ಚಿಂತಾಮಣಿ: ಚಿಂತಾಮಣಿ–ಬೆಂಗಳೂರು ರಸ್ತೆಯಲ್ಲಿ ಟಬೂಬಿಯಾ ರೋಸಿಯಾ ಮರದಲ್ಲಿ ಅರಳಿ ನಿಂತಿರುವ ತಿಳಿ ಗುಲಾಬಿ ಹೂವು ನಗರದ ಸೌಂದರ್ಯವನ್ನು ಹೆಚ್ಚಿಸಿದೆ.

ಬೆಂಗಳೂರು ಡಬಲ್ ರಸ್ತೆ ಓಟಿ ಕೆರೆಯಿಂದ ಬಸ್ ಡಿಪೊವರೆಗೆ ಹಾಗೂ ಚೇಳೂರು ರಸ್ತೆ ಮಧ್ಯೆ ವಿಭಜಕ ಹಾಗೂ ರಸ್ತೆ ಬದಿ ಮರಗಳಲ್ಲಿ ಅರಳಿದ ಹೂವು ಜನರನ್ನು ಆಕರ್ಷಿಸುತ್ತಿವೆ. ಬಿರು ಬೇಸಿಗೆಯಲ್ಲಿ ಪ್ರಯಾಣಿಕರ ಕಣ್ಣು ತಂಪಾಗಿಸುತ್ತಿವೆ. ಹೂಗಳ ರಾಶಿ ಪ್ರಯಾಣಿಕರ ಮನಸ್ಸಿಗೆ ಮುದ ನೀಡುತ್ತಿವೆ. ಈ ಹೂಗಳ ಸೌಂದರ್ಯಕ್ಕೆ ಜನರು ಮಾರುಹೋಗಿದ್ದಾರೆ. ಸೆಲ್ಫಿ ತೆಗೆದುಕೊಳ್ಳುವುದು ಮತ್ತು ವಿಡಿಯೊ ಮಾಡಿಕೊಳ್ಳುತ್ತಿದ್ದಾರೆ.

ಟಬೂಬಿಯಾ ರೋಸಿಯಾವನ್ನು ಗುಲಾಬಿ ಪೌಯಿ ಅಥವಾ ರೋಸಿ ಟ್ರಂಪೆಟ್ ಟ್ರೀ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಚಳಿಗಾಲದ ಕೊನೆ ಅಥವಾ ವಸಂತಕಾಲದ ಜನವರಿ–ಮಾರ್ಚ್ ಅವಧಿಯಲ್ಲಿ ಅರಳುತ್ತವೆ.

ಒಣ ಹವಾಮಾನದಲ್ಲಿ ಎಲೆಗಳನ್ನು ಉದುರಿಸಿ, ಸಂಪೂರ್ಣ ಹೂವುಗಳಿಂದ ಆವೃತವಾಗುತ್ತದೆ. ಇಂತಹ ಮರಗಳು ನಗರದ ಉದ್ಯಾನಗಳು ಮತ್ತು ರಸ್ತೆಬದಿಯ ಸೌಂದರ್ಯೀಕರಣಕ್ಕೆಜನಪ್ರಿಯವಾಗಿವೆ. ಇದು ಮಧ್ಯ ಅಮೆರಿಕದ ಸ್ಥಳೀಯ ಪ್ರಭೇದವಾಗಿದ್ದು, ಉಷ್ಣವಲಯದ ಹವಾಮಾನಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.

ಹೂವುಗಳು ಟ್ರಂಪೆಟ್ ಆಕಾರದಲ್ಲಿರುತ್ತವೆ. ತಿಳಿ ಗುಲಾಬಿ ಅಥವಾ ಮ್ಯಾಗ್ನೋಲಿಯಾ ಬಣ್ಣದಲ್ಲಿರುತ್ತವೆ. ಇದು ಬಿಸಿಲು ಮತ್ತು ಚೆನ್ನಾಗಿ ಬಸಿದುಹೋಗುವ ಮಣ್ಣನ್ನು ಬಯಸುತ್ತದೆ. ಒಣ ಹವಾಮಾನ ಸಹಿಸಿಕೊಳ್ಳುತ್ತದೆ. ಚಿಂತಾಮಣಿ ನಗರ ಸಭೆಯಿಂದ ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರು ಹಾಕಿ ಸಂರಕ್ಷಣೆ ಮಾಡಲಾಗಿದೆ. ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಶ್ರಮ ಇದರ ಹಿಂದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-16-752336343

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.