ಸಿಲಿಂಡರ್‌ ಸ್ಫೋಟ: ನೆರೆಹೊರೆಯ ನಾಲ್ಕು ಮನೆಗಳಿಗೂ ಆವರಿಸಿಕೊಂಡ ಬೆಂಕಿ

7
ಐದು ಮನೆಗಳು ಬೆಂಕಿಗೆ ಆಹುತಿ

ಸಿಲಿಂಡರ್‌ ಸ್ಫೋಟ: ನೆರೆಹೊರೆಯ ನಾಲ್ಕು ಮನೆಗಳಿಗೂ ಆವರಿಸಿಕೊಂಡ ಬೆಂಕಿ

Published:
Updated:

ಗೌರಿಬಿದನೂರು: ತಾಲ್ಲೂಕಿನ ಮುದ್ದಲೊಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣಿವಾಲ ಗ್ರಾಮದಲ್ಲಿ ಶನಿವಾರ ಸಂಜೆ ಮನೆಯೊಂದರಲ್ಲಿ ಬೆಂಕಿ ತಗುಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಅಕ್ಕಪಕ್ಕದ ಐದು ಮನೆಗಳು ಸಂಪೂರ್ಣ ಭಸ್ಮವಾಗಿವೆ.

ಮಣಿವಾಲ ನಿವಾಸಿ ಆನಂದ್ ಅವರ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಆನಂದ್‌ ಅವರ ಸಹೋದರರಿಗೆ ಸೇರಿದ ಐದು ಮನೆಗಳು ಬೆಂಕಿಗೆ ಆಹುತಿಯಾಗಿವೆ. ಮನೆಗಳಲ್ಲಿದ್ದ ದಿನಬಳಕೆ ವಸ್ತುಗಳು ಮತ್ತು ಗೃಹ ಬಳಕೆ ಉಪಕರಣಗಳು ಸುಟ್ಟು ಕರಕಲಾಗಿವೆ.

ಈ ಅವಘಡದ ವೇಳೆ ಮನೆಗಳಲ್ಲಿ ಯಾರ ಇರಲಿಲ್ಲ. ಹೀಗಾಗಿ ಯಾರಿಗೂ ಪ್ರಾಣಾಪಾಯವಾಗಿಲ್ಲ. ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದರು ಎಂದು ಪೊಲೀಸರು ತಿಳಿಸಿದರು.

ಈ ಘಟನೆಯಿಂದ ಗ್ರಾಮದ ಆನಂದ್, ಆದಿನಾರಾಯಣಪ್ಪ, ಶ್ರೀನಿವಾಸ್, ನಾರಾಯಣಸ್ವಾಮಿ, ವೆಂಕಟ ಲಕ್ಷ್ಮಮ್ಮ ಎಂಬುವವರ ಸೇರಿದಂತೆ ಸುಮಾರು 20 ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !