ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಕುಟುಂಬದ ಮತ್ತೊಬ್ಬರಿಗೆ ಕೊರೊನಾ ಸೋಂಕು

ಸೋಂಕಿತರ ಸಂಖ್ಯೆ 6 ಕ್ಕೆ ಏರಿಕೆ
Last Updated 29 ಮೇ 2020, 16:45 IST
ಅಕ್ಷರ ಗಾತ್ರ

ಚಿಂತಾಮಣಿ: ನಗರದ 9ನೇ ವಾರ್ಡ್‌ನ ಕೊರೊನಾ ಸೋಂಕಿತರ ಕುಟುಂಬದ ಮತ್ತೊಬ್ಬ ವ್ಯಕ್ತಿಗೆ ಶುಕ್ರವಾರ ಸೋಂಕು ದೃಢಪಟ್ಟಿದ್ದು, ಚಿಕ್ಕಬಳ್ಳಾಪುರದ ಕೋವಿಡ್- 19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕುಟುಂಬದ 71 ವರ್ಷ ವ್ಯಕ್ತಿಗೆ ಮೇ 9ರಂದು ಸೋಂಕು ಕಂಡುಬಂದಿತ್ತು. 20 ದಿನಗಳ ನಂತರ ಅವರ 17 ವರ್ಷದ ಮೊಮ್ಮಗ (ಮಗಳ ಮಗ)ನಿಗೆ ಸೋಂಕು ಕಾಣಿಸಿದ್ದು, ಒಂದೇ ಕುಟುಂಬದ 6 ಜನ ಸೋಂಕಿತರಾಗಿದ್ದಾರೆ.

ಸೋಂಕಿತ ವ್ಯಕ್ತಿಯ ಮಗ ಗುರುವಾರ ಗುಣಮುಖರಾಗಿ ಕೋವಿಡ್‌ ಆಸ್ಪತ್ರಯಿಂದ ಬಿಡುಗೆಯಾಗಿದ್ದರು. ನಗರದ ಆಸ್ಪತ್ರೆಯ ಕ್ವಾರಂಟೈನ್‌ನಲ್ಲಿ ಇದ್ದ ಸೊಸೆ ಮತ್ತು ಮೊಮ್ಮಗನಿಗೆ ಈಗಾಗಲೇ 3 ಬಾರಿ ನಡೆಸಲಾಗಿದ್ದ ತಪಾಸಣೆಯಲ್ಲಿ ನೆಗೆಟಿವ್ ಬಂದಿತ್ತು. ನಾಲ್ಕನೇ ಬಾರಿಯ ತಪಾಸಣೆಯಲ್ಲಿ ಮೊಮ್ಮಗನಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ.

ಇದರಿಂದ ಕುಟುಂಬ ಹಾಗೂ ನಾಗರಿಕರಲ್ಲಿ ಆತಂಕ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT