ಚಿಂತಾಮಣಿ: ನೈರುತ್ಯ ಬಂಗಾಳಕೊಲ್ಲಿಯ ‘ದಿತ್ವಾ’ ಚಂಡಮಾರುತದ ಪರಿಣಾಮ ಕಳೆದೊಂದು ವಾರದಿಂದ ಗಾಳಿ–ಮಳೆ ಹಾಗೂ ಮೋಡಕವಿದ ವಾತಾವರಣವಿದೆ. ಇದರಿಂದ ಹೊಲಗಳಲ್ಲಿ ರಾಗಿ ಬೆಳೆ ನೆಲಕಚ್ಚಿದೆ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ರಾಗಿ ಬೆಳೆ ನೆಲಕಚ್ಚಿ ಹಾಳಾಗಿದೆ ಎಂದು ರೈತರು ಅವಲತ್ತುಕೊಳ್ಳುತ್ತಾರೆ.

ತಾಲ್ಲೂಕಿನಲ್ಲಿ ಒಂದು ವಾರದಿಂದ ಎಡಬಿಡದೆ ಜಡಿಮಳೆ ಸುರಿಯುತ್ತಿದೆ. ಮೋಡ ಕವಿದ ವಾತಾವರಣದಿಂದ ಕಟಾವಿಗೆ ಬಂದಿದ್ದ ರಾಗಿ ಬೆಳೆ ಕೊಯ್ಲಿಗೆ ಅಡ್ಡಿಯಾಗಿದೆ. ಬೆಳೆ ನೆಲಕಚ್ಚಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಳೆ ಹುಲುಸಾಗಿ ಬೆಳೆದಿದ್ದು, ತೆನೆಕಟ್ಟಿದ್ದ ರಾಗಿ ಪೈರು ಜಡಿಮಳೆಯಿಂದ ನೆಲಕ್ಕೆ ಬಾಗಿ ಸಂಪೂರ್ಣವಾಗಿ ಚಾಪೆ ಹಾಸಿದಂತೆ ಮಲಗಿದೆ. ಹುಲ್ಲು ಹಾಗೂ ರಾಗಿ ಕಪ್ಪಾಗುತ್ತಿದೆ. ತೆನೆ ನೆಲದಲ್ಲಿರುವುದರಿಂದ ರಾಗಿ ಮೊಳಕೆಯಾಗುವುದು, ನೆಲಕ್ಕೆ ಉದುರುವ ಆತಂಕ ರೈತರನ್ನು ಕಾಡುತ್ತಿದೆ. ನೆಲದಲ್ಲಿ ತೇವಾಂಶ ಹೆಚ್ಚಿರುವುದರಿಂದ ಕೊಯ್ಲು ಮಾಡಲು ಸಾಧ್ಯವಿಲ್ಲ. ಕೊಯ್ಲು ಮಾಡದಿದ್ದರೆ ಬೆಳೆ ಹಾಳಾಗುತ್ತದೆ. ಕೈಗೆ ಬಂದ ಬೆಳೆ ಮಣ್ಣು ಪಾಲಾಗುತ್ತಿದೆ. ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡರು.

ಕೆಲವು ರೈತರು ತೆನೆಯನ್ನು ಕಟಾವು ಮಾಡಿಕೊಂಡು ಒಣಗಿಸಿ ಯಂತ್ರದ ಮೂಲಕ ರಾಗಿ ಮಾಡಿಕೊಳ್ಳುತ್ತಾರೆ. ತೆನೆ ಕಟಾವು ಮಾಡಲು ಸಹ ಹೊಲದಲ್ಲಿ ಹೆಜ್ಜೆ ಇಡಲು ಸಾಧ್ಯವಿಲ್ಲ. ಕಟಾವು ಮಾಡಿರುವವರು ತೆನೆ ಒಣಗಿಸಲಾಗದೆ, ಪರದಾಡುತ್ತಿದ್ದಾರೆ. ತೆನೆಯು ಬೂದು ಬಂದು ರಾಗಿ ಕೆಡುತ್ತದೆ. ಆಹಾರವಾಗಿ ಸೇವನೆ ಮಾಡಲು ಯೋಗ್ಯವಾಗುವುದಿಲ್ಲ ಎನ್ನುವ ಆತಂಕ ರೈತರದ್ದು.

