ಚಿಂತಾಮಣಿ: ಚಿಂತಾಮಣಿ–ಬಟ್ಲಹಳ್ಳಿಯ ಮುಖ್ಯ ರಸ್ತೆಯ ಮಿಂಡಿಗಲ್ ಗೇಟ್ ಬಳಿ ಬುಧವಾರ ಎರಡು ಬೈಕ್ಗಳ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಗಾಯಗೊಂಡಿದ್ದಾರೆ.

ನಗರದ ಜಯಪ್ರಕಾಶ್, ವಿಜೇತ ಮತ್ತು ಇರಗಂಪಲ್ಲಿಯ ಕುಮಾರ್, ನರಸಿಂಹಮೂರ್ತಿ ಗಾಯಾಳುಗಳು. ಈ ಅಪಘಾತದಲ್ಲಿ ಎರಡು ಬೈಕ್ಗಳು ಸಂಪೂರ್ಣವಾಗಿ ಜಖಂಗೊಂಡಿವೆ.

ಜಯಪ್ರಕಾಶ್ ಮತ್ತು ವಿಜೇತ ಇರಗಂಪಲ್ಲಿಯಿಂದ ಚಿಂತಾಮಣಿಗೆ ಬರುತ್ತಿದ್ದರು. ಮಿಂಡಿಗಲ್ ಗೇಟ್ ಬಳಿ ಎದುರಿನಿಂದ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಮಿಂಡಿಗಲ್ನಿಂದ ಬರುತ್ತಿದ್ದ ಕುಮಾರ್ ಮತ್ತು ನರಸಿಂಹಮೂರ್ತಿ ಅವರ ಅತಿವೇಗ ಮತ್ತು ಅಜಾಗರೂಕತೆಯಿಂದಲೇ ಈ ಅಪಘಾತ ಸಂಭವಿಸಿದೆ ಎಂದು ಜಯಪ್ರಕಾಶ್ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸುತ್ತಮುತ್ತಲಿನ ಜನರು ಗಾಯಾಳುಗಳನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-16-1652974817

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.