ಚಿಂತಾಮಣಿ: ತಾಲ್ಲೂಕಿನ ಕಸಬಾ ಹೋಬಳಿಯ ಬ್ರಾಹ್ಮಣರದಿನ್ನೆಗ್ರಾಮದಲ್ಲಿ ಗುರುವಾರ ಸುರಿದ ಬಿರುಗಾಳಿ ಮಳೆಗೆ ಫಸಲಿಗೆ ಬಂದಿದ್ದ ಬಾಳೆತೋಟ ನೆಲಕಚ್ಚಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ರೈತ ಅವಲತ್ತುಕೊಂಡರು.

ಗಡದಾಸನಹಳ್ಳಿಯ ರೈತ ಜಿ.ಎಂ. ತಟ್ಟೇಗೌಡ ಬ್ರಾಹ್ಮಣರದಿನ್ನೆ ಗ್ರಾಮದ ಸರ್ವೆ ನಂ 55 ಮತ್ತು 56ರ ಸುಮಾರು 8.5 ಎಕರೆಯಲ್ಲಿ ಬಾಳೆ ನಾಟಿ ಮಾಡಿದ್ದರು. ಉಲುಸಾದ ಬೆಳೆಯಾಗಿದ್ದು, ಇನ್ನೇನು ಫಸಲು ಆರಂಭವಾಗುವುದರಲ್ಲಿತ್ತು. ಬಾಳೆ ಗೊನೆಗಳು ಬಲಿಯುತ್ತಿದ್ದವು. ಗುರುವಾರ ಬೀಸಿದ ಬಿರುಗಾಳಿ ಮತ್ತು ಮಳೆಗೆ ತೋಟ ಸಂಪೂರ್ಣ ಹಾಳಾಗಿದ್ದು, ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗಿದೆ.

ಬಾಳೆ ಬೆಳೆ ಫಸಲು ಬರಲು ಸುಮಾರು 13-14 ತಿಂಗಳು ಕಾಯಬೇಕು. ಈ ಬೆಳೆಗೆ 11 ತಿಂಗಳಾಗಿತ್ತು. ಇನ್ನು ಒಂದೆರಡು ತಿಂಗಳಲ್ಲಿ ಬಾಳೆ ಗೊನೆಗಳು ಕೊಯ್ಲಿಗೆ ಬರುತ್ತಿದ್ದವು. ಸುಮಾರು ₹30 ಲಕ್ಷ ನಷ್ಟವಾಗಿದೆ. ಸರ್ಕಾರ ನೆರವಿಗೆ ಬಂದು ಪ್ರಕೃತಿ ವಿಕೋಪದಡಿ ಬೆಳೆ ಪರಿಹಾರ ನೀಡಬೇಕು ಎಂದು ಅವರು ಮನವಿ ಮಾಡುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-16-1615960575

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.