ನೆಲಕಚ್ಚಿರುವ ರಾಗಿ ಕೊಯ್ಲು ಮಾಡಲು ಕೂಲಿಯವರು ಒಪ್ಪುವುದಿಲ್ಲ. ಅವರ ಕೈ ಕಾಲು ಹಿಡಿದು ಒಪ್ಪಿಸಿದರೆ ಹೆಚ್ಚು ಹಣ ಕೇಳುತ್ತಾರೆ. ಕಳೆದ 2-3 ವರ್ಷದಿಂದ ಮಳೆಯಿಲ್ಲದೆ ಬಿತ್ತಿದ ಬೀಜ, ಗೊಬ್ಬರ ಖರ್ಚು ಬಾರದೆ ನಷ್ಟ ಆಗಿತ್ತು. ಇದರಿಂದಾಗಿ ಮಾಡಿದ ಸಾಲ ತೀರಿಸಲಾಗದೆ ರೈತರು ಕುಗ್ಗಿ ಹೋಗಿದ್ದರು. ಈ ವರ್ಷದ ಮಳೆಗಾಲ ರೈತನ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಆದರೆ ಈ ದಿತ್ವಾ ಚಂಡ ಮಾರುತವು ಆ ಖುಷಿಯನ್ನು ಕಿತ್ತುಕೊಂಡಂತಾಗಿದೆ.

ತಾಲ್ಲೂಕಿನಲ್ಲಿ 17,477 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿತ್ತು. ಕೆಲವು ಜಮೀನುಗಳಲ್ಲಿ ರಾಗಿ ಬೆಳೆ ಬಾಗಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ಬಾಗಿ ತೆನೆಗಳು ನೆಲಕ್ಕೆ ಮುತ್ತುವಂತಿದೆ. ನೆಲಕ್ಕೆ ಬಿದ್ದ ರಾಗಿ ತೆನೆಗಳಲ್ಲಿ ಮೊಳಕೆ ಒಡೆಯುವ ಪರಿಸ್ಥಿತಿಗೆ ಬಂದಿದೆ. ಕೊಯ್ಲು ಮಾಡಿದರೆ ಒಕ್ಕಣೆ ಮಾಡಲು ಆಗುವುದಿಲ್ಲ. ಹೊಲದಲ್ಲಿ ಬಿಟ್ಟರೆ ಮೊಳಕೆ ಹೊಡೆಯುವ ಭೀತಿ ಇದೆ.

ಒಂದು ವಾರದಿಂದ ಸೂರ್ಯನ ದರ್ಶನ ಆಗಿರಲಿಲ್ಲ. ಗುರುವಾರ ಆಗಾಗ ಸೂರ್ಯ ಇಣುಕಿ ನೋಡುತ್ತಿದ್ದ. ವಾತಾವರಣ ಬದಲಾಗಬಹುದು ಎಂಬ ಆಶಾಭಾವನೆಯಲ್ಲಿ ರೈತರಿದ್ದರು. ಆದರೆ, ಶುಕ್ರವಾರ ಮತ್ತೆ ಮೋಡ ಕವಿದ ವಾತಾವರಣವೇ ಮನೆ ಮಾಡಿದೆ. ಇನ್ನೂ 2-3 ದಿನ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದಾಗಿ ರೈತರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.

