ಚಿಂತಾಮಣಿ: ಹೊಸ ಆರ್ಥಿಕ ವರ್ಷವು ಏಪ್ರಿಲ್ 1ರಿಂದ ಆರಂಭವಾಗಲಿದ್ದು, ತಿಂಗಳ ಆರಂಭದಲ್ಲಿ ಆಸ್ತಿ ತೆರಿಗೆ ಪಾವಸಿತುವ ನಾಗರಿಕರಿಗೆ ಶೇ 5ರಷ್ಟು ರಿಯಾಯಿತಿ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎಂದು ನಗರಸಭೆ ಆಯುಕ್ತ ಜಿ.ಎನ್. ಚಲಪತಿ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗರಿಕರು ಸುಲಭವಾಗಿ ತೆರಿಗೆ ಪಾವತಿಸಲು ಅನುಕೂಲವಾಗುವಂತೆ ನಗರಸಭೆ ಹಾಗೂ ವಿವಿಧ ಭಾಗಗಳಲ್ಲಿ ತೆರಿಗೆ ವಸೂಲಿ ಕೇಂದ್ರ ತೆರೆಯಲಾಗುವುದು. ನಗರಸಭೆ ಕಚೇರಿಯಲ್ಲಿ ಬ್ಯಾಂಕ್ ಕೌಂಟರ್ ತೆರೆಯಲಾಗಿದೆ. ನಾಗರಿಕರು ಚಲನ್ ಪಡೆದು ತೆರಿಗೆ ಪಾವತಿಸಬಹುದು ಎಂದರು.

ವಾಣಿಜ್ಯ ಮಳಿಗೆಗಳ ತೆರಿಗೆ ಮೌಲ್ಯಮಾಪನವನ್ನು ನಗರಸಭೆ ಅಧಿಕಾರಿಗಳು ಮರುಪರಿಶೀಲನೆ ಮಾಡಲಿದ್ದಾರೆ. ತೆರಿಗೆ ನಿಗದಿಪಡಿಸುವಲ್ಲಿ ವಂಚನೆ, ಮೋಸ ಕಂಡುಬಂದಲ್ಲಿ ದುಪ್ಪಟ್ಟು ದಂಡ ವಿಧಿಸಲಾಗುವುದು. ವಿಶೇಷವಾಗಿ ವಾಣಿಜ್ಯ ಮಳಿಗೆಗಳ ತೆರಿಗೆಯನ್ನು ಕಾನೂನಿನಂತೆ ಮೌಲ್ಯಮಾಪನ ಮಾಡಿ ಪಾವತಿಸಬೇಕು ಎಂದರು.

ಬೇಸಿಗೆ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆ ನೀಗಿಸಲು 20 ಹೊಸ ಬೋರ್ವೆಲ್ಗಳನ್ನು ಕೊರೆಸಲಾಗಿದೆ. ಶೀಘ್ರವೇ ಪಂಪ್ ಮತ್ತು ಮೋಟಾರು ಅಳವಡಿಸಲಾಗುವುದು. ಸಮರ್ಪಕವಾಗಿ ನೀರು ಒದಗಿಸಲು ಸಾಧ್ಯವಾಗುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಾರ್ವಜನಿಕರು ನೀರನ್ನು ಪೋಲು ಮಾಡದೆ ಮಿತವಾಗಿ ಬಳಸಬೇಕು ಎಂದು ಮನವಿ ಮಾಡಿದರು.

ನಗರದ ದೊಡ್ಡಪೇಟೆ ರಸ್ತೆ ಅಭಿವೃದ್ಧಿಗಾಗಿ ಮಾರ್ಕ್ ಮಾಡಲಾಗಿದೆ. ರಸ್ತೆ ಮಧ್ಯೆಯಿಂದ ಎರಡು ಕಡೆ 6 ಮೀಟರ್ ಇರಲಿದೆ. 2–3 ದಿನಗಳಲ್ಲಿ ರಸ್ತೆಯ ನಿವಾಸಿಗಳ ಸಭೆ ಕರೆಯಲಾಗುವುದು. ರೈಲ್ವೆ ನಿಲ್ದಾಣ ಮತ್ತು 3–4 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ಆ ಭಾಗದ ನಾಗರಿಕರು ಸಹಕರಿಸಬೇಕು ಎಂದರು.

ಆಡಳಿತಾಧಿಕಾರಿಗಳ ಆದೇಶದಂತೆ ವಿವಿಧ ಅನುದಾನದಿಂದ ಒಂದು ಸಾವಿರ ದೀಪಗಳನ್ನು ಖರೀದಿಸಿ, ನಗರದಾದ್ಯಂತ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ. ನಗರದ ಸರ್ವತೋಮುಖ ಅಭಿವೃದ್ಧಿಗೆ ನಾಗರಿಕರು ಸಹಕರಿಸಬೇಕೆಂದು ಪೌರಾಯುಕ್ತರು ಮನವಿ ಮಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-16-1321915271

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.