ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟದ ವ್ಯಕ್ತಿಗೆ ಕೋವಿಡ್‌?

Last Updated 30 ಮೇ 2020, 16:53 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಇದುವರೆಗೂ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕೊರೊನಾ ಬರದೇ ಗ್ರೀನ್ ಜೋನ್ ಆಗಿತ್ತು. ಆದರೆ ಇದೀಗ ಶಿಡ್ಲಘಟ್ಟದ ನಿವಾಸಿಯೊಬ್ಬರಿಗೆ ಕೊರೊನಾ ಪಾಸಿಟೀವ್ ಆಗಿದೆ ಎಂದು ಮೂಲಗಳು ತಿಳಿಸಿವೆ.

ಇಬ್ಬರು ಶಿಡ್ಲಘಟ್ಟದ ನಿವಾಸಿಗಳು ಅಜ್ಮೇರ್‌ಗೆ ಹೋಗಿದ್ದರು. ಲಾಕ್‌ಡೌನ್ ಮುಂಚೆ ಹೋದ ಅವರು ಲಾಕ್‌ಡೌನ್ ಆದಾಗ ಅಲ್ಲಿಯೇ ಉಳಿದುಬಿಟ್ಟಿದ್ದರು. ಮೇ 22ರಂದು ಅವರು ಬೆಂಗಳೂರಿಗೆ ಬಂದ ಅವರನ್ನು ಏಳು ದಿನಗಳ ಕಾಲ ಕ್ವಾರಂಟೈನ್ ಮಾಡಲಾಗಿದೆ. ಅವರಲ್ಲಿ ಒಬ್ಬರಿಗೆ ಕೊರೊನಾ ನೆಗೆಟೀವ್ ಆಗಿದ್ದರೆ, ಮತ್ತೊಬ್ಬರಿಗೆ ಪಾಸಿಟೀವ್ ಎಂದು ವರದಿ ಬಂದಿದೆ.

ಹಾಗಾಗಿ ಅವರನ್ನು ಬೆಂಗಳೂರಿನ ಕ್ವಾರಂಟೈನ್ ಕೇಂದ್ರದಿಂದ ಕಳುಹಿಸಿದೊಡನೆ ಇಲ್ಲಿ ಕ್ವಾರಂಟೈನ್ ಮಾಡುವರು ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT