ಚಿಕ್ಕಬಳ್ಳಾಪುರ: ಸರ್ವರಿಗೂ ಹಕ್ಕು, ಶಕ್ತಿ ನೀಡಿದ್ದು ಸಂವಿಧಾನ: ಸು.ಧಾ.ವೆಂಕಟೇಶ್

ಚಿಕ್ಕಬಳ್ಳಾಪುರ: ತಾಲ್ಲೂಕಿನ ಅರಸನಹಳ್ಳಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.
ಸಮಿತಿ ರಾಜ್ಯ ಸಂಚಾಲಕ ಸು.ಧಾ.ವೆಂಕಟೇಶ್ ಮಾತನಾಡಿ, ಎಲ್ಲ ವರ್ಗದ ಜನರಿಗೂ ಅನುಕೂಲವಾಗುವ ರೀತಿಯಲ್ಲಿ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದರು. ಸಂವಿಧಾನವು ವ್ಯಕ್ತಿ, ವಾಕ್ ಸ್ವಾತಂತ್ರ್ಯ ಸೇರಿದಂತೆ ಎಲ್ಲ ಬಗೆಯ ಸ್ವಾತಂತ್ರ್ಯವನ್ನು ಎಲ್ಲ ವರ್ಗದ ಜನರಿಗೂ ನೀಡಿದೆ ಎಂದು ಹೇಳಿದರು.
ಅಂಬೇಡ್ಕರ್ ಅವರ ಸಂವಿಧಾನ ಯಾವುದೇ ಒಂದು ವರ್ಗದ ಪರವಾಗಿ ಇಲ್ಲ. ಸಮಗ್ರ ದೇಶದ ಅಭಿವೃದ್ಧಿ ಮತ್ತು ತುಳಿತಕ್ಕೆ ಒಳಗಾದ ಸಮುದಾಯಗಳು ಏಳಿಗೆಯ ದೃಷ್ಟಿಯನ್ನು ಸಂವಿಧಾನ ಹೊಂದಿದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಬೇಕಾದರೆ ಸಂವಿಧಾನದ ಆಶಯಗಳು ಪಾಲನೆ ಆಗಬೇಕು ಎಂದರು.
ಸಮಿತಿ ಮುಖಂಡರಾದ ನಾಗೇಶ್, ಸೂಲಿಕುಂಟೆ ವೆಂಕಟೇಶ, ಸತೀಶ್,ಮುನಿರಾಜು , ಡೇವಿಡ್, ಮುನಿಕೃಷ್ಣ, ವೆಂಕಟರಾಮು, ಟೈಲರ್ ಸತಿ, ಪವನ್, ಗಜೇಂದ್ರ, ಅರಸನಹಳ್ಳಿ ಮಂಜುನಾಥ್, ಸಾಗರಹಲ್ಲಿ ಮುನಿಕೃಷ್ಣ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.