ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿ.ಪಂ ಅಧಿಕಾರಿಗಳಿಂದ ಭ್ರಷ್ಟಾಚಾರ’

ಗ್ರಾ.ಪಂ ಸಿಬ್ಬಂದಿಗೆ ಮುಂಬಡ್ತಿ; ಎಸಿಬಿಗೆ ಪ್ರಜಾ ಸಂಘರ್ಷ ಸಮಿತಿ ದೂರು
Last Updated 8 ಆಗಸ್ಟ್ 2022, 4:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಸಿಬ್ಬಂದಿಗೆ ಮುಂಬಡ್ತಿ ನೀಡುವ ವಿಚಾರವಾಗಿ ದೊಡ್ಡ ಹಗರಣ ನಡೆದಿದೆ. ದಾಖಲೆಗಳನ್ನು ತಿದ್ದಿರುವುದು, ನಡಾವಳಿಗಳನ್ನು ತಿದ್ದುವುದು, ಅಧಿಕಾರಿಗಳು ತಮಗೆ ಇಷ್ಟಬಂದವರ ಹೆಸರುಗಳನ್ನು ಸೇರಿಸಿ ಮುಂಬಡ್ತಿಗೆ ಶಿಫಾರಸು ಮಾಡಿರುವುದು ಸೇರಿದಂತೆ ವ್ಯಾಪಕವಾದ ಭ್ರಷ್ಟಾಚಾರ ನಡೆದಿದೆ.

ಮುಂಬಡ್ತಿಗೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಂಡು ಸಮಗ್ರ ತನಿಖೆ ನಡೆಸಬೇಕು ಎಂದು ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಹ ಸಂಚಾಲಕ ಆರ್.ಎನ್.ರಾಜು, ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮನವಿ ಸಲ್ಲಿಸಿದ್ದಾರೆ.ಸುದೀರ್ಘ 15 ಪುಟಗಳ ಮನವಿ ಪತ್ರ ನೀಡಿರುವ ಅವರು, ದಾಖಲೆಗಳನ್ನು ಸಹ ನೀಡಿದ್ದಾರೆ.

ಮುಂಬಡ್ತಿಗೆ ಸಂಬಂಧಿಸಿದಂತೆ ಹಣವನ್ನು ಸಂಗ್ರಹಿಸಲಾಗಿದೆ. ದಾಖಲೆಗಳನ್ನು ತಿದ್ದಲಾಗಿದೆ. ಜಿ.ಪಂ ಸಿಇಒ ಶಿವಶಂಕರ್, ಉಪಕಾರ್ಯದರ್ಶಿ ಶಿವಕುಮಾರ್, ವಿಷಯ ನಿರ್ವಾಹಕರಾದ ಗಂಗರಾಜು, ಮದನ್ ವಿರುದ್ಧ ಕಾನೂನು ಕ್ರಮವಹಿಸಬೇಕು. ಇವರಿಗೆ ಸಂಬಂಧಿಸಿದ ಮೂಲದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಂಡು ತನಿಖೆ ನಡೆಸಬೇಕು ಎಂದು ಕೋರಿದ್ದಾರೆ.

ಹೆಚ್ಚಿನ ಹಣ ನೀಡುವವರಿಗೆ ಮುಂಬಡ್ತಿ ನೀಡಲು ಮುಂದಾಗಿದ್ದಾರೆ. ಮುಂಬಡ್ತಿಗಾಗಿ ಹಣ ಸಹ ಸಂಗ್ರಹಿಸಿದ್ದಾರೆ. ಪಿಎಸ್‌ಐ ಹಗರಣಕ್ಕಿಂತಲೂ ದೊಡ್ಟ ಮಟ್ಟದ ಹಗರವನ್ನು ಜಿ.ಪಂ ಅಧಿಕಾರಿಗಳು ನಡೆಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಎಸಿಬಿ ಅಧಿಕಾರಿಗಳಿಗೆ 15 ಪುಟಗಳ ಪತ್ರವನ್ನು ರಾಜು ಬರೆದಿದ್ದಾರೆ. ಆ ಪತ್ರದಲ್ಲಿ ಯಾವ ಪಂಚಾಯಿತಿಯಲ್ಲಿ ಯಾವ ರೀತಿಯಲ್ಲಿ ಅವ್ಯವಹಾರಗಳು ನಡೆದಿವೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ.ಪತ್ರದ ಜತೆ ಸಿಡಿ, ಚಿತ್ರಗಳನ್ನು ಎಸಿಬಿಗೆ ಸಲ್ಲಿಸಿರುವುದು ಅವರ ಪತ್ರದಿಂದ ತಿಳಿದು ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT