ಚಿಂತಾಮಣಿ: ಕೇಂದ್ರ ಸರ್ಕಾರದ ನಿವೃತ್ತ ನೌಕರರ ಪಿಂಚಣಿ ಕಾಯ್ದೆ–2025ರ ಜಾರಿಯಿಂದ ನಿವೃತ್ತ ನೌಕರರಿಗೆ ಆರ್ಥಿಕ ಅಭದ್ರತೆ ಉಂಟಾಗಲಿದೆ. ನಿವೃತ್ತ ನೌಕರರ ಬದುಕು ದುಸ್ತರವಾಗಲಿದೆ. ತುಟ್ಟಿಭತ್ಯೆ ಕಡಿತಗೊಳಿಸುವ ಕಾಯ್ದೆಯನ್ನು ಕೈಬಿಡಬೇಕು ಎಂದು ತಾಲ್ಲೂಕು ನಿವೃತ್ತ ಸರ್ಕಾರಿ ನೌಕರರ ಸಂಘ ಒತ್ತಾಯಿಸಿದೆ.

ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ವಿ.ಚೌಡಪ್ಪ ಮಾತನಾಡಿ, ಹಿರಿಯ ನಾಗರಿಕರಿಗೆ ಭದ್ರತೆ ಒದಗಿಸಬೇಕು. ಅವರ ಜೀವನ ಸುಗಮವಾಗಿ ಸಾಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಸಂವಿಧಾನ ಆಶಯವಾಗಿದೆ. 2025ರ ಕಾಯ್ದೆಯು ಸುಪ್ರೀಂಕೋರ್ಟ್ ತೀರ್ಪು, ಕಲ್ಯಾಣ ರಾಷ್ಟ್ರದ ಪರಿಕಲ್ಪನೆ ಹಾಗೂ ಸಂವಿಧಾನಕ್ಕೆ ವಿರುದ್ಧ ಎಂದರು.

2025ರ ಕಾಯ್ದೆ ಕುರಿತು ಯಾವುದೇ ಪೂರ್ವ ಸೂಚನೆ ನೀಡದೆ, ಲೋಕಸಭೆಯಲ್ಲಿ ಚರ್ಚೆ ಮಾಡದೆ ಹಣಕಾಸು ಮಸೂದೆ ಭಾಗವಾಗಿ ಪರಿಚಯಿಸಲಾಗಿದೆ. ಮಸೂದೆಯನ್ನು 2025ರ ಮಾರ್ಚ್ 25ರಂದು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ಕಾಯ್ದೆ ಅನುಷ್ಠಾನಗೊಂಡರೆ ಸರ್ಕಾರಗಳು ಬೆಲೆ ಏರಿಕೆ ಸೂಚ್ಯಂಕಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ಸರ್ಕಾರಿ ನೌಕರರಿಗೆ ಹೆಚ್ಚಿಸುತ್ತಿರುವ ತುಟ್ಟಿಭತ್ಯೆ ಮತ್ತು ವೇತನ ಆಯೋಗಗಳ ಸೌಲಭ್ಯದಿಂದ ನಿವೃತ್ತ ನೌಕರರು ವಂಚಿತರಾಗಲಿದ್ದಾರೆ ಎಂದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಈ ಕಾಯ್ದೆಯಿಂದ ನಿವೃತ್ತ ನೌಕರರು ವೇತನ ಆಯೋಗದ ಶಿಫಾರಸು ಸೇರಿದಂತೆ ಹಲವಾರು ಸೌಲಭ್ಯಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-16-1778635068

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.