ಚಿಂತಾಮಣಿ: ತಾಲ್ಲೂಕಿನ ಕಾಗತಿಯಲ್ಲಿರುವ ಜಿಲ್ಲೆಯ ಏಕೈಕ ಮಣ್ಣು ಪರೀಕ್ಷಾ ಕೇಂದ್ರದಲ್ಲಿ ಈ ವರ್ಷ ಸುಮಾರು 10 ಸಾವಿರ ಮಣ್ಣಿನ ಮಾದರಿ ಪರೀಕ್ಷೆ ನಡೆಸಿ ವಿಶ್ಲೇಷಣೆ ಮಾಡಿ ರೈತರಿಗೆ ಮಣ್ಣಿನ ಕಾರ್ಡ್ ವಿತರಿಸುವ ಗುರಿ ಹೊಂದಲಾಗಿದೆ. 2025-26ನೇ ಸಾಲಿನಲ್ಲೂ 10 ಸಾವಿರ ಮಣ್ಣಿನ ಮಾದರಿ ಪರೀಕ್ಷೆ ನಡೆಸಲಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಅನ್ನದಾತರಿಗೆ ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳಲು, ಕೃಷಿ ಭೂಮಿಯಲ್ಲಿ ಮಣ್ಣಿಗೆ ತಕ್ಕ ಬೆಳೆ ಬೆಳೆದು ಉತ್ತಮ ಇಳುವರಿ ಪಡೆಯಲು ಮಣ್ಣು ಪರೀಕ್ಷೆ ಸಹಕಾರಿ. ಅಧಿಕ ರಾಸಾಯನಿಕ ಗೊಬ್ಬರ ಬಳಸದೆ ಮಣ್ಣು ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಗೊಬ್ಬರ ಬಳಸಿ ಮಣ್ಣಿನ ಆರೋಗ್ಯ ಕಾಪಾಡುವುದು ಮತ್ತು ರೈತರ ಅನವಶ್ಯಕ ಖರ್ಚನ್ನು ಕಡಿಮೆಗೊಳಿಸುವುದು ಮಣ್ಣು ಪರೀಕ್ಷೆಯ ಉದ್ದೇಶ.

ಕಾಗತಿಯಲ್ಲಿರುವ ಕೃಷಿ ತರಬೇತಿ ಕೇಂದ್ರದಲ್ಲಿ ಮಣ್ಣು ಪರೀಕ್ಷೆಯ ಪ್ರಯೋಗಾಲಯವಿದೆ. ಕೃಷಿ ಇಲಾಖೆಯಲ್ಲಿ ಇಡೀ ಜಿಲ್ಲೆಗೆ ಇದೊಂದೇ ಮಣ್ಣು ಪರೀಕ್ಷಾ ಕೇಂದ್ರವಾಗಿದೆ. ಕುರುಬೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಒಂದು ಮಣ್ಣು ಪರೀಕ್ಷಾ ಕೇಂದ್ರವಿದೆ. ತಾಲ್ಲೂಕಿನಲ್ಲಿ ಜುವಾರಿ ಮತ್ತು ಕೋರಮಂಡಲ ಕಂಪನಿಯ ಎರಡು ಖಾಸಗಿ ಮಣ್ಣು ಪರೀಕ್ಷಾ ಕೇಂದ್ರಗಳಿವೆ.

