ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: 9ನೇ ವಾರ್ಡ್ ಸೀಲ್‌ಡೌನ್ ಸಡಿಲ

Last Updated 25 ಮೇ 2020, 2:55 IST
ಅಕ್ಷರ ಗಾತ್ರ

ಚಿಂತಾಮಣಿ: ನಗರದ 9ನೇ ವಾರ್ಡ್‌ನ ಒಂದೇ ಕುಟುಂಬದಲ್ಲಿ 5 ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ ಸೀಲ್‌ಡೌನ್ ಮಾಡಿದ್ದ ಪ್ರದೇಶವನ್ನು ಭಾನುವಾರದಿಂದ ಸಡಿಲಗೊಳಿ ಸಲಾಗಿದ್ದು, ಜನತೆ ನಿಟ್ಟುಸಿರು ಬಿಡುವಂತಾಗಿದೆ.

ಮೇ 9ರಂದು ಕುಟುಂಬದ ಹಿರಿಯ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿತ್ತು. ನಂತರ ಅದೇ ಕುಟುಂಬದ 4 ಜನರಿಗೆ ಸೋಂಕು ಹರಡಿತ್ತು. ಜಿಲ್ಲಾಡಳಿತ 9ನೇ ವಾರ್ಡ್ ಅನ್ನು ಸೀಲ್ ಡೌನ್ ಮಾಡಿತ್ತು. ಸೋಂಕಿತರ ಮನೆಗಳಿಗೆ ಹಾಗೂ ಅಂಗಡಿಯಲ್ಲಿ ಸಂಪರ್ಕಕ್ಕೆ ಬಂದಿದ್ದವರ ಗಂಟಲು ದ್ರವವನ್ನು ಎರಡು ಬಾರಿ ತಪಾಸಣೆ ಮಾಡಲಾಗಿತ್ತು. ಎಲ್ಲರ ವರದಿ ನೆಗೆಟಿವ್ ಬಂದಿದೆ.

ಸೀಲ್‌ಡೌನ್‌ನಿಂದ ಸುಮಾರು 300 ಮನೆಗಳ ಜನರಿಗೆ ತೊಂದರೆಯಾಗಿತ್ತು. 14 ದಿನ ಕ್ವಾರಂಟೈನ್ ಅವಧಿ ಮುಗಿದಿದೆ, ಜತೆಗೆ ಯಾರಿಗೂ ಪಾಸಿಟಿವ್ ಬರದಿರುವುದರಿಂದ ಸೀಲ್‌ಡೌನ್ ಸಡಿಲಗೊಳಿಸಬೇಕು ಎಂದು ಆ ಪ್ರದೇಶದ ಜನರು ಒತ್ತಾಯಿಸಿದ್ದರು.

ಜನರ ಮನವಿ ಪರಿಶೀಲಿಸಿದ ಅಧಿಕಾರಿಗಳು, ಸೋಂಕು ತಗುಲಿದ ಮನೆಯ ರಸ್ತೆಗೆ ಮಾತ್ರ ಸೀಲ್‌ಡೌನ್‌ ಸೀಮಿತಗೊಳಿಸಿದರು. 15 ದಿನಗಳಿಂದ ಮನೆಗಳಿಂದ ಹೊರಬರದೆ, ವ್ಯಾಪಾರ ವಹಿವಾಟು ನಡೆಸಲು ತೊಂದರೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT