ಚಿಂತಾಮಣಿ: ತಾಲ್ಲೂಕಿನ ಮುರುಗಮಲ್ಲ ಕೆರೆಯಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಲು ಹೋದ ತಾಯಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಬೆಂಗಳೂರಿನ ಬನಶಂಕರಿಯ ತಬಸುಂ ಖಾನಂ (25) ಮೃತಪಟ್ಟಿರುವ ತಾಯಿ. ಪತಿ ಅಥಾವುಲ್ಲಾ, ಪತ್ನಿ ತಬಸುಂ ಖಾನಂ, ಅಳಿಯ ಸೈಯದ್ ಆಲಿ ಹಾಗೂ ಇಬ್ಬರು ಮಕ್ಕಳು ಮುರುಗಮಲ್ಲ ಅಮ್ಮಾಜಾನ್ ಮತ್ತು ಬಾವಾಜಾನ್ ದರ್ಗಾ ದರ್ಶನಕ್ಕೆ ಬಂದಿದ್ದರು. ಕುಟುಂಬದ ಎಲ್ಲರೂ ಕೆರೆ ಬಳಿ ಸ್ನಾನಕ್ಕೆ ಮತ್ತು ಬಟ್ಟೆ ಒಗೆಯಲು ತೆರಳಿದ್ದರು. ಮಕ್ಕಳು ಆಟವಾಡುತ್ತಾ ಕೆರೆಯ ನೀರಿಗೆ ಇಳಿದಿದ್ದಾರೆ.

ನೀರಿನ ಆಳ ಅರಿಯದ ಮಕ್ಕಳು ಮುಳುಗುತ್ತಿರುವುದನ್ನು ಕಂಡ ತಾಯಿ ತಬಸುಂ ಖಾನಂ ಮಕ್ಕಳನ್ನು ರಕ್ಷಿಸಲು ಹೋಗಿದ್ದಾರೆ. ಸ್ವಲ್ಪ ದೂರದಲ್ಲಿದ್ದ ತಂದೆ ಅಥಾವುಲ್ಲ ಖಾನ್ ಮತ್ತು ಅಳಿಯ ಸೈಯದ್ ಆಲಿ ಕಿರುಚಾಟ ಕೇಳಿಸಿಕೊಂಡು ತಾಯಿ ಮತ್ತು ಮಕ್ಕಳನ್ನು ರಕ್ಷಿಸಲು ಕೆರೆಗೆ ಇಳಿದಿದ್ದಾರೆ.

ಅಥಾವುಲ್ಲಾ ಖಾನ್ ಮತ್ತು ಸೈಯದ್ ಆಲಿ ಮಕ್ಕಳನ್ನು ರಕ್ಷಿಸಿ ಸುರಕ್ಷಿತವಾಗಿ ದಡಕ್ಕೆ ತಂದಿದ್ದಾರೆ. ತಬಸುಂ ಖಾನಂ ಕೆರೆಯ ಆಳದಲ್ಲಿ ಸಿಲುಕಿ ಮುಳುಗಿದ್ದಾಳೆ.

ಸ್ಥಳೀಯರು ಮತ್ತು ಪ್ರವಾಸಿಗರು ರಕ್ಷಣೆಗೆ ಮುಂದಾದರೂ ಆಕೆಯನ್ನು ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. ಕೊನೆಗೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಕೆರೆಯಿಂದ ಮಹಿಳೆ ಹೊರತೆಗೆಯುವಷ್ಟರಲ್ಲಿ ಮೃತಪಟ್ಟಿದ್ದರು.

ಶವವನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-16-261939414

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.