ಚಿಂತಾಮಣಿ: ನಗರದ ಮೆಗಾ ಫ್ಯಾಮಿಲಿ ಫ್ಯಾನ್ಸ್ ಕ್ಲಬ್, ಲಯನ್ಸ್ ಕ್ಲಬ್ ಸಹಕಾರದೊಂದಿಗೆ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಹುಟ್ಟುಹಬ್ಬದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ 172 ಯೂನಿಟ್ ರಕ್ತ ಸಂಗ್ರಹಣೆಯಾಗಿದೆ.

ನೂರಾರು ಯುವಜನರು ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೂ ರಕ್ತದಾನ ಮಾಡಿದರು. ಚಿಕ್ಕಬಳ್ಳಾಪುರದ ರೆಡ್ಕ್ರಾಸ್ ಸಂಸ್ಥೆ ಮತ್ತು ಬೆಂಗಳೂರಿನ ಜಯನಗರದ ಲಯನ್ಸ್ ಕ್ಲಬ್ ರಕ್ತನಿಧಿ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ ರಕ್ತದಾನಿಗಳಿಂದ ರಕ್ತ ಸಂಗ್ರಹಣೆ ಮಾಡಿದರು.

ಚಿಕ್ಕಬಳ್ಳಾಪುರದ ರೆಡ್ ಕ್ರಾಸ್ ಸಂಸ್ಥೆಗೆ 70 ಯೂನಿಟ್ ಮತ್ತು ಬೆಂಗಳೂರಿನ ಜಯನಗರದ ಲಯನ್ಸ್ ಕ್ಲಬ್ ರಕ್ತನಿಧಿ ಕೇಂದ್ರಕ್ಕೆ 202 ಯೂನಿಟ್ ರಕ್ತವನ್ನು ನೀಡಲಾಯಿತು.

ರೆಡ್ ಕ್ರಾಸ್ ಸಂಸ್ಥೆ ಕಾರ್ಯದರ್ಶಿ ನಾರಾಯಣರೆಡ್ಡಿ, ಅಖಿಲ ಭಾರತ ಚಿರಂಜೀವಿ ಅಭಿಮಾನಿಗಳ ಸಂಘದ ಅಧ್ಯಕ್ಷ ಸತ್ಯನಾರಾಯಣ ಮಹೇಶ್, ಮೆಗಾ ಫ್ಯಾಮಿಲಿ ಫ್ಯಾನ್ಸ್ ಕ್ಲಬ್ನ ಪಿ.ವಿ.ಸುನಿಲ್, ಅಮರೇಶ್, ಸುರೇಶಸ್ವಾಮಿ, ಸುರೇಶ್ ಆಚಾರಿ, ಪ್ರದೀಪ್, ಜಾಲರಿ ಶ್ರೀನಿವಾಸ್, ಅರುಣಕುಮಾರ್, ಕಲ್ಯಾಣಕುಮಾರ್, ಶೇಖರ್ ಬಾಬು, ಮೋಹನ್, ಹರೀಶ್, ನಾಗರಾಜ್, ದೇವರಾಜ್, ಶರತ್, ಅಮರೇಶ್ವರ್, ನಾಗವಿಕಾಸ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-16-578192656

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.