ಚಿಂತಾಮಣಿ: ಚಿಂತಾಮಣಿ ನಗರಸಭೆಯು ನಗರದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಕಾಲೊನಿಗಳಿರುವ ನಾಲ್ಕು ವಾರ್ಡ್ಗಳಲ್ಲಿ ಪ್ರತಿನಿತ್ಯ, 17 ವಾರ್ಡ್ಗಳಲ್ಲಿ 2–3 ದಿನಗಳಿಗೆ ಒಮ್ಮೆ, 10 ವಾರ್ಡ್ಗಳಲ್ಲಿ 5 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ ಎಂದು ನಗರಸಭೆ ಮಾಹಿತಿ ನೀಡಿದೆ.

ನಗರಕ್ಕೆ ಕೊಳವೆ ಬಾವಿಗಳಿಂದ ಹಾಗೂ ಭಕ್ತರಹಳ್ಳಿ ಅರಸನಕೆರೆ ಮತ್ತು ಕನಂಪಲ್ಲಿ ಕೆರೆ ನೀರನ್ನು ಶುದ್ಧೀಕರಿಸಿ ಪೂರೈಸಲಾಗುತ್ತಿದೆ. ಕನಂಪಲ್ಲಿ ಕೆರೆಯಲ್ಲಿ ಇನ್ನೂ 3 ತಿಂಗಳಿಗೆ ಆಗುವಷ್ಟು, ಭಕ್ತರಹಳ್ಳಿ ಅರಸನಕೆರೆಯಲ್ಲಿ 6 ತಿಂಗಳಿಗೆ ಆಗುವಷ್ಟು ನೀರಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ನೀರಿಗಾಗಿ ಟ್ಯಾಂಕರ್ ಮತ್ತು ಖಾಸಗಿ ಕೊಳವೆ ಬಾವಿಗಳ ಮೊರೆ ಹೋಗುವ ಅನಿವಾರ್ಯತೆ ಎದುರಾಗಿಲ್ಲ.

ಅಂತರ್ಜಲ ವೃದ್ಧಿಯಾಗಿದ್ದು, ಕೊಳವೆ ಬಾವಿಗಳಿಂದಲೂ ಹೆಚ್ಚಿನ ನೀರು ದೊರೆಯುತ್ತಿದೆ. 1300–1500 ಅಡಿ ಆಳದಲ್ಲಿ ದೊರೆಯುತ್ತಿದ್ದ ನೀರು ಈಗ 400-500 ಅಡಿಗೆ ದೊರೆಯುತ್ತಿದೆ. ನಗರಕ್ಕೆ ನೀರು ಪೂರೈಕೆಯಾಗುತ್ತಿರುವ 2 ಕೆರೆಗಳಲ್ಲೂ ನೀರಿದೆ. ಕೊಳವೆ ಬಾವಿಗಳಲ್ಲೂ ಹೆಚ್ಚಿನ ನೀರು ದೊರೆಯುತ್ತಿರುವುದರಿಂದ ಈ ಬೇಸಿಗೆಯಲ್ಲಿ ಯಾವುದೇ ನೀರಿನ ಸಮಸ್ಯೆ ಇಲ್ಲ ಎಂದು ನಗರಸಭೆ ಆಯುಕ್ತ ಜಿ.ಎನ್.ಚಲಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಒಂದು ವೇಳೆ ನೀರಿಗೆ ಸಂಕಷ್ಟದ ಪರಿಸ್ಥಿತಿ ಉದ್ಭವಿಸಿದರೆ ಎದುರಿಸಲು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 15ನೇ ಹಣಕಾಸು ಯೋಜನೆಯಲ್ಲಿ 16 ಕೊಳವೆ ಬಾವಿ ಕೊರೆಯಲಾಗಿದೆ. ಅವುಗಳಿಗೆ ಪಂಪು ಮತ್ತು ಮೋಟಾರು ಅಳವಡಿಸಲಾಗುತ್ತಿದೆ. ₹20 ಲಕ್ಷ ವೆಚ್ಚದಲ್ಲಿ ಹೆಚ್ಚುವರಿ 11 ಪಂಪು ಮತ್ತು ಮೋಟಾರುಗಳನ್ನು ಖರೀದಿಸಿ ಮೀಸಲಿಡಲಾಗಿದೆ. ಯಾವುದೇ ಕೊಳವೆ ಬಾವಿಯ ಮೋಟಾರು ಕೆಟ್ಟರೂ ಕೂಡಲೇ ಮೀಸಲಿನಲ್ಲಿರುವ ಮೋಟಾರ್ ಅಳವಡಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ಚಿಂತಾಮಣಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದಾರೆ.

ತಾಲ್ಲೂಕು ಪಂಚಾಯಿತಿ ಹಿಂಭಾಗದಲ್ಲಿ 10 ಲಕ್ಷ ಲೀಟರ್ ಸಂಗ್ರಹದ ಮೇಲಂತಸ್ತಿನ ಟ್ಯಾಂಕ್ ಮತ್ತು ಕ್ರೀಡಾಂಗಣದ ಹಿಂಭಾಗದಲ್ಲಿ ನಾಲ್ಕು ಗುಂಟೆ ಜಾಗವನ್ನು ನಗರಸಭೆಗೆ ಕೊಡಿಸಿದ್ದಾರೆ. ಅಲ್ಲಿ ಹೆಚ್ಚು ನೀರು ಸಂಗ್ರಹಣೆ ಮಾಡುವ ನೆಲ ಅಂತಸ್ತಿನ (ಜಿ.ಎಲ್.ಎಸ್.ಆರ್) ಟ್ಯಾಂಕ್ ನಿರ್ಮಿಸಲಾಗುವುದು. ಭಕ್ತರಹಳ್ಳಿ ಅರಸನ ಕೆರೆಯ ಕೆಳಭಾಗದಲ್ಲಿ ₹35 ಕೋಟಿ ವೆಚ್ಚದಲ್ಲಿ ನೂತನ ಕೆರೆ ನಿರ್ಮಾಣ, ₹30 ಕೋಟಿ ವೆಚ್ಚದಲ್ಲಿ ಕನಂಪಲ್ಲಿ ಕೆರೆಯ ನೀರಿನ ಸಂಗ್ರಹಣೆ ಸಾಮರ್ಥ್ಯ ಹೆಚ್ಚಿಸುವುದು. ₹80 ಕೋಟಿ ವೆಚ್ಚದಲ್ಲಿ ನಗರದ ನೆಕ್ಕುಂದಿ ಕೆರೆಯನ್ನು ಪುನರುಜ್ಜೀವನಗೊಳಿಸಿ ಕುಡಿಯುವ ನೀರಿಗೆ ಬಳಕೆ ಮಾಡಿಕೊಳ್ಳುವ ಯೋಜನೆಗಳನ್ನು ಮಂಜೂರು ಮಾಡಿಸಿದ್ದಾರೆ ಎಂದು ಪೌರಾಯುಕ್ತರು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-16-1963767281

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.