ರಾಗಿ ಒಣಗಿಸಲು ದಿತ್ವಾ ಅಡ್ಡಿ

ಮೊದಲು ಬಿತ್ತನೆಯಾಗಿದ್ದ ಶೇ 50 ರಷ್ಟು ಬೆಳೆ ಕೊಯ್ಲು ಮುಗಿದಿದ್ದರೂ ಒಕ್ಕಣೆ ಮಾಡಲು ರಾಗಿ ಒಣಗಿಸಲು ಮಳೆ ಅಡ್ಡಿಯಾಗಿದೆ. ತಡವಾಗಿ ಬಿತ್ತನೆ ಮಾಡಿರುವುದು ಸಹ ಕೊಯ್ಲಿಗೆ ಬಂದಿದೆ. ರೈತರು ಕೊಯ್ಲು ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಕೃಷಿ ಕಾರ್ಮಿಕರ ಕೊರತೆ ಕೂಲಿ ಹಾಗೂ ಗುತ್ತಿಗೆ ದರ ಹೆಚ್ಚಾಗುವುದರಿಂದ ಕೆಲವರು ಕಟಾವು ಯಂತ್ರದಿಂದ ಕೊಯ್ಲು ಮಾಡಿಸಲು ಸಿದ್ಧತೆ ನಡೆಸಿದ್ದರು. ಒಂದು ವಾರದಿಂದ ಮೋಡ ಕವಿದ ವಾತಾವರಣದಿಂದ ಜಡಿಮಳೆ ಸುರಿಯುತ್ತಿರುವುದರಿಂದ ಬೆಳೆ ಕೊಯ್ಲು ಮಾಡಲು ಸಾಧ್ಯವಾಗುತ್ತಿಲ್ಲ. ಚೆನ್ನಾಗಿ ಬೆಳೆ ಆಗಿದ್ದರೂ ರೈತರು ಸಂಕಷ್ಟ ಎದುರಿಸುವಂತಾಗಿದೆ ಎನ್ನುತ್ತಾರೆ ರೈತ ಮುನಿಕೃಷ್ಣಪ್ಪ. ನೆಲಕ್ಕೆ ಬಾಗಿದ ಪೈರು ರಾಗಿ ಬೆಳೆ ಹುಲುಸಾಗಿ ಬೆಳೆದು ಕಟಾವಿಗೆ ಬಂದಿತ್ತು. ಒಂದು ವಾರದಿಂದ ಮಳೆ ಬೀಳುತ್ತಿರುವುದರಿಂದ ಸಕಾಲಕ್ಕೆ ಕೊಯ್ಲು ಮಾಡಲು ಸಾಧ್ಯವಾಗಿಲ್ಲ. ತೆನೆಯ ಭಾರದಿಂದ ಬೆಳೆ ನೆಲಕ್ಕೆ ಹಾಸಿಕೊಂಡಿದೆ. ನೆಲಕ್ಕೆ ತಾಗುವ ರಾಗಿ ಮೊಳಕೆ ಬರುವುದು ಕಪ್ಪಾಗಿ ನೆಲಕ್ಕೆ ಉದುರುತ್ತದೆ. ಸತತ ಮಳೆಯಿಂದ ರಾಗಿ ಹಾಗೂ ಹುಲ್ಲು ಎರಡು ಹಾಳಾಗುತ್ತದ ಶಶಿಕುಮಾರ್ ರೈತ ಕೃಷಿ ಕಾರ್ಮಿಕರ ಕೊರತೆ ರಾಗಿ ಕೊಯ್ಲು ಮಾಡಲು ಕೃಷಿ ಕಾರ್ಮಿಕರ ಕೊರತೆ ಇದೆ. ಕಟಾವು ಯಂತ್ರದಿಂದ ಕಟಾವು ಮಾಡಿಸಲು ತೀರ್ಮಾನಿಸಿದ್ದೆ. ಮೋಡದ ವಾತಾವರಣ ತುಂತರು ಮಳೆ ಬರುತ್ತಿದ್ದರೆ ಕಟಾವು ಯಂತ್ರದಿಂದಲೂ ಕೊಯ್ಲು ಮಾಡಿಸಲಾಗದು. ನೆಲದ ತೇವಾಂಶ ಹಾಗೂ ಹುಲ್ಲಿನಲ್ಲಿ ತೇವಾಂಶ ಇಲ್ಲದಿದ್ದರೆ ಮಾತ್ರ ಯಂತ್ರದಿಂದ ಕಟಾವು ಮಾಡಿಸಬಹುದು. ಹೀಗಾಗಿ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ. ಕೃಷ್ಣಪ್ಪ ಕೈವಾರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.