ಹಣ ಕೈಸೇರುತ್ತದೆ. ಹೈನೋದ್ಯಮ ತಾಲ್ಲೂಕಿನ ರೈತರ ಜೀವನಾಡಿಯಾಗಿದೆ. ಬಡವರು-ಶ್ರೀಮಂತರೆನ್ನದೆ ಬಹುತೇಕರು ಹೈನೋದ್ಯಮದಿಂದ ಬದುಕು ಕಟ್ಟಿಕೊಂಡಿದ್ದಾರೆ. ಶ್ರೀಮಂತರು, ದೊಡ್ಡ ರೈತರು ಉಪವೃತ್ತಿಯಾಗಿ ಹೈನೋದ್ಯಮ ಕೈಗೊಂಡಿದ್ದಾರೆ. ಬಡವರು ಒಂದು ಅಥವಾ ಎರಡು ಹಸು ಸಾಕುವ ಮೂಲಕ ಜೀವನದ ಬಂಡಿ ಸಾಗಿಸುತ್ತಿದ್ದಾರೆ.

ಹಾಲಿನ ಉತ್ಪಾದನೆಯಲ್ಲಿ ತಾಲ್ಲೂಕು ಮುಂಚೂಣಿಯಲ್ಲಿದೆ. ಶೇಖರಿಸಿದ ಹಾಲನ್ನು ತ್ವರಿತಗತಿಯಲ್ಲಿ ಮುಖ್ಯ ಡೇರಿಗೆ ಕಳುಹಿಸುವುದು ಮತ್ತು ಕೆಡದಂತೆ ರಕ್ಷಿಸುವ ಉದ್ದೇಶದಿಂದ ಒಕ್ಕೂಟ ಹಾಲು ಶೀತಲೀಕರಣ ಕೇಂದ್ರವನ್ನು ವಿಕೇಂದ್ರೀಕರಣಗೊಳಿಸಿ ತಾಲ್ಲೂಕಿನಲ್ಲಿ 41 ಬಲ್ಕ್ ಮಿಲ್ಕ್ ಸೆಂಟರ್ (ಬಿ.ಎಂ.ಸಿ)ಗಳನ್ನು ಸ್ಥಾಪಿಸಿದೆ. ಈ ತಿಂಗಳಿನಲ್ಲಿ ಮತ್ತೆ 5 ಬಿ.ಎಂ.ಸಿ ಕೇಂದ್ರಗಳು ಆರಂಭವಾಗಲಿವೆ. 4-5 ಡೇರಿಗಳಿಗೆ ಒಂದರಂತೆ ಬಿ.ಎಂ.ಸಿಗಳಿರುವುದರಿಂದ ಸಂಗ್ರಹವಾದ ಹಾಲು ಶೀತಲೀಕರಣಗೊಳಿಸಲು ತ್ವರಿತವಾಗಿ ಕೇಂದ್ರಗಳಿಗೆ ತಲುಪಿಸಲಾಗುತ್ತದೆ.

ತಾಲ್ಲೂಕಿನಲ್ಲಿನ 166 ಹಾಲು ಉತ್ಪಾದಕರ ಸಹಕಾರ ಸಂಘಗಳು ಸ್ವಂತ ಕಟ್ಟಡಗಳನ್ನು ಹೊಂದಿವೆ. 23 ಸಂಘಗಳಿಗೆ ಸ್ವಂತ ನಿವೇಶನಗಳಿವೆ. ಸಂಘಗಳಿಗೆ ಸ್ವಂತ ಕಟ್ಟಡಗಳ ನಿರ್ಮಾಣಕ್ಕಾಗಿ ಕರ್ನಾಟಕ ಹಾಲು ಮಹಾಮಂಡಳಿಯಿಂದ ₹5ಲಕ್ಷ, ಚಿಮುಲ್ನಿಂದ ₹3ಲಕ್ಷ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ₹2 ಲಕ್ಷ ಸೇರಿ ಒಟ್ಟು ₹10ಲಕ್ಷ ಅನುದಾನ ಸಿಗುತ್ತದೆ. ಉತ್ತಮ ಗುಣಮಟ್ಟದ ಹಾಲು ಶೇಖರಣೆಗಾಗಿ ಎಲ್ಲ ಸಂಘಗಳು ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಬೇಕು ಎಂದು ಚಿಮುಲ್ ನಿರ್ದೇಶಕ ಅಶ್ವತ್ಥನಾರಾಯಣ ಬಾಬು ಸಲಹೆ ನೀಡಿದರು.

ಒಕ್ಕೂಟ ಹಾಲು ಉತ್ಪಾದಕರ ಸಹಕಾರ ಸಂಘಗಳ ಬಲವರ್ಧನೆಗೆ ಒತ್ತು ನೀಡಿರುವುದರಿಂದ ಹಾಲು ಉತ್ಪಾದಕರಲ್ಲೂ ಆಸಕ್ತಿ ಮೂಡಿದೆ. ಹಾಲಿನ ಉತ್ಪಾದನೆ ಹೆಚ್ಚಿಸಲು ಒಕ್ಕೂಟ ಗಮನ ಹರಿಸಿದೆ. ಹಾಲು ಉತ್ಪಾದಕರಿಗೆ ಉಚಿತವಾಗಿ ಜೋಳದ ಬೀಜ ವಿತರಿಸಲಾಗಿತ್ತು. ಮೇವು ಬೆಳೆಸಲು ಎಕರೆಗೆ ₹3 ಸಾವಿರ ಪ್ರೋತ್ಸಾಹಧನ ನೀಡಲಾಗಿತ್ತು. ಇದರಿಂದ ಹಸಿರು ಮೇವು ಹೆಚ್ಚಾಗಿ ಬೆಳೆದಿದ್ದು, ಹಾಲಿನ ಉತ್ಪಾದನೆ ಹೆಚ್ಚಳಕ್ಕೆ ಕಾರಣವಾಗಿದೆ.

ತಾಲ್ಲೂಕಿನಲ್ಲಿ 25 ಮಹಿಳಾ ಹಾಲು ಉತ್ಪಾದಕ ಸಹಕಾರ ಸಂಘಗಳಿವೆ ಎಂದು ಮಾಹಿತಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-16-937628122

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.