ಕೃಷಿ ಇಲಾಖೆ ಅಧಿಕಾರಿಗಳೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ಜಮೀನುಗಳಿಗೆ ತೆರಳಿ ಪ್ರಾತ್ಯಕ್ಷಿಕೆಯ ಮೂಲಕ ಮಣ್ಣು ಸಂಗ್ರಹಣೆ ಮಾಡಿ ಪರೀಕ್ಷಿಸಿ ವರದಿ ನೀಡುತ್ತಿದ್ದಾರೆ. ಇಲ್ಲಿ ಉಚಿತವಾಗಿ ಮಣ್ಣು ಪರೀಕ್ಷೆ ನಡೆಸಲಾಗುತ್ತದೆ. ಪ್ರತಿನಿತ್ಯ ಸುಮಾರು 50 ಸ್ಯಾಂಪಲ್ ಪರೀಕ್ಷೆ ನಡೆಯುತ್ತದೆ. ಸಂಪೂರ್ಣ ವರದಿಯನ್ನು ರೈತರಿಗೆ ಕಾರ್ಡ್ ಮೂಲಕ ವಿತರಿಸಲಾಗುತ್ತದೆ. ವರ್ಷಕ್ಕೆ ಸುಮಾರು 10 ಸಾವಿರ ಮಣ್ಣಿನ ಮಾದರಿಗಳನ್ನು ಪರೀಕ್ಷಿಸುವ ಗುರಿ ಹೊಂದಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಅಮರನಾರಾಯಣರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮಣ್ಣು ಪರೀಕ್ಷೆಯ ಉಪಯೋಗ: ಮಣ್ಣಿನಲ್ಲಿರುವ ರಸಸಾರ (ಹುಳಿ ಮಣ್ಣು ಅಥವಾ ಕ್ಷಾರ ಮಣ್ಣು) ಹಾಗೂ ಲವಣಾಂಶ ಪರಿಮಾಣ ತಿಳಿದು ಅವುಗಳ ಸುಧಾರಣೆಗೆ ಬೇಕಾಗುವ ಸುಣ್ಣ ಅಥವಾ ಜಿಪ್ಸಂ ಪ್ರಮಾಣ ನಿರ್ಧರಿಸಬಹುದು. ಸಾರಜನಕ, ರಂಜಕ, ಪೊಟ್ಯಾಷ್, ಕ್ಯಾಲ್ಸಿಯಂ, ಮೆಗ್ನಿಷಿಯಂ, ಗಂಧಕ, ಸತು, ಬೋರಾನ್, ಕಬ್ಬಿಣ, ತಾಮ್ರ, ಮ್ಯಾಂಗನೀಸ್ ಮತ್ತು ನಿಕ್ಕಲ್ ಲಭ್ಯತೆಯ ಪ್ರಮಾಣ ಹಾಗೂ ಅವುಗಳ ಕೊರತೆಯನ್ನು ವೈಜ್ಞಾನಿಕವಾಗಿ ತಿಳಿದು ರಾಸಾಯನಿಕ ಗೊಬ್ಬರಗಳ ಪ್ರಮಾಣವನ್ನು ನಿಗದಿಪಡಿಸಬಹುದು ಮಣ್ಣು ವಿಜ್ಞಾನಿಗಳು ಹೇಳುತ್ತಾರೆ.

ರೈತರು ಕೃಷಿಯನ್ನು ಲಾಭದಾಯಕವಾಗಿಸಲು, ಉತ್ತಮ ಇಳುವರಿ ಪಡೆಯಲು, ಕೃಷಿಯ ಖರ್ಚನ್ನು ಕಡಿಮೆ ಮಾಡಿಕೊಂಡು ಆರ್ಥಿಕ ಸದೃಢತೆಗೆ ಮಣ್ಣಿನ ಪರೀಕ್ಷಾ ಕೇಂದ್ರ ಪೂರಕ ಎಂದು ರೈತ ಮುನಿರಾಮಪ್ಪ ಹೇಳಿದರು.

ರೈತರಿಗೆ ಮಣ್ಣು ಹಾಗೂ ನೀರಿನ ಗುಣಮಟ್ಟದ ಕುರಿತು ವೈಜ್ಞಾನಿಕ ಮಾಹಿತಿ ಕೊರತೆಯಿಂದ ಅಂದಾಜಿನ ಮೇಲೆ ಗೊಬ್ಬರ ಮತ್ತು ಕೀಟನಾಶಕ ಬಳಕೆ ಮಾಡಿ ಉತ್ಪಾದನಾ ವೆಚ್ಚ ಹೆಚ್ಚು ಮಾಡಿಕೊಂಡು ನಷ್ಟಕ್ಕೆ ಒಳಗಾಗುತ್ತಾರೆ. ಇದರಿಂದ ಭೂಮಿಯ ಫಲವತ್ತತೆಯೂ ಕುಸಿಯುತ್ತದೆ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಅಮರನಾರಾಯಣರೆಡ್ಡಿ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-16-1644392584

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.